ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಸ್ವಚ್ಛತೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಕರೆ : ಸ್ವಚ್ಛತಾ ಕಾರ್ಯ
ಮಸ್ಕಿ : ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಪ್ರಭುಶ್ರೀ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಇಡೀ ದೇಶದಾದ್ಯಂತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಕರೆ ನೀಡಿರುವಂತೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರವರ ನೇತೃತ್ವದಲ್ಲಿ ಭ್ರಮರಾಂಬ ದೇವಸ್ಥಾನವನ್ನು ಸ್ವಚ್ಛತೆ ಮಾಡಲಾಯಿತು.
ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಕರೆ ನೀಡಿರುವಂತೆ ಸ್ವಚ್ಛತಾ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಬೇಕು. ಸಂಜೆ ದೇಶಾದ್ಯಂತ ಎಲ್ಲರ ಮನೆಯಲ್ಲಿ ಐದು ದೀಪಗಳನ್ನು ಹಚ್ಚಬೇಕೆಂದು ಕರೆ ನೀಡಿದ್ದಾರೆ ಅದರಂತೆ ಮಂಗಳವಾರ ಮಸ್ಕಿಯ ಆರಾಧ್ಯ ದೇವರುಗಳಾದ ಶ್ರೀ ಬ್ರಮರಾಂಭ ದೇವಸ್ಥಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವನ್ನು ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್ ರವರ ನೇತೃತ್ವದಲ್ಲಿ ಸ್ವಚ್ಛತೆ ಮಾಡಲಾಯಿತು. ನಂತರ ಮಾತನಾಡಿದ ಅವರು ಮಸ್ಕಿಯ ಎಲ್ಲಾ ವಾರ್ಡ್ ಗಳಲ್ಲಿ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಬರುವ ಎಲ್ಲಾ ದೇವಸ್ಥಾನಗಳನ್ನು ಸ್ವಚ್ಛ ಮಾಡಬೇಕೆಂದು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿ 5 ದೀಪವನ್ನು ಸಂಜೆ ಬೆಳಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಾಕ್ಟರ್ ಬಿ ಎಚ್ ದಿವಟರ,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಬಿಜೆಪಿ ಯುವ ಮುಖಂಡರಾದ ಪ್ರಸನ್ನ ಪಾಟೀಲ್, ಅಶೋಕ ಠಾಕೂರ್, ಯಲ್ಲೋಜಿ ರಾವ್ ಕೊರೇಕರ್, ಶಿವಶಂಕ್ರಪ್ಪ ಹಳ್ಳಿ, ಮಸ್ಕಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ ಯoಬಲದ, ಶಿವಕುಮಾರ ಕಡಮುಡಿಮಠ, ಡಾ!! ನಾಗನಗೌಡ, ಸಿದ್ದಲಿಂಗಯ್ಯ ಸೊಪ್ಪಿಮಠ, ದೊಡ್ಡಪ್ಪ ಬುಳ್ಳಾ, ಲಕ್ಷ್ಮೀನಾರಾಯಣ ಶೆಟ್ಟಿ, ಡಾಕ್ಟರ್ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಚೇತನ್ ಪಾಟೀಲ್, ಮಲ್ಲಿಕಾರ್ಜುನ್ ಬ್ಯಾಳಿ, ಮಲ್ಲಯ್ಯ ಅಂಬಾಡಿ, ಭರತ್ ಕುಮಾರ್, ಮೌನೇಶ್ ನಾಯಕ, ಯಮುನಪ್ಪ ಬೋವಿ, ಶಿವರೆಡ್ಡಿ ಅಚ್ಛಾ ಸತ್ಯನಾರಾಯಣಶೆಟ್ಟಿ, ಕಾಳಪ್ಪ ಪತ್ತಾರ, ಸುರೇಶ್ ಪತ್ತಾರ, ವಿನೋದಹಳ್ಳಿ, ಸೋಮಶೇಖರಯ್ಯ ಸಿರವಾರ ಮಠ, ಸಿದ್ದು .ಜಿ, ಸಿದ್ದಣ್ಣ ಮುಳ್ಳೂರು, ಎರಿಸ್ವಾಮಿ ಅಂಗಡಿ, ಶರಣೆಗೌಡ ಪೊಲೀಸ್ ಪಾಟೀಲ್, ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು, ಯುವಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ