ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆ ನಿರೀಕ್ಷೆಯಲ್ಲಿ ಮಸ್ಕಿ ತಾಲೂಕು
ಸಾಂದರ್ಭಿಕ ಚಿತ್ರ.
ವರದಿ : ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ಅಲ್ಪ ಸಂಖ್ಯಾತ ಸಮುದಾಯಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ರಾಜ್ಯ ಸರ್ಕಾರ ನೂತನ ಮಸ್ಕಿ ತಾಲೂಕಿನಲ್ಲಿ ಮೌಲಾನ ಆಜಾದ್ ವಸತಿ ಶಾಲೆಗಳನ್ನು ಆರಂಭಿಸಬೇಕಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಹುವಲಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಹಲವು ಶಾಲಾ-ಕಾಲೇಜುಗಳನ್ನು ಈಗಾಗಲೇ ಸ್ಥಾಪನೆ ಮಾಡಲಾಗಿದೆ, ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವಿದ್ದಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 200 ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭಿಸಲಾಗಿದೆ. ಈ ಶಾಲೆಗಳನ್ನು ಬಹುತೇಕ ರಾಜ್ಯದ ಪ್ರತಿಯೊಂದು ತಾಲೂಕುಗಳಲ್ಲಿ ಒಂದರಿಂದ ಮೂರು-ನಾಲ್ಕು ಶಾಲೆಗಳನ್ನು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ನಗರ ಅಥವಾ ಪಟ್ಟಣ, ಹೋಬಳಿ ಪ್ರದೇಶದಲ್ಲಿ ಪ್ರಾರಂಭಿಸಲಾಗಿದೆ. ಸದರಿ ಶಾಲೆಗಳಲ್ಲಿ ಪ್ರತಿ ತರಗತಿಗೆ 60 ಮಕ್ಕಳನ್ನು ಪ್ರವೇಶ ಪಡೆಯಲು ಅವಕಾಶ ನೀಡಿದ್ದು, ಅವುಗಳಲ್ಲಿ ಶೇ. 75ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಬೌದ್ಧ ಹಾಗೂ ಜೈನ ವಿದ್ಯಾರ್ಥಿಗಳಿಗೆ ಹಾಗೂ ಶೇ. 25ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಪ್ರವೇಶ ನೀಡುವ ಬಗ್ಗೆ ಸೂಚಿಸಲಾಗಿದೆ.
ಬಹುತೇಕ ಬಡ ಮಕ್ಕಳು ಈ ಶಾಲೆಗಳಿಗೆ ಪ್ರವೇಶ ಪಡೆದು ತಮ್ಮ ಭವಿಷ್ಯ ರೂಪಿಸಲು ಅನುಕೂಲವಾಗಿದೆ. ಸರಕಾರ ಈಗ ಮಂಜೂರು ಮಾಡಿರುವ ಶಾಲೆಗಳ ಜೊತೆಗೆ ಬೇಡಿಕೆಗನುಸಾರವಾಗಿ ಇನ್ನೂ ಹೆಚ್ಚಿನ ಶಾಲೆಗಳನ್ನು ಮಂಜೂರು ಮಾಡುವ ಬಗ್ಗೆ ಯೋಚಿಸಬೇಕಾಗಿದೆ.
ವಿಶೇಷವಾಗಿ ಮಸ್ಕಿ ತಾಲ್ಲೂಕಿನ ಆರ್ಥಿಕವಾಗಿ ತೊಂದರೆಯಲ್ಲಿರುವ ಪಾಲಕರು ತಮ್ಮ ಮಕ್ಕಳನ್ನು
ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಹಾಗು ಮೌಲಾನಾ ಆಝಾದ್‌ಮಾದರಿ ಶಾಲೆಗಳಿಗೆ ಸೇರಿಸಲು ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ನೂತನ ತಾಲೂಕಿನಲ್ಲಿ ಸದರಿ ಶಾಲೆ ಇಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗಿದೆ.
ಮಸ್ಕಿ ತಾಲೂಕಾಗಿ ಸುಮಾರು ನಾಲ್ಕು ವರ್ಷಗಳು ಕಳೆದರೂ ಕೂಡ ವ್ಯವಸ್ಥಿತವಾದ ಕಚೇರಿ ಮತ್ತು ವಿವಿಧ ಇಲಾಖೆಗಳ ಕಚೇರಿಗಳಿಗಾಗಿ ದೂರದ ತಾಲೂಕುಗಳಿಗೆ ಅಲೆದಾಡಬೇಕಾಗಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಹೇಳಿಕೆಗಾಗಿ ಅಲ್ಪಸಂಖ್ಯಾತ ಮುರಾರ್ಜಿ ವಸತಿ ಶಾಲೆಗಳು ಇಲ್ಲವೇ ಮೌಲಾನ್ ಅಬುಲ್ ಕಲಾಂ ಆಜಾದ್ ವಸತಿ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುವುದು ಅತ್ಯಂತ ಅವಶ್ಯಕತೆ ಇರುತ್ತದೆ ಕಾರಣ ದುಡಿಯೋ ವರ್ಗದ ಮಕ್ಕಳು ಶೈಕ್ಷಣಿಕವಾಗಿ ಸಬಲರಾಗಲು ವಸತಿ ಶಾಲೆಗಳ ಪಾತ್ರ ಬಹುಮುಖ್ಯವಾಗಿದೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹತ್ತರ ಕಾರ್ಯಗಳಲ್ಲಿ ಬೇಡಿಕೆ ಇರುವ ಕಡೆ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳನ್ನು ಆರಂಭಿಸುವುದು ಪ್ರಮುಖ ಕೆಲಸವಾಗಿದೆ. ಹೀಗಾಗಿ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ 2024-2025 ನೇ ಸಾಲಿನಲ್ಲಿ ಮಸ್ಕಿ ತಾಲ್ಲೂಕಿಗೆ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾತಿಗೆ ಕ್ರಮ ಕೈಗೊಂಡು, ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೇಳಿಕೆ 1
ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಆಸೆ ಇದೆ ಮಸ್ಕಿ ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಪ್ರಾರಂಭಿಸಿದರೆ ಒಳ್ಳೆಯದು.ಶಬೀರ್ ಚೌದ್ರಿ ಮಸ್ಕಿ ತಾಲ್ಲೂಕು ಅಲ್ಪಸಂಖ್ಯಾತರ ಸಂಘಟನೆಯ ಅಧ್ಯಕ್ಷ,
ಹೇಳಿಕೆ. 2
ಮಸ್ಕಿ ಸೇರಿದಂತೆ ಈಗಾಗಲೇ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ನಿಲಯ ಎಲ್ಲಿ ಎಲ್ಲಿ ಆಗಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಯನ್ನು ಸಲ್ಲಿಸಲಾಗಿದೆ.ಎಂದು ಪೊನ್ ಕರೆ ಮೂಲಕ ತಿಳಿಸಿದರು.
ಸಂಗಮೇಶ್ವರ ಉಪ ನಿರ್ದೇಶಕರು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ರಾಯಚೂರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ