*ಕನ್ನಡ ಶ್ರೀಮಂತ ಭಾಷೆ.ಉಳಿಸೋಣ,ಬೆಳೆಸೋಣ*
ಕೊಟ್ಟೂರು ತಾಲೂಕಿನ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆ ನಿಂಬಳಗೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೊಟ್ಟೂರು ಘಟಕದವರು ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕರಾದ ಕೆ.ಎ ಕೊಟ್ರೇಶಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಳಗನ್ನಡ ಸಾಹಿತ್ಯ, ವಚನ ಸಾಹಿತ್ಯ,ಜನಪದ ಸಾಹಿತ್ಯ ಬಗ್ಗೆ ವಿದ್ಯಾರ್ಥಿಗಳು ತಲೆದೂಗುವಂತೆ ಹಳೆಗನ್ನಡ ಪದ್ಯಗಳ ಮೂಲಕ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಗುರುಗಳಾದ ಜಿ.ಪಕ್ಕೀರಪ್ಪ ಮಾಡಿದರು.ಪ್ರಾಸ್ತಾವಿಕವಾಗಿ ಪ್ರಾಧ್ಯಾಪಕ ರಾದ ಅರವಿಂದ ಬಸಾಪುರ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಈಶ್ವರಪ್ಪ ತುರಕಾಣಿ ಮಾತನಾಡಿದರು.
ಜನಪದ ತ್ರಿಪದಿಗಳ ಹಾಡುವುದರ ಮೂಲಕ ಗಾಯತ್ರಿ ಸಂಗಡಿಗರು ಪ್ರಾರ್ಥನೆ ಮಾಡಿದರು.ಕುವೆಂಪುರವರ ಜೀವನವನ್ನು ಸ್ವರಗಳ ಮೂಲಕ ಕುವೆಂಪು ಕವಿಗೆ ಸ್ವರಾಭಿಷೇಕವನ್ನು ವಿದ್ಯಾರ್ಥಿಗಳಾದ ಶಾಲಿನಿ ಮತ್ತು ಲಿಖಿತಪ್ರಿಯ ಮಾಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಇತಹಾಸದ ಬಗ್ಗೆ ವಿದ್ಯಾರ್ಥಿನಿ ಈರಮ್ಮ ಮಾತನಾಡಿದಳು.
ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದೇವರಮನಿ ಕೊಟ್ರೇಶಪ್ಪ ವಹಿಸಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜ ಎಮ್.ಬಿ,ವಿದ್ಯಾರಣ್ಯ.ಎಸ್ ,,ಗುರುಬಸವರಾಜ, ಬಣಕಾರ,ಪತ್ರೇಶ,ಮಲ್ಲಪ್ಪ,ಸರ್ಪಭೂಷಣ,ಅಮೃತಮ್ಮ,ರೇವಣಸಿದ್ದಯ್ಯ,ಸಿದ್ದೇಶ ಪಾಟೀಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವೀರಭದ್ರಪ್ಪ ಕೆ ಕನ್ನಡ ಶಿಕ್ಷಕರು ನಿರ್ವಹಿಸಿದರು.ಸ್ವಾಗತವನ್ನು ಶಿವಪುತ್ರಗೌಡ ನೆರವೇರಿಸಿದರು.
ವಂದನಾರ್ಪಣೆಯನ್ನು ರವಿಪ್ರಸಾದ ಗಣಿತ ಶಿಕ್ಷಕರು ನಿರ್ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ