"ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ"

ಕೊಟ್ಟೂರು : ಪೊಲೀಸ್ ಠಾಣೆಯ ಅಧಿಕಾರಿಗಳು ಗುರುವಾರ ನಡೆದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ಜಾತ ಕಾರ್ಯಕ್ರಮವನ್ನು ಪಾರಿವಾಳ ತೂರುವುದರಿಂದ ಸಿಪಿಐ,ಪಿಎಸ್ಐ ಗೀತಾಂಜಲಿ ಶಿಂಧೆ ಚಾಲನೆ ನೀಡಿದರು.

ಕಾಲ್ನಡಿಗೆಯ ಜಾತವನ್ನು ಮರಿಕೊಟ್ಟೂರೇಶ್ವರ ದೇವಸ್ಥಾನ ದಿಂದ ಗಾಂಧಿ ಸರ್ಕಲ್, ಉಜ್ಜಿನಿ ಸರ್ಕಲ್, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ಟಾಂಡ್ ಹತ್ತಿರ ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳನ್ನು ತ್ಯಜಿಸಲು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಾತನಾಡಿದ ಪ್ರಸ್ತುತ ಯುವ ಸಮುದಾಯದ ಮಾದಕ ವ್ಯಸನಿಗಳದಾಸನಾಗಿ ತನ್ನ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ತನ್ನ ಜೀವನವನ್ನು ತಾನೇ ಅಂತ್ಯಗೊಳಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾರಕವಾಗುವುದು ಅತ್ಯಂತ ದುರಾದೃಷ್ಟಕರ, ಆದ್ದರಿಂದ ಯುವ ಸಮುದಾಯದ ಮಾದಕ ಪ್ರಸನ್ನರನ್ನು ತ್ಯಜಿಸುವ ಮೂಲಕ ಸಾಮಾಜಿಕ ಜೀವನಕ್ಕೆ ಮುನ್ನುಡಿ ಬರೆಯಬೇಕು ಎಂದು ಸಿಪಿಐ ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.

ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ, ಮಾನಸಿಕ, ಮಾನಸಿಕ ಅಥವಾ ನಡವಳಿಕೆಯ ಸ್ಥಿತಿಯನ್ನು ಬದಲಾಯಿಸುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು, ಮಾದಕ ದ್ರವ್ಯ ಸೇವನೆ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುವ ಒಂದು ಸ್ಥಿತಿಯಾಗಿದೆ ಆಲ್ಕೋಹಾಲ್, ಗಾಂಜಾ ಮತ್ತು ನಿಕೋಟಿನ್ ಔಷಧಿಗಳ ಸೇವನೆಯು ಪರಿಗಣಿಸಲ್ಪಡುವ ವಸ್ತುಗಳ ಉದಾಹರಣೆಯಾಗಿದೆ ಮಾದಕ ವ್ಯಸನವು ನಿರಂತರವಾಗಿದೆ, ಮರುಕಳಿಸುವ ಮಿದುಳಿನ ಸ್ಥಿತಿ, ಗೀಳಿನ ಮಾದಕ ವ್ಯಸನ ಮತ್ತು ಬಳಕೆಯಿಂದ ಗುರುತಿಸಲಾಗಿದೆ, ಹಾಗೆ ಮಾಡುವುದರಿಂದ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಯುವ ಸಮುದಾಯ ಇಂತಹ ವ್ಯಸನಿಗಳಿಂದ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು, ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂಧೆ ,ಎಸ್‌ಎಸ್‌ಐ ಮಬುಲೇಶ್ವರಪ್ಪ , ರೇವಣಾರದ್ಯ, ನೂರ ಅಹ್ಮದ್. ಚಂದ್ರುಮೌಳಿ, ಹಾಗೂ ಮಹಿಳಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ