*ಭಾಗೀರಥಿ ಪದವಿ ಪೂರ್ವ ಕಾಲೇಜಿನಲ್ಲಿ, ಸಿದ್ದರಾಮ ಹಿರೇಮಠ್ ಉಪನ್ಯಾಸಕರಿಂದ ವಿಶೇಷ ತರಬೇತಿ ಕಾರ್ಯಗಾರ*
ಕೊಟ್ಟೂರು: ಪಟ್ಟಣದ ಭಾಗೀರಥಿ ಪದವಿ ಪೂರ್ವ ಕಾಲೇಜಿನಲ್ಲಿ 2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿಷಯವಾರು ವಿಶೇಷ ತರಬೇತಿ ಕಾರ್ಯಗಾರವನ್ನು ದಿನಾಂಕ 05.01.2024 ರಿಂದ 13.01.2024 ರವರಿಗೆ ಹಮ್ಮಿಕೊಳ್ಳಲಾಗಿತ್ತು , ಈ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಮೊದಲ ದಿನ ಕನ್ನಡ ಹಿರಿಯ ಉಪನ್ಯಾಸಕರಾದ ಸಿದ್ದರಾಮ ಹಿರೇಮಠ್ ಉಪನ್ಯಾಸಕರು ಕೂಡ್ಲಿಗಿ ಇವರು ಚಾಲನೆ ನೀಡಿ ತಮ್ಮ ವಿಷಯ ಕುರಿತು ಸುದೀರ್ಘ ಒಂದು ದಿನದ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು, ನಂತರ
2. ಐಚ್ಚಿಕ ಕನ್ನಡ-ಅಂಜಿನಪ್ಪ ಉಪನ್ಯಾಸಕರು. ಕೊಟ್ಟೂರು
3. ಶಿಕ್ಷಣಶಾಸ್ತ್ರ -ಶ್ರೀಮತಿ ವಿಜಯಲಕ್ಷ್ಮಿ ಉಪನ್ಯಾಸಕಿ ಕೊಟ್ಟೂರು.
4. ಇತಿಹಾಸ- ಸಂತೋಷ್ ಕುಮಾರ್ ಉಪನ್ಯಾಸಕರು ಕೂಡ್ಲಿಗಿ.
5. ಸಮಾಜಶಾಸ್ತ್ರ- ಕೊತ್ಲಮ್ಮ ಪ್ರಾಂಶುಪಾಲರು ಕೂಡ್ಲಿಗಿ.
6. ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ-ರವೀಂದ್ರ ಉಪನ್ಯಾಸಕರು ಹರಪನಹಳ್ಳಿ
7.ರಾಜ್ಯಶಾಸ್ತ್ರ-ವಿವೇಕಾನಂದ ಸ್ವಾಮಿ ಉಪನ್ಯಾಸಕರು ಕೂಡ್ಲಿಗಿ ಇವರು ತಮ್ಮ ವಿಷಯ ಜ್ಞಾನ ಮತ್ತು ಪ್ರಶ್ನೆ ಪತ್ರಿಕೆ ಮಾದರಿಗಳ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ಈ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗೀರಥಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನಿರ್ಮಲಾ ಶಿವನಗುತ್ತಿ ಮಾತನಾಡಿ ನಮ್ಮ ವಿದ್ಯಾರ್ಥಿಗಳಿಗೆ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಭಾವಿಸಿದ್ದೇನೆ ಇದರ ಸಾರ್ಥಕತೆ ಮುಂದಿನ ನಿಮ್ಮ ಫಲತಾಂಶದತ್ತ ನಾವೆಲ್ಲಾ ನಿರೀಕ್ಷೆಯಲ್ಲಿ ಇದ್ದೇವೆ, ಈ ಕಾರ್ಯಗಾರವನ್ನು ಅತ್ಯಂತ ಯಶಸ್ವಿ ಗೊಳಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ನಮ್ಮ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವರ್ಗದವರಿಂದ ಹೃದಯಪೂರ್ವಕ ಧನ್ಯವಾದಗಳು ಮತ್ತು ಯಾವುದೇ ಕಾರ್ಯಕ್ರಮ ಮಾಡಲಿ ಅದಕ್ಕೆ ಯಾವತ್ತೂ ಸಹಕಾರ ನೀಡುತ್ತಿರುವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಚಟ್ರಿಕಿ ಬಸವರಾಜ್ ಹಾಗೂ ಕಾರ್ಯದರ್ಶಿಯಾದ ಶ್ರೀ ಸಿ. ಬಿ. ರಜತ್ ಇವರಿಗೂ ವಂದನೆಗಳು ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು, ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಸಿ. ಬಿ.ರಜತ್, ಹಿರಿಯ ಉಪನ್ಯಾಸಕರಾದ ಶ್ರೀ ಶ್ಯಾಮ್ ರಾಜ್ ಟಿ, ಗುರುಸ್ವಾಮಿ ಟಿ, ಇತರೆ ಎಲ್ಲಾ ಉಪನ್ಯಾಸಕರು ಉಪಸ್ಥಿತಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ