ಈ ವರ್ಷ ಬೀಜದ ಬೆಲೆ ಹೆಚ್ಚಳ, ರೈತರು ಅನಿವಾರ್ಯದ ಖರೀದಿ
ಮಸ್ಕಿ : ತಾಲೂಕಿನ ರೈತ ಸಂಪರ್ಕ ಕೇಂದ್ರ ಹಾಲಾಪುರದಲ್ಲಿ ರೈತರಿಗೆ ಹಿಂಗಾರು ಬೆಳೆಗಳಾದ ಕಡಲೆ ಮತ್ತು ಜೋಳ ಬೀಜ ವಿತರಣೆ ಮಾಡಿದರು. ಬೆಲೆ ಏರಿಕೆಯಿಂದ ರೈತರು ಅನಿವಾರ್ಯವಾಗಿ ಬೀಜ ಖರೀದಿ ಮಾಡಿದರು.
ಹಾಲಾಪೂರ ಗ್ರಾಮದಲ್ಲಿ ಇರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಹಿಂಗಾರು ಬೆಳೆಗಳಾದ ಕಡಲೆ ಮತ್ತು ಜೋಳ ಬೀಜ ವಿತರಣೆ ಮಾಡಲಾಯಿತು.
ಎಂದು ರೈತ ಸಂಪರ್ಕ ಕೇಂದ್ರದ ಪ್ರಭಾರಿ ಕೃಷಿ ಅಧಿಕಾರಿ ಅಮರೇಶ ರವರು ತಿಳಿಸಿದರು. ಹಾಲಾಪೂರ ರೈತ ಸಂಪರ್ಕ ಕೇಂದ್ರಕ್ಕೆ ಒಟ್ಟು 24 ಹಳ್ಳಿಗಳು, 8 ಕ್ಯಾಂಪಗಳು ಒಳಗೊಂಡಿದ್ದು, ಹಿಂಗಾರು ಬೆಳೆಗೆ 96 ಕ್ವಿಂಟಲ್ ಕಡಲೆ ಮತ್ತು 125 ಕೆಜಿ ಜೋಳ ಬೀಜಗಳು ಸಂಗ್ರಹವಿದ್ದು ನಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಒಳಪಡುವ ಹಳ್ಳಿಯ ರೈತ ಬಾಂಧವರು ಬೀಜಗಳನ್ನು ಪಡೆದು ಬಿತ್ತನೆಮಾಡಬೇಕು ಎಂದು ಪ್ರಭಾರಿ ಕೃಷಿ ಅಧಿಕಾರಿ ಅಮರೇಶ ಹೇಳಿದರು ಸಿಬ್ಬಂದಿಗಳಾದ ಪ್ರವೀಣ ಮೇಟಿ, ಸಿದ್ದರಾಮ,ಮುದಕಪ್ಪ, ಶರಣಪ್ಪ ಇದ್ದರು.
ರೈತರ ಆಕ್ರೋಶ : ಹಿಂಗಾರು ಬೆಳೆಗೆ ಬಿತ್ತನೆ ಮಾಡಲು ಹಾಲಾಪೂರ ರೈತ ಸಂಪರ್ಕ ಕೇಂದ್ರದಲ್ಲಿ ಬೀಜಗಳನ್ನ ವಿತರಿಸುವಾಗ ಪ್ರಸ್ತುತ ವರ್ಷ ದರ ಏರಿಕೆ ಯಾಗಿದೆ ಇದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಕಡಲೆ ಬೀಜವು ಒಂದು ಪಾಕಿಟ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ 650 ರೂಪಾಯಿ ಇತ್ತು ಆದರೆ ಈ ವರ್ಷ 900 ರೂಪಾಯಿ ಆಗಿದೆ,ಹಾಗೆ ಸಾಮನ್ಯ ಜಾತಿಗೆ ಕಳೆದ ವರ್ಷ 900 ರೂಪಾಯಿ ಇತ್ತು ಈ ವರ್ಷ 1200 ರೂಪಾಯಿ ಆಗಿದೆ ಇಷ್ಟೊಂದು ಬೀಜಗಳ ಬೆಲೆ ಬಹಳಷ್ಟು ಹೆಚ್ಚಾಗಿದ್ದಕ್ಕೆ ರೈತರಾದ ಬಸವರಾಜ ನಾಯಕ ತುಗ್ಗಲದಿನ್ನಿ, ನಾಮನಗೌಡ,ವಿರೇಶ ದಿನ್ನಿ,ಮುಪ್ಪನಯ್ಯ,ರಾಮಣ್ಣ ಇನ್ನೂ ಅನೇಕ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಮತ್ತು ಇಲಾಖೆಯ ಕಾರ್ಯ ವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ