ನಗರ ಠಾಣೆ ಪಿ ಐ ವಿರುದ್ಧ ಕ್ರಮಕ್ಕೆ ಅಗ್ರಹ.

 ವರದಿ - ಮಂಜುನಾಥ್ ಕೋಳೂರು, ಕೊಪ್ಪಳ

 ಕೊಪ್ಪಳ : ಗಂಗಾವತಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹೆಡ್ ಕಾನ್ಸಟೆಬಲ್ ಒರ್ವರನ್ನು ಹೊತ್ತು ಕುಣಿದ ವಿಡಿಯೋ ವೈರಲ್ ಆದ ನಂತರ ಅಂಥದ್ದೇ ಘಟನೆಯ ವಿಡಿಯೋ ಆಧಾರದಲ್ಲಿ ನಗರ ಠಾಣೆ ಪಿಐ ಸಂತೋಷ ಹಳ್ಳೂರ ವಿರುದ್ದ ಕ್ರಮಕ್ಕೆ ಕೊಪ್ಪಳ ಎಸ್.ಪಿ ಯವರಿಗೆ ಮನವಿ ಸಲ್ಲಿಕೆಯಾಗಿದೆ.

 ಕೊಪ್ಪಳ ನಗರದಲ್ಲಿ ಅಕ್ಟೋಬರ್ 3 ರಂದು ಹಿಂದು ಮಹಾಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ನಗರ ಠಾಣೆ ಪಿಐ ಸಂತೋಷ ಹಳ್ಳೂರ ಅವರನ್ನು ಕೆಲ ಜನ ಹೊತ್ತು ಕುಣಿದಿದ್ದಾರೆ. 

ಮೆರವಣಿಗೆಯಲ್ಲಿದ್ದ ಸಿವಿಲ್ ಡ್ರೆಸ್ ನ ಗುಪ್ತಚರ ಪೊಲೀಸ್ ಸಿಬ್ಬಂದಿ ಹಳ್ಳೂರರನ್ನು ಹೊತ್ತು ಕುಣಿದಿರಬಹುದು ಎಂಬ ಅನುಮಾನ ಇದೆ. ಅವರನ್ನು ಹೊತ್ತು ಕುಣಿದದ್ದು ಸಾರ್ವಜನಿಕರೊ ಅಥವಾ ಇಲಾಖೆ ಸಿಬ್ಬಂದಿಯೊ ? ಸಾರ್ವಜನಿಕರಾಗಿದ್ದರೆ ಕರ್ತವ್ಯಕ್ಕೆ ಅಡ್ಡಿ ಪಡಿಸುವ ತಂತ್ರಗಾರಿಕೆ ಇದಾಗಿರಬಹುದು.

ಈ ಘಟನೆ ಗಂಭೀರವಾಗಿ ಪರಿಗಣಿಸಿ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ ಎಂದು ಪ್ರಗತಿಪರ ಸಂಘಟನೆಗಳ ಹೋರಾಟಗಾರರಾದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು , ಬಸವರಾಜ ಶೀಲವಂತರ, ಡಿ‌.ಹೆಚ್.ಪೂಜಾರ, ಮಹಾಂತೇಶ ಕೊತಬಾಳ, ಎಂ.ಬಿ.ಗೋನಾಳ್, ಶಿವಪ್ಪ ಹಡಪದ ಮುಂತಾದವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*