ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಅಂದಾಜು ರೂ 10 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ 462 ನೇ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಉದ್ಘಾಟನೆ
ವಿಜಯನಗರ ಜಿಲ್ಲೆ ಕೊಟ್ಟೂರು ಯೋಜನಾ ವ್ಯಾಪ್ತಿಯ ನಿಂಬಳಗೆರೆ ವಲಯದ ಮಂಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ಅಂದಾಜು ರೂ 10 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ 462 ನೇ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯನಗರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಸತೀಶ್ ಶೆಟ್ಟಿ ಇವರು ಬಸವೇಶ್ವರ ದೇವಸ್ಥಾನದ ರಥ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ನೀಡಿದ ರೂ 25000/DD ನೀಡಿ /ನೀರಿನ ಘಟಕದ ಯಂತ್ರವನ್ನು ಭಾನುವಾರ ಚಾಲನೆ ಮಾಡಿ ಶುದ್ಧ ನೀರನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಉದ್ಘಾಟಿಸಿದರು
ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಸಮಾಜಕ್ಕೆ ಶ್ರೀ ಕ್ಷೇತ್ರದ ಪೂಜ್ಯ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಶುದ್ದ ನೀರಿನ ಮಹತ್ವದ ಬಗ್ಗೆ ಹಾಗೂ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ರಾಜಶೇಖರ ಗೌಡ್ರು ವಹಿಸಿದ್ದರು ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ನವೀನ್ ಕುಮಾರ್ / ಗ್ರಾಮ ಪಂಚಾಯತ್ ನ ಸದಸ್ಯರು ಗಳಾದ ಬಸವರಾಜು, ಶ್ರೇಮತಿ ನೇತ್ರಾವತಿ ಓಬಳೇಶ್, ಶ್ರಿಮತಿ ಉಮಾಸಿದ್ದೇಶ್, ಶ್ರಿಮತಿ ಮಹೇಶಮ್ಮ ಶರಣಪ್ಪ / ಊರಿನ ಪ್ರಮುಖರು/ ಒಕ್ಕೂಟದ ಪದಾಧಿಕಾರಿಗಳು / ಯೋಜನೆಯ ಕಾರ್ಯಕರ್ತರು/ ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಐದು ದೇವಸ್ಥಾನಗಳಿಗೆ 3,75,000 ಮೊತ್ತ / ಸಮುದಾಯ ಭವನಕ್ಕೆ ರೂ 50,000 / ವಾತ್ಸಲ್ಯ ಕಾಮಗಾರಿಗೆ 24,000 / ಮೂರು ಜನ ನಿರ್ಗತಕರಿಕರಿಗೆ ವರ್ಷಕ್ಕೆ ರೂ 27000/ ಮಾಶಾಸನ / ರಥ ನಿರ್ಮಾಣ ಕಾರ್ಯಕ್ಕೆ 25000 / ಮೂರು ಜನ ಮಕ್ಕಳಿಗೆ ರೂ 64,000 ಸುಜ್ಞಾನ ನಿಧಿ ಶಿಷ್ಯವೇತನ ಶ್ರೀ ಕ್ಷೇತ್ರದ ಮೂಲಕ ಮತ್ತು ಯೋಜನೆ ಮೂಲಕ ಸದರಿ ಗ್ರಾಮಕ್ಕೆ ಬಂದಿದ್ದು ಆರ್ಥಿಕ ಸಹಾಯವನ್ನು ಗ್ರಾಮಸ್ಥರು ಸ್ಮರಿಸಿದರು,
ಕಾರ್ಯಕ್ರಮ ದಲ್ಲಿ ಶುದ್ಧಗಂಗಾ ಮೇಲ್ವಿಚಾರಕರು ಬಸವರಾಜ್, ಕೃಷಿ ಮೇಲ್ವಿಚಾರಕರು ಮಹಾಂತೇಶ, ಮೇಲ್ವಿಚಾರಕಿ ಯಶೋದಾ ಹಾಗು ಸೇವಾಪ್ರತಿನಿಧಿ, ಸಿಎಸ್ಸ ಸೇವಾದಾರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ