ಮಹತ್ವಾಕಾಂಕ್ಷೆ ತಾಲೂಕು ಯಶಸ್ಸಿಗೆ ಕೈಜೋಡಿಸಿ : ಸಹಾಯಕ ನಿರ್ದೇಶಕ ಶಿವಾನಂದರಡ್ಡಿ ಸಲಹೆ

ಮಸ್ಕಿ : ಕೇಂದ್ರ ಸರ್ಕಾರ ಮಸ್ಕಿ ಮತ್ತು ಸಿರವಾರ ತಾಲೂಕನ್ನು ಮಹತ್ವಾಕಾಂಕ್ಷೆ ತಾಲೂಕನ್ನಾಗಿ ಘೋಷಿಸಿದ್ದು, ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮಸ್ಕಿ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಸಲಹೆ ನೀಡಿದರು.

ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಗುರುವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ (ಉನ್ನತಿ ಕಾರ್ಯಕ್ರಮ) 2018-19 ನೇ ಸಾಲಿನಲ್ಲಿ 100 ದಿನ ನರೇಗಾ ಕೆಲಸ ನಿರ್ವಹಿಸಿದ ಮಹಿಳಾ ಕೂಲಿಕಾರರಿಗೆ 10 ದಿನಗಳ ಕಾಲ ಏರ್ಪಡಿಸಿದ್ದ ಹೈನುಗಾರಿಕೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಯರು ಇಂದು ಕುಟುಂಬ ನಿರ್ವಹಣೆಗೆ ಸೀಮಿತವಾಗಿಲ್ಲ. ಸರ್ಕಾರ ಜಾರಿಗೊಳಿಸಿದ ಅನೇಕ ಯೋಜನೆಗಳಿಂದ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಹಣ ಉಳಿತಾಯ ಮಾಡಿ, ಕುಟುಂಬದ ಕಷ್ಟ ಕಾಲದಲ್ಲಿ ನೆರವಾಗುತ್ತಿದ್ದಾಳೆ. ಹೈನುಗಾರಿಕೆ ಉದ್ಯಮ ಮಹಿಳೆಯರನ್ನು ಅವಲಂಬಿಸಿದೆ. ಪಶು ವೈದ್ಯರು, ಪಶು ಸಖಿಯರ ಮಾರ್ಗದರ್ಶನದಲ್ಲಿ ಹೈನುಗಾರಿಕೆ ಕೈಗೊಂಡರೆ, ಲಾಭ ಕಂಡುಕೊಳ್ಳಬಹುದು. ಮಹತ್ವಾಕಾಂಕ್ಷೆ ತಾಲೂಕು (ಎಬಿಪಿ) ಕಾರ್ಯಕ್ರಮದಡಿ ಮಕ್ಕಳ ಪೌಷ್ಟಿಕತೆ, ಆರೋಗ್ಯ ಸುಧಾರಣೆ, ಮಹಿಳೆಯರ ಸಬಲೀಕರಣ, ಸುಸ್ಥಿರ ಆದಾಯ ತಂದುಕೊಡುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.

ಎನ್ ಆರ್ ಎಲ್ಎಂ ವಲಯ ಮೇಲ್ವಿಚಾರಕ ಪ್ರಕಾಶ್ ಮಾತನಾಡಿ, ತರಬೇತಿ ಕಾರ್ಯಾಗಾರದಲ್ಲಿ ವಿಷಯ ತಜ್ಞರು ಸಮಗ್ರವಾಗಿ ಮಾಹಿತಿ ನೀಡಿದ್ದಾರೆ. ಸಾಲ ಮಂಜೂರಾತಿ ಸೇರಿ ಪಶು ಸಾಕಣೆಗೆ ಕಾಲ ಕಾಲಕ್ಕೆ ಅಗತ್ಯ ಇರುವ ಮಾಹಿತಿ ನೀಡಿ ಸದಾ ಸಹಕಾರ ಒದಗಿಸಲಾಗುವುದು ಎಂದರು.

ಈ ವೇಳೆ ಗುಡದೂರು ಗ್ರಾಪಂ ಉಪಾಧ್ಯಕ್ಷೆ ಸರೋಜಾ, ಆರ್ ಸೆಟ್ ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರ್, ತರಬೇತುದಾರರಾದ ಬಸವರಾಜ್ ಬೆಲ್ಲದ್, ಗುಡದೂರು ಶ್ರೀ ಅಂಬಾ ದೇವಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ಪಾರ್ವತಮ್ಮ, ಗುಡದೂರು ಗ್ರಾಪಂ ದ್ವಿತೀಯ ದರ್ಜೆ ಸಹಾಯಕಿ ಅನಿಸಾ ಫಾತೀಮಾ, ಬಿಆರ್ಪಿ ಭವಾನಿ, ಎಂಬಿಕೆ ಶಿವಲಿಂಗಮ್ಮ, ಪಶು ಸಖಿ ಫರೀದಾ ಬೇಗಂ, ಎಲ್ ಸಿ ಆರ್ ಜಯಶ್ರೀ ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*