ಕರ್ನಾಟಕ ಮುಸ್ಲಿಂ ಸಂಘ ,ಅಲ್ಪಸಂಖ್ಯಾತರ ಹಕ್ಕಿಗೋಸ್ಕರ ಹೋರಾಡಬೇಕು : ರಾಜ್ಯಾಧ್ಯಾಕ್ಷರಾದ ಎಲ್.ಎಸ್.ಬಷೀರ್ ಅಹ್ಮದ್
ಕೊಟ್ಟೂರು :ಕೊಟ್ಟೂರಿನಲ್ಲಿ ಕರ್ನಾಟಕ ಮುಸ್ಲಿಂ ಸಂಘ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯಾಧ್ಯಾಕ್ಷರಾದ ಎಲ್.ಎಸ್.ಬಷೀರ್ ಅಹ್ಮದ್ ರವರು ಕೊಟ್ಟೂರಿನ ಬಳ್ಳಾರಿ ಕ್ಯಾಂಪ್ ಮುಸ್ಲಿಂ ಶಾದಿ ಮಹಲ್ ನಲ್ಲಿ ಭಾನುವಾರದಂದು ನಡೆದ ಕಾರ್ಯಕ್ರಮದಲ್ಲಿ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಕೆ. ನೂರ್ ಮಹಮ್ಮದ್ ರವರನ್ನು ಆಯ್ಕೆ ಮಾಡಿದರು. ಅಲ್ಲದೇ ತಾಲ್ಲೂಕು ಪದಾಧಿಕಾರಿಗಳು ಸಹ ಪದಗ್ರಹಣ ಮಾಡಿದರು.
ಸಂಘಟನೆಯ ಉದ್ದೇಶಗಳ ಕುರಿತು ಮಾತನಾಡಿದ ಅವರು ಅಲ್ಪಸಂಖ್ಯಾತರ ಹಕ್ಕಿಗೋಸ್ಕರ ಹೋರಾಡಬೇಕು, ನಾವೆಲ್ಲಾ ಕಾನೂನು ಸುವ್ಯವಸ್ಥೆಯಲ್ಲಿ ಬದುಕಿದ್ದೇವೆ ಅದೇ ಕಾನೂನನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರದ ವಿವಿಧ ಯೋಜನೆಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕು. ಸಂವಿಧಾನದ ಕಾನೂನಿನ ಅಡಿಯಲ್ಲಿ ಈ ನಮ್ಮ ಸಂಘಕ್ಕೆ ಯಾವುದೇ ಧಕ್ಕೆ ಬಾರದ ಹಾಗೆ ಮುಸ್ಲಿಂ ಜನಾಂಗದ ಹಕ್ಕು ಮತ್ತು ರಕ್ಷಣೆಗೋಸ್ಕರ ನಮ್ಮ ಕರ್ನಾಟಕ ಮುಸ್ಲಿಂ ಸಂಘ ಕಾರ್ಯನಿರ್ವಹಣೆಗೆ ಸಿದ್ದರಿದ್ದೇವೆಂದು ರಾಜ್ಯಾಧ್ಯಕ್ಷ ಎಲ್.ಎಸ್. ಬಷೀರ್ ಅಹ್ಮದ್ ರವರು ಸಂಘದ ಕಾರ್ಯವೈಖರಿಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ವಕೀಲರಾದ ಹಾಗೂ ಡಿ.ಎಸ್.ಎಸ್. ಸಂಚಾಲಕರಾದ ಹನುಮಂತಪ್ಪ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ದೊಡ್ಡರಾಮಣ್ಣನವರು ಮಾತನಾಡಿದರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಘದ ಪದಾಧಿಕಾರಿಗಳಾದ ಮೊಹಮ್ಮದ್ ನೌಶಾದ್, ಸಿರಾಜ್, ಮುಜೀಬ್, ಬಾನು ಬಿ, ಶಂಶದ್ ಬೇಗಂ ಹಾಗೂ ಸ್ಥಳೀಯ ಸದಸ್ಯರಾದ ಪಿ.ಚಂದ್ರಶೇಖರ್, ಉಬೆದುಲ್ಲಾ, ಅಬೂಬಕ್ಕರ್, ಇರ್ಫಾನ್, ಸಮಿ ಉಲ್ಲಾ, ಖಾಜಾ ಭಾಷಾ, ಮೊಹಮ್ಮದ್ ಬಿಲಾನ್, ಅಬ್ದುಲ್ ಕರೀಂ, ಅಬ್ದುಲ್ ವಾಹಿದ್, ಜಿಯಾ ಉಲ್ಲಾ, ಸಮೀರ್, ಮುಬಾರಕ್, ಗೌಸ್(ಮಲ್ದಿ) ಜಾಕೀರ್, ರಿಜ್ವಾನ್ ಹಾಗೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ