"ಗಂಗಿಮನ್ಯಾಗ - ಗೌರಿ ಹೊಲದಾಗ" ನಾಟಕ ಆರಂಭ : ನೀಲಾ ಜೇವರ್ಗಿ

ವರದಿ -- ಮಂಜುನಾಥ್ ಕೋಳೂರು ಕೊಪ್ಪಳ

 ಕೊಪ್ಪಳ ಜನವರಿ 26 : - ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ಧವಾದ ಕೊಪ್ಪಳದ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಆಂಗವಾಗಿ ನಗರದ ಮಾಸ್ತಿ ಶಾಲೆ ಹತ್ತಿರ ಹಾಕಿರುವ ಭವ್ಯರಂಗ ಸಂಚಿಕೆಯಲ್ಲಿ ಜನವರಿ 27 ರಿಂದ ಗಂಗಿ ಮನ್ಯಾಗ ಗೌರಿ ಹೊಲದಾಗ ನಾಟಕ ಆರಂಭವಾಗಲಿದೆ . ಈ ನಾಟಕ ಹಿರಿಯ ರಂಗಭೂಮಿ ಕಲಾವಿದ ಶ್ರೀ ಜೇವರ್ಗಿ ರಾಜಣ್ಣ ಅವರ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಟ ಸಂಘ ಜೇವರ್ಗಿ ಕಂಪನಿಯು ಈ ನಾಟಕವನ್ನು ಆಡಲಿದೆ.

ಪ್ರತಿ ದಿನ ಸಂಜೆ 6:15 ಕ್ಕೆ ಹಾಗೂ ರಾತ್ರಿ 9:45 ಕ್ಕೆ ಎರಡು ಪ್ರದರ್ಶನ ಇರುತ್ತವೆ. ಈ ನಾಟಕವನ್ನು ಮಹದೇವ್ ಹೊಸೂರು ರಚಿಸಿದ್ದು , ಹಿರಿಯ ನಾಟಕ ಕಲಾವಿದ ಜೇವರ್ಗಿ ರಾಜಣ್ಣ ನಿರ್ದೇಶಿಸಿದ್ದಾರೆ. ಎಂದು "ಮಜಾ ಭಾರತ ರಿಯಾಲಿಟಿ ಶೋ " ದ ಪ್ರಸಿದ್ಧರಾದ ಕಲಾವಿದೆ ನೀಲಾ ಜೇವರ್ಗಿ ಅವರು ನಗರದ ಪತ್ರಿಕಾಗೋಷ್ಠಿಯಲ್ಲಿ ನಾಟಕದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಕಲಾವಿದೆ ನೀಲಾ ಜೇವರ್ಗಿ ಅವರು ಈ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಇವರು ಜೇವರ್ಗಿ ರಾಜಣ್ಣನವರ ಪುತ್ರಿಯಾಗಿದ್ದು . ಉಳಿದಂತ ಕಲಾವಿದರಾದ ಶ್ವೇತಾ ಶಿವಮೊಗ್ಗ , ರೇಣುಕಾ ಮುಧೋಳ , ಮಮತಾ ಚಿತ್ರದುರ್ಗ , ರಾಘವೇಂದ್ರ ಮುಧೋಳ , ಬಸು ಧಾರವಾಡ , ನಾಗರಾಜ್ ಗೋಕಾವಿ , ಚೇತನ್ ಪಾಟೀಲ್ , ಕುಮಾರ್ ಮಂಡ್ಯ , ಮುಂತಾದವರು ಕಲಾವಿದರು ಅಭಿನಯಿಸಲಿದ್ದಾರೆ . ನಾಟಕದ ವಾದ್ಯ ವೃಂದದಲ್ಲಿ ಪಂಚಾಕ್ಷರಿ ಬೆಂಗಳೂರು ಹಾಗೂ ಅಮರೇಶ ಸಾಥ್ ನೀಡಲಿದ್ದಾರೆ. ಈಗಾಗಲೇ ಕೊಪ್ಪಳ ಜಿಲ್ಲೆಯ ಪಕ್ಕದ ತಾಲೂಕು ಕುಕುನೂರಿನಲ್ಲಿ ಶ್ರೀ ಗುದ್ನೆಪ್ಪಜ್ಜನ ಜಾತ್ರೆಯಲ್ಲಿ 52 ಪ್ರದರ್ಶನವನ್ನು ಕಂಡ ಈ ಹಾಸ್ಯ ಭರಿತ ನಾಟಕ ಜಯಭೇರಿ ಬಾರಿಸಿದ್ದು ,ಅಲ್ಲಿ ನಿತ್ಯ ಎರಡು ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ . ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಆರಂಭಗೊಂಡ ಈ ನಾಟಕ ಅಲ್ಲಿ ಕೆಲವು ಪ್ರದರ್ಶನವನ್ನು ಯಶಸ್ವಿ ಕಂಡಿದೆ. ಟಿವಿ ಧಾರವಾಹಿ, ಸಿನಿಮಾ ಹಾಗು ರಿಯಾಲಿಟಿ ಶೋ ಗಳಲ್ಲಿ ದ್ವಂದ್ವಾರ್ಥ ಸಂಭಾಷಣೆಗಳೇ ಮಿಂಚುತ್ತಿರುವ ಸಂದರ್ಭದಲ್ಲಿ ಅಶ್ಲೀಲ ಸಂಭಾಷಣೆ ಇಲ್ಲದ, ಐಟಂ ಸಾಂಗ್ ಗಳಿಲ್ಲದ ಈ ನಾಟಕ ಹಾಸ್ಯದ ಜೊತೆ , ನೈತಿಕತೆ , ಮನೋವಿಕಾಸ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ಇರುವ ಸಾಮಾಜಿಕ ನಾಟಕ ಇದಾಗಿದೆ. ಕುಟುಂಬ ಸಮೇತ ನೋಡುವ ನಾಟಕವಾಗಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಪ್ರೇಕ್ಷಕರು ಬಂದು ನಾಟಕ ನೋಡಲು ಕೋರುತ್ತೇನೆ. ಈ ನಾಟಕ ನಿರ್ದೇಶಸಿದ ಜೇವರ್ಗಿ ರಾಜಣ್ಣ ನವರು ಕಳೆದ 36 ವರ್ಷಗಳಿಂದ ಸಕ್ರಿಯವಾಗಿ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಮಾಲೀಕರು . ಅವರ ರಚಿಸಿದ 12 ನಾಟಕಗಳಲ್ಲಿ " ಕುಂಟ ಕೋಣ -ಮೂಕ ಜಾಣ" ನಾಟಕ ಅತ್ಯಂತ ಜನಪ್ರಿಯವಾಗಿದೆ. ರಾಜ್ಯದ್ಯಂತ 35 ಸಾವಿರಕ್ಕೂ ಅಧಿಕ ಪ್ರಯೋಗ ಕಂಡು ದಾಖಲೆ ನಿರ್ಮಿಸಿದ ಏಕೈಕ ವೃತ್ತಿ ಕಂಪೆನಿ ನಾಟಕ .ಕೊಪ್ಪಳದಲ್ಲಿ 200 ಕ್ಕೂ ಅಧಿಕ ಪ್ರಯೋಗಗಳಾಗಿವೆ , ಯೂಟ್ಯೂಬ್ ನಲ್ಲಿ ಈ ನಾಟಕವನ್ನು 1.35 ಕೋಟಿ ಪ್ರೇಕ್ಷಕರು ವೀಕ್ಷಿಸಿ, ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದ ಸುಂದರ ಸಾಮಾಜಿಕ ನಕ್ಕು ನಲಿಯುವಂತ ನಾಟಕವಿದು . ನಾಟಕದ ಕಲಾವಿದರಿಗೆ " ಪ್ರೇಕ್ಷಕರೇ ದೇವರು" ಆದ್ದರಿಂದ ಹೆಚ್ಚಿನ ಪ್ರೇಕ್ಷಕರು ಕುಟುಂಬ ಸಮೇತ ಬಂದು ನಾಟಕ ನೋಡಿ ನಲಿಯಬೇಕೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಾಟಕ ಕಂಪನಿಯ ವ್ಯವಸ್ಥಾಪಕರಾದ ವಿನಾಯಕ್ ಬೇನಳ್ಳಿ, ಕಲಾವಿದ ರಾಘವೇಂದ್ರ ಮುಧೋಳ್ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ