ಗ್ರಾಮ ಪಂಚಾಯಿತಿ ಸದಸ್ಯರು, ಸಂಘಟನೆಗಳಿಂದ ಕಂದಗಲ್ಲು ಗ್ರಾಮ ಪಂಚಾಯಿತಿಯನ್ನು ಮೂಲ ಸ್ಥಳವಾದ ಗಜಾಪುರಕ್ಕೆ ವರ್ಗಾಯಿಸಲು ಮನವಿ
ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನಲ್ಲಿ ಕಂದಗಲ್ಲು ಗ್ರಾಮ ಪಂಚಾಯಿತಿಯನ್ನು ಮೂಲ ಸ್ಥಳವಾದ ಗಜಾಪುರಕ್ಕೆ ವರ್ಗಾಯಿಸಲು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗಜಾಪುರ ಮುಖಂಡರು ಸಂಘಟನೆಯ ಸಂಯೋಗದಲ್ಲಿ ಸೋಮವಾರದಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರಿಗೆ ಮನವಿ ಸಲ್ಲಿಸಲಾಯಿತು.
ಕಂದಗಲ್ಲು ಗ್ರಾಮ ಪಂಚಾಯಿತಿಯ ಸಂಬಂಧಿಸಿದಂತೆ ಈ ಹಿಂದೆ ಗಜಾಪುರ ಗ್ರಾಮಕ್ಕೇ ಮಂಜೂರಾಗಿತ್ತು. ಆದರೆ ರಾಜಕೀಯ ಒತ್ತಡದ ಪರಿಣಾಮವಾಗಿ ಕಾರಣಾಂತರಗಳಿಂದ ಕಂದಗಲ್ಲುಗೆ ವರ್ಗಾಯಿಸಿಕೊಂಡಿದ್ದಾರೆ.
ಇದರಿಂದ ಈ ಪಂಚಾಯಿತಿಯ ಸಾರ್ವಜನಿಕರು ಪಂಚಾಯಿತಿಗೆ ಹೋಗಲು ಬಸ್ ಸೌಲಭ್ಯವೇ ಇಲ್ಲದ ಕಂದಗಲ್ಲಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಆದರೆ ಮುಖ್ಯರಸ್ತೆ, ರಾಜ್ಯ ಹೆದ್ದಾರಿಯಲ್ಲಿರುವ ಗಜಾಪುರ ಗ್ರಾಮಕ್ಕೆ ಈ ಪಂಚಾಯಿತಿಯನ್ನು ವರ್ಗಾಯಿಸಿದರೆ ಗ್ರಾಮೀಣ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಈ ಹಿಂದೆ ಕೂಡ್ಲಿಗಿಯ ಶಿವಪುರ ಮಂಡಲ ಪಂಚಾಯಿತಿ ಇರುವ ಸಮಯದಲ್ಲಿ ಮೂಲಸ್ಥಳವಾದ ಗಜಾಪುರ ಗ್ರಾಮ ಪಂಚಾಯಿತಿ ಆಗಿರುತ್ತದೆ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿ ಒಂದು ಗ್ರಂಥಾಲಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಿದೆ,
ಈ ಗಜಾಪುರ ಗ್ರಾಮಕ್ಕೆ ಒಂದು ಗ್ರಂಥಾಲಯ ಮಂಜೂರು ಮಾಡಿ, ಪ್ರೌಢಶಾಲೆ, ನ್ಯಾಯ ಬೆಲೆ ಅಂಗಡಿ, ಇನ್ನು ಅನೇಕ ಸೌಲಭ್ಯಗಳಿಂದ ವಂಚಿತಗೊಂಡಿದೆ ಹಾಗಾಗಿ ಪೂರ್ಣ ಅಭಿವೃದ್ಧಿ ಕುಂಠಿತಗೊಂಡಿದೆ. ಗ್ರಾಮ ಪಂಚಾಯಿತಿಯನ್ನು ಗಜಾಪುರ ಗ್ರಾಮಕ್ಕೆ ವರ್ಗಾಯಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಕ್ಕದ ಕೂಡ್ಲಿಗಿ ತಾಲ್ಲೂಕಿನ ಮಾಕನಡಕು ಮೂಲ ಗ್ರಾಮ ಪಂಚಾಯಿತಿಯಾಗಿದ್ದು, ಪಂಚಾಯಿತಿಯನ್ನು ಚಿಕ್ಕಜೋಗಿಹಳ್ಳಿಗೆ ವರ್ಗಾವಣೆಗೊಂಡಿದೆ. ಮಾಕನಡಕು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿದ್ದು, ಈಗ ಅಲ್ಲಿನ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಗ್ರಾಮ ಪಂಚಾಯಿತಿಗೆ ಗ್ರಾಮೀಣ ಪ್ರದೇಶದ ಜನರು ಅಲೆದಾಡುವ ಪರಿಸ್ಥಿತಿ ಬಂದೊದಗಿದೆ.
ಅದೇ ರೀತಿ ಇದೂ ಸಹ ಆಗಬಹುದು. ಸರ್ಕಾರ ಮತ್ತು , ಜಿಲ್ಲಾ ಪಂಚಾಯತ್ ಸಿ.ಇ.ಒ. ಈ ಬಗ್ಗೆ ಗಮನಿಸಿ ಮೂಲ ಸ್ಥಳಕ್ಕೆ ವರ್ಗಾಯಿಸುವಂತೆ ಮತ್ತು ಅಭಿವೃದ್ಧಿಗೆ ಒತ್ತು ಕೊಡುವಂತೆ. ಸ್ಥಳೀಯರಾದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯ ಟಿ ಮುಗಪ್ಪ,ಎಚ್ ಎ ರಾಜಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್ ದೊಡ್ಡ ಹುಲುಗಪ್ಪ, ಪ್ರಭು, ಮಂಜುನಾಥ, ಕೊರಚರ ಮಂಜುನಾಥ್, ಈಡಿಗರ ಮಂಜುನಾಥ್, ದೂಪದಹಳ್ಳಿ ಕೊಟ್ರೇಶಪ್ಪ, ಗಿರಿಧರ್, ಟಿ ಚಂದ್ರಪ್ಪ,ತುಪ್ಪನಹಳ್ಳಿ ಮುಗಪ್ಪ,ಅಂಗಡಿ ಈರಣ್ಣ , ಗೊಂದಲ ಹಳ್ಳಿ ಕೊಟ್ರೇಶ್,ಬರಿಕಾರ ಶಿದ್ದಪ್ಪ, ಜಿ ಹನುಮಪ್ಪ,ಬಿ ಶೇಖರಪ್ಪ, ಕೆ ಮಲ್ಲಿ, ಕೆ ಕೊಟ್ರೇಶ್,ಊರಿನ ಹಿರಿಯ ಮುಖಂಡರು, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ