ಕೊಪ್ಪಳ ಅಜ್ಜನ ಜಾತ್ರೆಗೆ ಮಸ್ಕಿ ಯಿಂದ ಒಂದು ಕ್ವಿಂಟಾಲ್ ರೊಟ್ಟಿ ಎರಡು ಕ್ವಿಂಟಾಲ್ ಹೋಳಿಗೆ.
ಮಸ್ಕಿ : ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಹಬ್ಬವಾದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ನಿಮಿತ್ತ ಪಟ್ಟಣದ ಜನತೆಯು ಅಜ್ಜನ ಜಾತ್ರೆಗೆ ಒಂದು ಕ್ವಿಂಟಾಲ್ ರೊಟ್ಟಿ ಎರಡು ಕ್ವಿಂಟಾಲ್ ಹೋಳಿಗೆ ಯನ್ನು ದೇಣಿಗೆ ರೂಪದಲ್ಲಿ ಸದ್ಭಕ್ತರು ಕೊಪ್ಪಳಕ್ಕೆ ಮಸ್ಕಿ ಪಟ್ಟಣದ ಭಕ್ತರು ಕಳುಹಿಸಿ ಕೊಟ್ಟರು.
ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಯ ಸಂಭ್ರಮದ ದಿನ ಜನವರಿ 27ಕ್ಕೆ ಬಂದೇ ಬಿಟ್ಟಿದೆ.
ಲಕ್ಷಾಂತರ ಜನ ಸೇರಿ ಆಚರಣೆ ಮಾಡುವ ಗವಿಸಿದ್ದೇಶ್ವರ ಜಾತ್ರೆ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಹಬ್ಬ. ಸಾತ್ವಿಕ ರೀತಿಯಲ್ಲಿ, ಭಕ್ತರ ಹಿಡಿ ಕೊಡುಗೆಯನ್ನೇ ಮಹಾ ಪ್ರಸಾದ ಎಂಬಂತೆ ಸ್ವೀಕರಿಸಿ ಸಮಸ್ತರಿಗೆ ಹಂಚುವ ಮಹತ್ಕಾರ್ಯ ಈ ಉತ್ಸವದಲ್ಲಿ ನಡೆಯುತ್ತದೆ.
ಇಲ್ಲಿ ನಾನು– ನೀನು ಎಂಬ ಬೇಧವಿಲ್ಲ. ಮೌಢ್ಯಕ್ಕೆ ಅವಕಾಶವಿಲ್ಲ. ದೇವರ ಹೆಸರಿನಲ್ಲಿ ಎಲ್ಲಾ ಜಾತಿ ಬಾಂಧವರು ಸೇರಿ ಅಜ್ಜನ ತೇರು ಎಳೆಯುವುದು ನೋಡುವುದೇ ಒಂದು ಸಂಭ್ರಮ ಸಡಗರ.
ಜನವರಿ 27 ರಂದು ಗವಿಸಿದ್ದೇಶ್ವರ ಮಠದ ಮಹಾ ರಥೋತ್ಸವ ನಡೆಯುತ್ತದೆ. ಮಠದ ಅಧಿಕೃತ ಉತ್ಸವ ಕೇವಲ ಮೂರು ದಿನಗಳಾದರೂ ತಿಂಗಳುಗಳ ಕಾಲ ಜಾತ್ರೆಯ ಸಂಭ್ರಮ ಇಲ್ಲಿ ಇರುತ್ತದೆ. ಈ ಜಾತ್ರೆಗೆ ಬರುವವರೆಷ್ಟೋ, ಹೋದವರೆಷ್ಟೋ ಲೆಕ್ಕ ಇಟ್ಟವರಿಲ್ಲ. ಬಂದವರಿಗೆ ದಾಸೋಹಕ್ಕೆ ಕೊರತೆ ಇಲ್ಲ. ಇಂತಹ ದಾಸೋಹಕ್ಕಾಗಿ ಈ ವರ್ಷ ಜಾತ್ರೆಯ ನಿಮಿತ್ಯ ಮಸ್ಕಿ
ಪಟ್ಟಣದ ಗ್ಯಾರೇಜ್ ಕೆಲಸ ಮಾಡುವ ಮೌನೇಶ್ ಬಳ್ಳಾರಿ ನೇತೃತ್ವದಲ್ಲಿ ಮೂರನೇ ವಾರ್ಡನ ಗೆಳೆಯರ ಬಳಗದಿಂದ ಒಂದು ಕ್ವಿಂಟಲ್ ರೊಟ್ಟಿ ಯನ್ನು ಹಾಗೂ ಗವಿ ಸಿದ್ದೇಶ್ವರ ಸೇವೆ ಸಮಿತಿ ಹಾಗೂ ಮಸ್ಕಿ ತಾಲ್ಲೂಕು ಯುವ ಬ್ರಿಗೇಡ್ ವತಿಯಿಂದ ಎರಡು ಕ್ವಿಂಟಲ್ ಹೋಳಿಗೆ ಯನ್ನು
ಕೊಪ್ಪಳದ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವಕ್ಕಾಗಿ ಬರುವ ಭಕ್ತರ ದಾಸೋಹಕ್ಕಾಗಿ
ಮಸ್ಕಿ ಪಟ್ಟಣ ಸೇರಿದಂತೆ ವಿವಿಧ ಹಳ್ಳಗಳಲ್ಲಿ ಇರುವ ಭಕ್ತರು ರೊಟ್ಟಿ ಮತ್ತು ಶೇಂಗಾ ಹೋಳಿಗೆ ದವಸ ಧಾನ್ಯಗಳನ್ನು ಸಮರ್ಪಣೆ ಮಾಡಲಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ