ಕರ್ನಾಟಕ ಮುಸ್ಲಿಂ ಸಂಘಕ್ಕೆ ಕೊಟ್ಟೂರು ತಾಲೂಕು ಯುವ-ಘಟಕದ ಅಧ್ಯಕ್ಷರನ್ನಾಗಿ ಕೆ. ನೂರ್ ಮಹಮದ್ ನೇಮಕ
ಕೊಟ್ಟೂರು ತಾಲೂಕು ಯುವ-ಘಟಕದ ಅಧ್ಯಕ್ಷರನ್ನಾಗಿ ಶ್ರೀ ಕೆ. ನೂರ್ ಮಹಮದ್ ತಂದೆ ಶೇಷಾವಲಿ, ಅವರನ್ನು ನೇಮಕಮಾಡಿ ಈ ಕೂಡಲೇ ಜಾರಿಗೆ ಬರುವಂತೆ ಕರ್ನಾಟಕ ಮುಸ್ಲಿಂ ಸಂಘದ ರಾಜ್ಯದ್ಯಕ್ಷರು ಎಲ್ ಎಸ್ ಬಷೀರ್ ಅಹ್ಮದ್ ಕೂಡ್ಲಿಗಿ ತಮ್ಮ ಕಛೇರಿಯಲ್ಲಿ ಶುಕ್ರವಾರ ರಂದು ಆದೇಶ ಹೊರಡಿಸಲಾಗಿದೆ, ಇಂದಿನಿಂದ ತಾವುಗಳು ಕೊಟ್ಟೂರು ತಾಲೂಕು ಘಟಕದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಬಳಿ ಮತ್ತು ಗ್ರಾಮ ಘಟಕಗಳ ಅಧ್ಯಕ್ಷರು ಮತ್ತು ಪಧಾಧಿಕಾರಿಗಳನ್ನು ನೇಮಿಸಿಕೊಳ್ಳಬೇಕು ಮತ್ತು ಕೊಟ್ಟೂರು ತಾಲೂಕಿನಾಧ್ಯಂತ ಅತ್ಯಂತ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕರ್ನಾಟಕ ಮುಸ್ಲಿಂ ಸಂಘಟನೆಯನ್ನು ಸಂಘಟಿಸುವಂತೆ ಆದೇಶಿಸಲಾಗಿದೆ.
ತಾವುಗಳು ಯಾವುದೇ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗದೇ ಮುಸ್ಲಿಂ ಸಮಾಜದ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಮತ್ತು ಮುಸ್ಲಿಂ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಕೊಂಡು, ನಾಡು, ನುಡಿ, ಜಲ, ಗಡಿ ಸಮಸ್ಯೆಗಳಲ್ಲಿ ಕಾರ್ಯೋನ್ಮುಖರಾಗುವಂತೆ ಆದೇಶಿಸಲಾಗಿದೆ. ಎಂದು ಪತ್ರಿಕೆಗೆ ತಿಳಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ