"ಭಾಷಾ ಕಲಿಕೆಯಿಂದ ಜ್ಙಾನಾಭಿವೃದ್ಧಿ"

ಕೊಟ್ಟೂರು : ಪಾಲಕರು ಆಂಗ್ಲಮಾಧ್ಯಮಕ್ಕೆ ಮಾರುಹೋಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದಾಗ ಕನ್ನಡ ಭಾಷಾಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ನ್ಯಾಯವಾದಿ ಎಂ.ಎಂ.ಜೆ. ಶರತ್ ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕಸಾಪ ತಾಲ್ಲೂಕು ಘಟಕದ ವತಿಯಿಂದ ಶ್ರೀಕೋಲಶಾಂತೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವ್ಯವಹಾರ ದೃಷ್ಠಿಯಿಂದ ಹಲವು ಭಾಷೆಗಳನ್ನು ಕಲಿತರು ನಮ್ಮ ಮಾತೃಭಾಷೆಯನ್ನು ಮರೆಯದೆ ಬಳಸಬೇಕು ಬೆಳಸಬೇಕು ಎಂದರು.

‘ ಮಾತೃಭಾಷೆ ಹಾಗೂ ಪ್ರಚಲಿತ ಶೈಕ್ಷಣಿಕ ಸಮಸ್ಯೆಗಳು’ ವಿಷಯದ ಬಗ್ಗೆ  ಉಪನ್ಯಾಸ ನೀಡಿದ ಪತ್ರಕರ್ತ ಎಸ್.ಎಂ.ಗುರುಪ್ರಸಾದ್ ಮಾತನಾಡಿ ಮಹಾತ್ಮ ಗಾಂಧೀಜಿಯವರು ಮೂಲ ಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕೆಂಬುದು ಅವರ ಕನಸಾಗಿತ್ತು ಎಂದರು.

ಶಿಕ್ಷಕರನ್ನು ಇತರೆ ಚಟುವಟಿಕೆಗಳಿಗೆ ನಿಯೋಜಿಸದೆ ಭೋದನೆಗೆ ಮಾತ್ರ ಸೀಮಿತಗೊಳಿಸಿದಾಗ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಪುಸ್ತಕಗಳ ಹೊರೆ ಕಡಿಮೆ ಮಾಡಿದಾಗ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು.

ವ್ಯವಹಾರ ಜ್ಞಾನಕ್ಕೆ ಬೇಕಾದ ಹಾಗೂ ಸ್ಥಳೀಯ ಅಂಶಗಳಿಗೆ ಆದ್ಯತೆ ನೀಡಿ ಪಠ್ಯದಲ್ಲಿ ಅಳವಡಿಸಿದಾಗ ನೋಡಿ ಕಲಿ ಮಾಡಿ ತಿಳಿ ಎಂಬಂತೆ ಮಕ್ಕಳು ಕಲಿಕೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಗ್ರಂಥಪಾಲಕ ಎಸ್.ಡಿ.ಈರಗಾರ,ಮುಖ್ಯ ಶಿಕ್ಷಕ ಎ.ಎಸ್.ವೀರೇಶ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ.ದಾರುಕೇಶ್, ಜೆಸಿಐ ಕೊಟ್ಟೂರು ಕಾಟನ್ ಮಾಜಿ ಅಧ್ಯಕ್ಷಅಂಗಡಿ ಪಂಪಾಪತಿ ಇವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಘಟಕಾಧ್ಯಕ್ಷ ದೇವರಮನಿ ಕೊಟ್ರೇಶ್ ವಹಿಸಿದ್ದರು. ಕವಿಗಳು ಹಾಗೂ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಅರವಿಂದ ಬಸಾಪುರ, ಎಸ್.ರಾಜಣ್ಣ, ಈಶ್ವರಪ್ಪ ತುರಕಾಣಿ, ಹೊನ್ನಮ್ಮ ತುರಕಾಣಿ, ಕೆ.ಶಶಿಕಲಾ, ಪದ್ಮ ಜಾಗಟಗೆರೆ, ರಾಜೇಂದ್ರಗೌಡ ಹಾಗೂ ಶಾಲಾ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ