*"ನಿವೇದನೆ" ಕವನ ಸಂಕಲನ ಬಿಡುಗಡೆ ಸಮಾರಂಭ*
ಕೊಟ್ಟೂರಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ರಂದು ನಡೆದ ಸ್ವಾಮಿ ವಿವೇಕಾನಂದರ ಸ್ಮರಣೆ,ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ " ನಿವೇದನೆ" ಕವನ ಸಂಕಲನ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದ ಉದ್ಘಾಟನೆಯನ್ನು ಹೊಸಪೇಟೆಯ ವಿಜಯನಗರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮೃತ್ಯುಂಜಯ ರುಮಾಲೆ ಯವರು ನೆರವೇರಿಸಿ ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ಇಂಟರ್ನೆಟ್ ಇಲ್ಲದೆ ಜೀವನ ನಡೆಸುವುದು ಅಸಾಧ್ಯವಾದ ಪರಿಸ್ಥಿತಿ ಇದ್ದು, ಇಂಟರ್ನೆಟ್ ಅನ್ನು ಕೇವಲ 10 ನಿಮಿಷ ಸ್ತಗಿತಗೊಳಿಸಿದರೆ ಜಗತ್ತು 10 ವರ್ಷಗಳಷ್ಟು ಹಿಂದಕ್ಕೆ ಸರಿಯುತ್ತದೆ. ಎಂದು ಹೇಳುತ್ತಾ, ವಿದ್ಯಾರ್ಥಿಗಳ ಬುದ್ಧಿ ಮನಸುಗಳು ಹಣ್ಣಾಗಬೇಕು, ಬೌದ್ಧಿಕ ಪಕ್ವತೆಯಿಂದ ಮಾತ್ರ ಸಾಧನೆ ಸಾಧ್ಯ, ಯಶಸ್ಸು ಏಕಾಗ್ರತೆಯಲ್ಲಿದೆ ಉನ್ನತ ಸಾಧನೆ ಮಾಡಿದ ವ್ಯಕ್ತಿಗಳ ಯಶಸ್ಸು ಮತ್ತು ಸಾಧನೆಗಳು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಬೇಕೆಂದು ತಿಳಿಸಿದರು. ಕಲಿಕೆ, ಕಾಯಕ ಶ್ರದ್ಧೆ, ನಿರಂತರ ಅಧ್ಯಯನಶೀಲತೆ ವಿದ್ಯಾರ್ಥಿಗಳ ಇಂದಿನ ಗುಣವಾಗಿ ಇರಬೇಕಾಗಿದೆ.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ಸಿದ್ದರಾಮ ಕಲ್ಮಠ ಅವರು ಕಾಲೇಜಿನ ಹಳೆಯ ವಿದ್ಯಾರ್ಥಿ, ಹಾಲಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಮುರಳಿದರ ರಚಿಸಿದ " ನಿವೇದನೆ " ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ದೈನಂದಿನ ಸಾಮಾನ್ಯ ಸಂಗತಿಗಳಲ್ಲಿಯೇ ಸಾಹಿತ್ಯ ಅಡಗಿದ್ದು ಅದಕ್ಕೆ ಕಲಾತ್ಮಕ ಸ್ಪರ್ಶ ನೀಡಿದಾಗ ಅದು ಸಾಹಿತ್ಯ ಕಥನವಾಗುತ್ತದೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ನೀವು ಕೂಡ ಸಾಹಿತ್ಯವನ್ನು ಅಧ್ಯಯನ ಮಾಡಿ ಬೌದ್ಧಿಕ ವಿಕಾಸ ಮಾಡಿಕೊಳ್ಳಬೇಕೆಂದು ಮತ್ತು ಸ್ವಾಮಿ ವಿವೇಕಾನಂದರು ಹೇಳಿದಂತೆ ಸದೃಢ ದೇಹ ಮತ್ತು ಮನಸ್ಸು ಹೊಂದಿ ಹೆಚ್ಚು ಹೆಚ್ಚು ಅಧ್ಯಯನಶೀಲರಾಗಿ ಜೀವನದಲ್ಲಿ ಪ್ರಗತಿ ಹೊಂದಬೇಕೆಂದು ತಿಳಿಸಿದರು. ಹಾಗೂ ಕಾಲೇಜಿನ ಹಳೆಯ ಸಾಧಕ ವಿದ್ಯಾರ್ಥಿ ಹಾಲಿ ಇಸ್ರೋ ವಿಜ್ಞಾನಿ ಬಿ ಎಚ್ ಎಂ ದ್ವಾರಕೇಶ್ ರವರ ಚಂದ್ರಯಾನ ಸಾಧನೆಯನ್ನು ಕೊಂಡಾಡುತ್ತಾ ಇಂಥವರ ಸಾಧನೆ ನಿಮಗೆ ಸ್ಫೂರ್ತಿ ಯಾಗಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕವನ ಸಂಕಲನದ ಲೇಖಕರಾದ ಮುರಳಿಧರ ರವರು ಮಾತನಾಡಿ ಮೊಬೈಲ್ ನಲ್ಲಿ ಕಳೆಯುವ ಸಮಯವನ್ನು ಅಧ್ಯಯನದಲ್ಲಿ ಬಳಸಿಕೊಳ್ಳಿ ಹಾಗೂ ಸ್ವಾಮಿ ವಿವೇಕಾನಂದರ ಮತ್ತು ಅನಿಕೇತನರಾದ ಕುವೆಂಪು ಅವರ ವಿಚಾರಧಾರೆಗಳು ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕೆಂದು ತಿಳಿಸಿದರು.
ಪ್ರಾಚಾರ್ಯರಾದ ಡಾ. ಎಂ ರವಿಕುಮಾರ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳಿಗೆ ವಿವೇಕಾನಂದರ ತತ್ವ ಆದರ್ಶಗಳು ದಾರಿ ದೀಪ ವಾಗಿವೆ ಎಂದು ಹೇಳುತ್ತಾ, ಕಾಲೇಜಿನ ಶೈಕ್ಷಣಿಕ ಹಿರಿಮೆಯನ್ನು ತಿಳಿಸುತ್ತಾ ಇಂದಿನ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಅಧ್ಯಯನ ಮಾಡಿದಾಗ ಉನ್ನತ ಮಟ್ಟಕ್ಕೆ ಇರಲು ಸಾಧ್ಯ ಎಂದು ಹೇಳಿದರು.
ಕೊಟ್ಟೂರಿನ ಕಟ್ಟಿಮನಿ ಹಿರೇಮಠದ ಷ. ಬ್ರ. ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಶ್ರೀಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಅಧಿಕಾರಿಗಳಾದ ಎ ಎಚ್ ಎಮ್ ಪ್ರಭಾಕರ, ವರ್ತಕರಾದ ವಿವೇಕಾನಂದ ಕನ್ನಾಕಟ್ಟಿ, ಅಂಬಳಿ ಗ್ರಾಮದ ಮುಖಂಡರಾದ ಕೆ ಸಿದ್ದಲಿಂಗಪ್ಪ ಕೊಟ್ಟೂರಿನ ತುಂಗಭದ್ರಾ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಎಂ ಕರಿಬಸಜ್ಜ ಕಾಲೇಜು ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ಕೆಬಿ ಮಲ್ಲಿಕಾರ್ಜುನ್ ಡಿ ಎಸ್ ಶಿವಮೂರ್ತಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಂ ಎಚ್ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು .
ಉಪನ್ಯಾಸಕರುಗಳಾದ ಶ್ರೀ ಬಿ ಎಸ್ ಪಾಟೀಲ್, ಶ್ರೀ ಟಿ ರೇವಣ್ಣ, ಡಾ. ಕೆ ಎಸ್ ಶಿವಪ್ರಕಾಶ್, ನಿಜಲಿಂಗ ಸ್ವಾಮಿ, ಅನಿಲ್ ಕುಮಾರ್, ಶ್ರೀಮತಿ ಅನಿತಾ, ಶ್ರೀಮತಿ ಶಿಲ್ಪ, ಶ್ರೀ ಮುಹಮ್ಮದ್ ಅಖಿಲ್, ಬಸವರಾಜ ಬಣಕಾರ, ರಾಕೇಶ್, ಮಲ್ಲಿಕಾರ್ಜುನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು. ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರೆ, ಶ್ರೀ ಕೆ ಎಂ ಪ್ರಭಾಕರ್ ಸ್ವಾಗತಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ