ವಿಭಜಕ ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಮಸ್ಕಿ ಪ್ರಗತಿಪರ ಸಂಘಟನೆ ಒಕ್ಕೂಟ ಆಗ್ರಹ

ಮಸ್ಕಿ : ಪಟ್ಟಣದಲ್ಲಿ ಕೈಗೊಂಡಿರುವ ರಸ್ತೆ ವಿಭಜಕ ಮತ್ತು ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು

ಪ್ರಗತಿಪರ ಒಕ್ಕೂಟ ಸಂಘಟನೆ ಮಸ್ಕಿ ವತಿಯಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನುಗುಂದ ಇವರಿಗೆ ಮನವಿಯನ್ನು ಸೋಮನಗೌಡ ಇವರ ಮೂಲಕ ಸಲ್ಲಿಸಲಾಯಿತು.

ಮಸ್ಕಿ ಪಟ್ಟಣದ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗಿನ ಕಾಮಗಾರಿ ನಿರ್ವಹಣೆಗೆ ಮಾಡುತ್ತಿರುವ ಗುತ್ತೇದಾರರು ಅಂದಾಜು ಪತ್ರಿಕೆಯ ನಿಯಮಗಳನ್ನು ಉಲ್ಲಂಘಿಸಿ, ಕಳಪೆ ಮಟ್ಟದ ಸಿಮೆಂಟ್ ಮತ್ತು ಅಗತ್ಯ ಪ್ರಮಾಣದ ಕಬ್ಬಿಣದ ಸರಳುಗಳನ್ನು ಬಳಸದೇ ಹಾಗೂ ಕಪ್ಪು ಮಣ್ಣು ಇರುವ ಸ್ಥಳಗಳನ್ನು ಮರಮ್ ಬಳಸದೇ ಮತ್ತು ಅಗತ್ಯಕ್ಕೆ ತಕ್ಕಂತೆ ನೀರಿನ ಕ್ಯೂರಿಂಗ್ ಮಾಡದೆ ಇರುವುದರಿಂದಾಗಿ ಕಾಮಗಾರಿಯ ಪ್ರಾರಂಭದ ಹಂತದಲ್ಲಿ ಚರಂಡಿ ಕಾಮಗಾರಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದನ್ನು ಗಮನಿಸಿದರೆ ಈ ಕಾಮಗಾರಿ ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಿಂದಾಗಿ ಚರಡಿ ಕಾಮಗಾರಿಯು ಹೆಚ್ಚುದಿನ ಬಾಳಿಕೆ ಬರುವುದಿಲ್ಲ ಅಲ್ಲದೆ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಪೊಲಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಜರುಗಿಸದೇ ಇರುವ ತಮ್ಮ ಮೇಲೆ ಹಲವು ಅನುಮಾನಕ್ಕೆ ಎಡೆಮಾಡಿದೆ. ಅಲ್ಲದೆ ಕಾಮಗಾರಿಯ ಸ್ಥಳದಲ್ಲಿ ಅಧಿಕಾರಿಗಳ ಅನುಪಸ್ಥಿತಿಯ ಲಾಭ ಪಡೆದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಲೂಟಿ ಮಾಡಲು ಮುಂದಾಗಿದ್ದಾರೆ.

ಆದ್ದರಿಂದ ಆದಷ್ಟೂ ಬೇಗನೆ ತಾವುಗಳು ಕೂಲಂಕುಷವಾಗಿ ತನಿಖೆ ಮಾಡಿ ಕಳಪೆಯಾಗಿರುವ ಕಾಮಗಾರಿಯನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು ಮತ್ತು ಕಾಮಗಾರಿಯ ಪ್ರತಿ ಹಂತದಲ್ಲಿ ಗುಣಮಟ್ಟ ಪರೀಕ್ಷೆಯನ್ನು ಮಾಡಿಸಬೇಕೆಂದು ಪ್ರಗತಿಪರ ಸಂಘಟನೆಗಳು ಮಸ್ಕಿ ವತಿಯಿಂದ ಒತ್ತಾಯಿಸುತ್ತೇವೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ವಾರದ ಒಳಗಡೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಠಾವದಿ ಹೋರಾಟ ಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ತಾಲೂಕ ಅಧ್ಯಕ್ಷರುಗಳಾದ ಅಶೋಕ ಮುರಾರಿ, ಆರ್.ಕೆ ನಾಯಕ,ದುರುಗರಾಜ ವಟಗಲ್, ಕಿರಣ ವಿ ಮುರಾರಿ, ವಿಜಯ್‌ ಕುಮಾರ ಬಡಿಗೇರ,ಸಿದ್ದು ಮುರಾರಿ, ಬಸವರಾಜ ಡಿ.ಉದ್ಬಾಳ,ಮಲ್ಲಿಕ್ ಕೊಠಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*