ಇಂಗ್ಲಿಷ್ ಕಾರ್ಯಗಾರಗಳು ಗುಣಮಟ್ಟದ ಕಲಿಕ ಸಾಮಾರ್ಥ್ಯ ಮತ್ತು ಫಲಿತಾಂಶ ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿ

ಕೊಟ್ಟೂರು: ವಿಜಯನಗರ ಪದವಿ ಪೂರ್ವ ಕಾಲೇಜುಳ ಆಂಗ್ಲಭಾಷಾ ಉಪನ್ಯಾಸಕರವೇಧಿಕೆ ಹಾಗೂ ಉಪನಿರ್ದೇಶಕರ ಕಛೇರಿ ವಿಜಯನಗರ ಬಳ್ಳಾರಿ ಹಾಗೂ ತಾಲೂಕು ಉಪನ್ಯಾಸಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ದ್ವೀತಿಯ ಪಿ.ಯು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ಹಾಗೂ ಫಲಿತಾಂಶ ಹೆಚ್ಚಳದ ಸಲುವಾಗಿ ಒಂದು ದಿನದ ಆಂಗ್ಲಭಾಷಾ ಬೋಧನಾ ಕಾರ್ಯಗಾರವನ್ನು ಕೊಟ್ಟೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಟ್ಟೂರುನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಗಾರವನ್ನು ಪ್ರಾಚಾರ್ಯ ಡಾ|| ಸೋಮಶೇಖರಪ್ಪ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡುತ್ತ ವಿದ್ಯಾರ್ಥಿಗಳು ಸಂಪಲ್ಮೂಳ ವ್ಯಕ್ತಿಗಳ ಬೋಧನೆಯನ್ನ ಆಸಕ್ತಿಯಿಂದ ಆಲಿಸಿದರೆ ಆಂಗ್ಲ ಭಾಷಾ ಸಾಮಾರ್ಥ ಹೆಚ್ಚುವುದಲ್ಲದೆ ಸುಲಭವಾಗಿ ಮತ್ತು ಉತ್ಸಹಭರಿತರಾಗಿ ಪರೀಕ್ಷಯನ್ನು ಎದುರಿಸಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಇಂತಹ ಕಾರ್ಯಗಾರಗಳು ಮಕ್ಕಳಲ್ಲಿ ಕಲಿಕೋತ್ಸಾಹ ಹೆಚ್ಚುಸುತ್ತದೆ. ಮೇಲಿಂದ ಮೇಲೆ ಆಂಗ್ಲ ಭಾಷಾ ವೇದೆಕೇಯವರು ಕಾರ್ಯಗಾರಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಬೇಕೆಂದರು. 

ಸಂಪಲ್ಮೂಲ ಉಪಾನ್ಯಸಕರುಗಳಾಗಿ ಹೂವಿನ ಹಡಗಲಿಯ ಶ್ರೀಯುತ ಕೊಟ್ರಗೌಡ್ರು, ಕಾಳೇಶ್, ಪರಶುರಾಮಪ್ಪ ನಾಗೂಜೆ, ರೇವಣ್ಣ, ಇಮ್ರಾನ್, ಬಸವರಾಜ ಇವರುಗಳು ಬೋಧನೆಯನ್ನು ನೀಡಿದರು. ಕೊಟ್ಟೂರೇಶ್ವರ ಕಾಲೇಜು ಭಾಗೀರಥಿ ಪಿ.ಯು ಕಾಲೇಜು ಕೊಗಳಿ ಪಿ.ಯು ಕಾಲೇಜುಗಳ ೫೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಡರು, ತರಬೇತಿ ನಂತರ ವಿದ್ಯಾರ್ಥಿಗಳು ಅಬಿಪ್ರಾಯವನ್ನು ಹಚ್ಚಿಕೊಳ್ಳುತ್ತ ಪರೀಕ್ಷೆ ಎದುರಿಸಲು ತುಂಬಾ ಉಪಯುಕ್ತವಾಗಿದು.ಎರಡು ದಿನದ ಅವಧಿಗೆ  ವಿಸ್ತರಿಸಿದರೆ ತುಂಬಾ ಪರಿಣಾಮಕಾರಿಯಾಗುತ್ತದೆ ಎಂದರು 

ಉಪನ್ಯಾಸಕರ ಡಾ. ಜಗದೀಶ್ ಚಂದ್ರ ಬೋಸ್ ಕಾರ್ಯಕ್ರಮ ಸಯೋಜಿಸಿ ನಿರೂಪಿಸಿ ಸ್ವಾಗತಿಸಿದರು.ಕೊಗಳಿ ಕಾಲೇಜಿನ ಪ್ರಾಚಾರ್ಯ ಶ್ರೀ ಜಯಣ್ಣ, ಉಪನ್ಯಾಸಕರು ಬೋದಕರ ಸಿಬ್ಬಂದಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ