ಹೋಟೆಲ್ ಗಳ ಸ್ವಚ್ಛತೆ ಇಲ್ಲ |ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿತಿ.|ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕರು ನಿರ್ಲಕ್ಷ್ಯ..!
ಮೌಖಿಕವಾಗಿ ಹೇಳಿರುವ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕರು ಅನುಷಾ ಬೇಜವಾಬ್ದಾರಿ ಉತ್ತರ..!
"ಹೋಟೆಲ್ ಗಳ ಸ್ವಚ್ಛತೆ ಪಾಲಿಸುತ್ತಿಲ್ಲ, ಚರಂಡಿ ಮೇಲೆ ಕಟ್ಟೆ ಕಟ್ಟಿರುವುದು, ಪುಟ್ ಬಾತ್ ಹೋಟೆಲ್ ಕ್ಲೀನಿಂಗ್ ನೀಡಲಾಗಿದೆ: ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಆರೋಪ ವ್ಯಕ್ತಪಡಿಸಿದರು "
ಕೊಟ್ಟೂರು: ಪಟ್ಟಣದ ಕೆಲವು ಹೊಟೆಲ್‌ಗಳಲ್ಲಿ ಗ್ರಾಹಕರಿಗೆ ಕನಿಷ್ಠ ಮಟ್ಟದ ಸೌಲಭ್ಯವನ್ನು ಕಲ್ಪಿಸಿಲ್ಲ. ಇದರಿಂದ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂತಹ ಹೋಟೆಲ್‌ಗಳ ಮೇಲೆ ಕ್ರಮ ತೆಗೆದುಕೊಳ್ಳದೆ ಇರುವುದು ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
ಪಟ್ಟಣದ ಹಲವು ಹೋಟೆಲ್‌ಗಳಲ್ಲಿ ಜನರು ಉಪಯೋಗಿಸಲು ಬರದಷ್ಟು ಕೆಟ್ಟದ್ದಾಗಿದೆ. ಅಲ್ಲದೆ ಇಲ್ಲಿಯ ಹೋಟೆಲ್‌ಗಳ ದರಗಳು ಹೆಚ್ಚಾಗಿದ್ದು ಯಾವುದೇ ಸ್ವಚ್ಛತೆಯನ್ನು ಪಾಲಿಸುತ್ತಿಲ್ಲ, ಜನರಿಗೆ ಫಿಲ್ಟರ್ ನೀರನ್ನು ಕೊಡುತ್ತಿಲ್ಲ, ಆಹಾರ ಸಾಮಗ್ರಿಗಳನ್ನು ತೆರದಿಡಲಾಗಿದೆ.ಅದ್ದರಿಂದ ಸಾಂಕ್ರಾಮಿಕ ರೋಗಗಳು ಹರಡವು ಬೀತಿ ಎದುರಾಗಿದೆ. ಈಗಲಾದರೂ ಹೋಟೆಲ್‌ನವರು ಸ್ವಚ್ಛತೆ ಕಾಪಾಡದಿದ್ದರೆ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಹೋಟೆಲ್ ಪ್ಲೇಟ್ ಇತರೆ ಕ್ಲೀನಿಂಗ್ ಮಾಡಲಿಕ್ಕೆ ಪುಟ್ ಬಾತ್ ಬಳಸಿಕೊಂಡಿರುವ ಹೋಟೆಲ್ ಗಳು ಮತ್ತು ಹೋಟೆಲ್ ನಡೆಸುವುದಕ್ಕೆ ಪರವಾನಿಗೆ ಇಲ್ಲದೆ ನಡೆಸುತ್ತಿರುವುದನ್ನು ನೋಡಿಯು ನೋಡದಂತಿರುವುದು ಸ್ಥಳೀಯ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕರು ನಿರ್ಲಕ್ಷಿತ ಎದ್ದು ಕಾಣುತ್ತಿದೆ.
ಆದ್ದರಿಂದ ಸ್ವಚ್ಛತೆ ಇಲ್ಲದ ಎಲ್ಲಾ ಹೋಟೆಲ್‌ನವರಿಗೆ ನಿಯಮ ಪಾಲನೆ ಮಾಡಬೇಕು. ಸ್ವಚ್ಛತೆಯ ಕಡೆ ಗಮನ ಹರಿಸದ ಹಿನ್ನೆಲೆ ಜನ ಸಾಮಾನ್ಯರ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿದೆ. ಇಂತಹ ವ್ಯಾಪಾರಸ್ಥರು ಸರಕಾರದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.
ಅಭಿವೃದ್ಧಿಯತ್ತ ಒಯ್ಯುತ್ತಿರುವ ಕೊಟ್ಟೂರು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಇಂತಹ ಸ್ವಚ್ಛತೆ ಇಲ್ಲದ ಹೋಟೆಲ್ಲಿಗೆ ನಿಯಮ ಪಾಲಿಸದಿದ್ದಲ್ಲಿ ದಂಡ ವಿಧಿಸಿ, ಪರವಾನಿಗೆ ರದ್ದುಪಡಿಸಿ, ಎಚ್ಚರಿಕೆ ನೀಡಬೇಕೆಂದು ಸಾರ್ವಜನಿಕರಾದ ಚಂದ್ರಶೇಖರ್ ಆಗ್ರಹಿಸಿದ್ದರು.
ರಾಜ್ಯ ಹೆದ್ದಾರಿ ಆಗಿರುವುದರಿಂದ ಫುಟ್ಬಾತ್ ನಿಂದ ಇಂತಿಷ್ಟು ಜಾಗವನ್ನು ಬಿಟ್ಟು ಕಟ್ಟಡ ಕಟ್ಟಬೇಕೆಂದು. ನಿಯಮವಿದೆ ಅಂದರೆ ಲೋಕೋಪಯೋಗಿ ಇಲಾಖೆಯವರು ಇಂತವರಿಗೆ ನಿಯಮದ ಪ್ರಕಾರ ನೋಟಿಸ್ ನೀಡುವಂತೆ ಮತ್ತು ಕಾನೂನಿನ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸ್ಥಳಿಯ ಸಿಎಂಎಲ್ ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಹಾಗೂ ಡಿಎಸ್ಎಸ್ ಸಂಘಟನೆಗಳು ಒತ್ತಾಯಿಸಿದರು.
ಕೊಟ್ -1
ನೀರನ್ನು ಕುದಿಸಿ ಆರಿಸಿ ಕುಡಿಯಿರಿ : ಈಗಾಗಲೆ ಜಿಲ್ಲಾಧ್ಯಂತ ಮತ್ತು ತಾಲೂಕಿನಲ್ಲಿ ಈಗ ಜ್ವರವೂ ಕಾಣಿಸಿಕೊಂಡಿದೆ ಜನರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ನೀರನ್ನು ಕುದಿಸಿ ಆರಿಸಿ ಕುಡಿಯಬೇಕು ಜಾತ್ರೆಗಳಲ್ಲಿ ಹಾಗೂ ಸಂತೆ ನಡೆಯುವ ಸಮಯದಲ್ಲಿ ತಿಂಡಿ ತಿನಿಸುಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಹೇಳಿದರು.
ಕೊಟ್ -2
ಇಲ್ಲಿಯ ಪಶು ಆಸ್ಪತ್ರೆ ಎದುರುಗಡೆಗೆ ಇರುವ ಲಕ್ಕಿ ಹೋಟೆಲ್ ಸ್ವಚ್ಛತೆ ಇಲ್ಲ , ಚರಂಡಿ ಮೇಲೆ ಕಟ್ಟೆ ಕಟ್ಟಿರುವುದು, ಹೋಟೆಲಿಗೆ ಬರುವ ಗ್ರಾಹಕರಿಗೆ ಸರಿಯಾದ ಸೌಲಭ್ಯವಿಲ್ಲ ,ನಾಲ್ಕೈದು ಬಾರಿ ಸಾರ್ವಜನಿಕರು ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿದರೆ, ಮೌಖಿಕವಾಗಿ ಹೇಳಿದ್ದೇನೆ ಎಂದು ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕರು ಅನುಷಾ ಅವರು ಪತ್ರಿಕೆಗೆ ಉತ್ತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ