ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಆದ್ಯತೆ : ನಾ.ರಾ ಪ್ರತಾಪರೆಡ್ಡಿ

ವರದಿ -- ಮಂಜುನಾಥ್ ಕೋಳೂರು, ಕೊಪ್ಪಳ

ಕೊಪ್ಪಳ ಅ 9 : - ಈಶಾನ್ಯ ಪದವಿದರ ಕ್ಷೇತ್ರದ ಚುನಾವಣೆಯು ಆಗಮಿಸತ್ತಿದ್ದು, ಈ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಮೊದಲ ಆದ್ಯತೆ ನೀಡುವುದಾಗಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ನಾ.ರಾ ಪ್ರತಾಪರೆಡ್ಡಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಈಶಾನ್ಯ ಪದವಿದರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೆಲವು ಕುಲಗೆಟ್ಟ ಮತಗಳಿಂದ ಪರಾಭವಗೊಂಡಿದ್ದೆ. ಈ ಬಾರಿ ಮತದಾರರು ಪ್ರಜ್ಞಾವಂತಿಕೆಯಿಂದ ನಿಮ್ಮ ಅಭ್ಯರ್ಥಿಯನ್ನು ನಿಯಮ ಬದ್ಧವಾಗಿ ಮತ ಹಾಕುವ ಮೂಲಕ ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಸುಪ್ರೀಂ ಕೋರ್ಟ್ ಆದೇಶನ್ವಯ ಪದವಿದರ ಕ್ಷೇತ್ರಕ್ಕೆ ಮತದಾರರ ಪಟ್ಟಿಯಲ್ಲಿ ಪ್ರತಿ ಚುನಾವಣಾ ಪೂರ್ವ ಸಿದ್ಧತೆಯ ಆ ಪಟ್ಟಿಯಲ್ಲಿ ಅರ್ಹತೆಗಳೊಂದಿಗೆ ತಮ್ಮ ಹೆಸರುಗಳನ್ನು ನೋಂದಿಯಿಸಿರಬೇಕು ಎಂದು ತಿಳಿಸಿದರು. ನಾನು ಹೋರಾಟದ ಮುಖಾಂತರವೇ ಜನರ ಸಮಸ್ಯೆಗಳನ್ನು ಅರಿತವನು, ಹೀಗಾಗಿ ಪ್ರತಿ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ರೆಡ್ಡಿ, ಹಾಲೇಶಗೌಡ, ಆರ್.ಪಿ ರೆಡ್ಡಿ, ಚನ್ನಬಸವರೆಡ್ಡಿ ಮುತ್ತಾಳ ಸೇರಿದಂತೆ ಇತರರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*