"ಆಸ್ಕರ್ ಪ್ರಶಸ್ತಿ ವಿಜೇತರಾದ ಕೃಪಾಕರ್ ಸೇನಾನಿ, ವಿದ್ಯಾರ್ಥಿಗಳೊಂದಿಗೆ ಸಂವಾದ "
ಕೊಟ್ಟೂರು: ಪಟ್ಟಣದ ಭಾಗೀರಥಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ರಂದು ಗ್ರೀನ್ ಆಸ್ಕರ್ ಪ್ರಶಸ್ತಿ ವಿಜೇತರಾದ ಕೃಪಾಕರ್ ಸೇನಾನಿ ಇವರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಕೃಪಾಕರ ಇವರು ಮಾತನಾಡಿ ಇಂದಿನ ಯುವ ಪೀಳಿಗೆ ಪರಿಸರದ ಕಾಳಜಿ ಮರೆತು ವಿನಾಶ ಮಾಡುತ್ತಿದ್ದಾರೆ, ಹಾಗಾಗಿ ಪರಿಸರ ಸಂರಕ್ಷಣೆ ನಮ್ಮ ಎಲ್ಲರ ಜವಾಬ್ದಾರಿ ಮತ್ತು ಪರಿಸರ ಸಂರಕ್ಷಣೆ ವೈಜ್ಞಾನಿಕ ವಿಷಯಗಳ ಚಿಂತನೆ ನಡೆದಿದೆ, ವನ್ಯಜೀವಿಗಳ ಸಂರಕ್ಷಣೆಗೆ ನಾವೆಲ್ಲಾ ಬದ್ದರಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು,ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳೊಂದಿಗೆ ಶ್ರೀ ಸೇನಾನಿ ಇವರು ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಗೀರಥಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನಿರ್ಮಲಾ ಶಿವನಗುತ್ತಿ ವಹಿಸಿ ಮಾತನಾಡಿದ ಇವರು ಕೃಪಾಕರ ಸೇನಾನಿ ನಮ್ಮ ಕಾಲೇಜಿಗೆ ಬಂದು ನಮ್ಮ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಮಾಡಿದ್ದಕ್ಕಾಗಿ ನಮ್ಮ ಕಾಲೇಜಿನ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತಾ ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿ ಬಿ.ರಜತ್ ಉಪಸ್ಥಿತಿ ಇದ್ದರು, ಶ್ರೀ ಶ್ಯಾಮ್ ರಾಜ್ ಟಿ ಉಪನ್ಯಾಸಕರು ನಿರ್ವಹಿಸಿದರು,ಪೂರ್ಣಚಂದ್ರ, ಉಪನ್ಯಾಸಕರು ಸ್ವಾಗತಿಸಿದರು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ