ಏಷ್ಯಾ ಖಂಡದಲ್ಲಿಯೇ ನಂಬರ್ ಒನ್ ಸೌರಶಕ್ತಿಯವಿದ್ಯುತ್ ಕೇಂದ್ರ ಭಾರತದಮೌಂಟ್ಅಬು . ಮೌಂಟ್‌ಅಬು’’ ಭೂಮಿಯ ಮೇಲಿನ ಸ್ವರ್ಗ.

ವಿಶೇಷ ವರದಿ - ಮಂಜುನಾಥ ಕೋಳೂರು ಕೊಪ್ಪಳ

    ಕೊಪ್ಪಳ ಜನವರಿ 2024 : - ೨೦೨೩ರ ವರ್ಷ ಸುಂದರವಾದ ನೆನಪಿಡುವ ವರ್ಷ. ರಾಜಸ್ತಾನ ರಾಜ್ಯದ ಮೌಂಟ್‌ಅಬು ಇದೊಂದು ಭೂಮಿಯ ಮೇಲಿನ ಸ್ವರ್ಗ ಎಂದೇ ಹೇಳಬಹುದು ಇದು ಸರ್ವಧರ್ಮದ ಪ್ರೀತಿ ವಿಶ್ವಾಸದ ವಿಶ್ವವಿಖ್ಯಾತವಾದ ಶಾಂತಿ ಕೇಂದ್ರ . ಗುಜರಾತ್-ರಾಜಸ್ಥಾನ ರಾಜ್ಯಗಳ ಗಡಿಯಲ್ಲಿರುವ ಇದು ಮರುಭೂಮಿ ರಾಜ್ಯವಾದ ರಾಜಸ್ಥಾನದ ಏಕೈಕ ಗಿರಿಧಾಮ. ಇಲ್ಲಿರುವ ನಿಸರ್ಗ ಸೌಂದರ್ಯತೆ ಶ್ರೀಮಂತಿಕೆಯ ರಮಣೀಯತೆ ಬದುಕಿಗೊಂದು ಮನಮೋಹಕತೆಯನ್ನು ತಂದುಕೊಡುವಂಥದು ಮೌಂಟ್‌ಅಬು.  

  ಶಿರೋಹಿ ಜಿಲ್ಲಾ , ತಾಲೂಕು ಕೇಂದ್ರವಾದ ಮೌಂಟ್ ಅಬು ಮಲಯ-ಮಾರುತದಂಥ ತಣ್ಣನೆಯ ಗಾಳಿ ಬೀಸುವ ಗಿರಿಧಾಮ. ಅದು ಜೈವಿಕ ಸೂಕ್ತ ವಲಯ ಗಿರಿಧಾಮವಾಗಿದೆ.ಊರೂ ದೊಡ್ಡದಾಗಿಯೇ ಬೆಳೆದಿದೆ - ತುಂಬಾ ಪ್ರಶಾಂತವಾದದು, 

    ಕೊಪ್ಪಳದಿಂದ ೩೩ ಜನರ ತಂಡ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಹಾಗೂ ಬ್ರಹ್ಮಕುಮಾರಿ ಸ್ನೇಹ ಅಕ್ಕನವರೊಂದಿಗೆ ರಾಜಸ್ಥಾನದ ಮೌಂಟ್ ಅಬುಗೆ ಆರು ಜನ ಪತ್ರಕರ್ತರಾದ ಎಂ.ಸಾದೀಕ್‌ಅಲಿ , ಎಚ್.ಎಸ್.ಹರೀಶ್, ಮಂಜುನಾಥ ಕೋಳೂರು , ಜಿ.ಎಸ್.ಗೋನಾಳ, ಹನುಮಂತ ಹಳ್ಳಿಕೇರಿ, ಶಿವರಾಜ್ ನುಗಡೋಣಿ, ಕೊಪ್ಪಳದ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಿವಗಂಗಮ್ಮ ಶಿವರಡ್ಡಿ ಭೂಮಕ್ಕನವರ್, ಶ್ರೀಮತಿ ಕಿಶೋರಿ ಬೂದನೂರ, ಶ್ರೀಮತಿ ಶಿವಲೀಲಾ ಉತ್ತಂಗಿಮಠ, ಶ್ರೀಮತಿ ಪದ್ಮಾವತಿ ಕಾಂಬ್ಳೆ , ಮೋರಾರ್ಜಿ ದೇಸಾಯಿ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ರಾಜೇಶ್ವರಿ , ಶ್ರೀಮತಿ ನೀಲಮ್ಮ ಸಜ್ಜನ, ಶ್ರೀಮತಿ ವಿಜಯಲಕ್ಷ್ಮಿ ದೇಸಾಯಿ , ಶ್ರೀಮತಿ ಜ್ಯೋತಿ ರಾಮನಗೌಡ ಸೇರಿದಂತೆ ಇತರರು ಮೌಂಟ್‌ಅಬುಗೆ ಪ್ರಯಾಣಿಸಲಾಗಿತ್ತು. ಮೌಂಟ್ ಅಬುದ ರಾಷ್ಟ್ರೀಯ ಮೀಡಿಯಾ ವಿಂಗ್ - ಮಾಧ್ಯಮ ಮುಖ್ಯಸ್ಥರಾದ ಕರುಣಾ ಬಾಯಿ ಯವರ ನಮ್ಮ ಕರ್ನಾಟಕದ ಉಡುಪಿ-ಮಂಗಳೂರು ನವರು ಎನ್ನುವುದು ವಿಶೇಷತೆ. ಆ ಒಂದು ಇಳಿ ವಯಸ್ಸಿನಲ್ಲಿಯೂ ಪರಮಾತ್ಮನ ಸೇವೆ ಮಾಡುವ ಉತ್ಸುಕತೆ ಇಡೀ ದೇಶದ ಮೀಡಿಯವಿಂಗ್ ಜವಾಬ್ದಾರಿಯನ್ನು ಹೋತ್ತು ನಿಭಾಯಿಸುವ ಅವರ ಶಕ್ತಿ ಹಾಗೂ ಮಾಧ್ಯಮದವರ ಜೊತೆ ಆತ್ಮೀಯತೆಯಿಂದ ನಡೆದುಕೊಳ್ಳುವ ಸ್ವಭಾವ ನಮಗೆ ಇಷ್ಟವಾಯಿತು ನಿಜಕ್ಕೂ ಮೌಂಟ್ ಅಬುದಲ್ಲಿನ ಅದ್ಭುತ. ರಾಷ್ಟ್ರೀಯ ಮೀಡಿಯಾ ಮಾಧ್ಯಮ ವಿಂಗ್ ಸಮಾರೋಪದ ಸಮಾರಂಭದ ಅತಿಥಿಯಾಗಿ ಆಗಮಿಸಿರುವ ಬ್ರಹ್ಮಕುಮಾರಿ ಶಿವಾನಿ ಅಕ್ಕ (ದೀದಿ ಯವರು ) ನವರು ಇಂದಿನ ದಿನಮಾನಗಳಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯವಾಗಿದ್ದು , ವಸ್ತುನಿಷ್ಠೆಗೆ ಪ್ರಾಮುಖ್ಯತೆ ಕೊಟ್ಟು ಸಕಾರಾತ್ಮಕವಾದ ವಿಷಯವನ್ನು ಬಿತ್ತರಿಸುವ ಹಾದಿಯಲ್ಲಿ ಸಾಗಬೇಕು ಎಂದು ಹೇಳುವುದರೊಂದಿಗೆ ಅವರು ನೀಡಿರುವಂಥ ಭಗವಂತನ ಸಂದೇಶ ಅದ್ಭುತ ಆಧ್ಯಾತ್ಮಿಕ ಸಂದೇಶವಾಗಿತ್ತು . ಭಗವಂತನ ಬಗ್ಗೆ ಕರ್ನಾಟಕದವರಾದ ಸುರೇಶ್ ಬಾಯಿ ಯವರು ಜ್ಞಾನ ಸರೋವರ ಆರ್ಟ್ ಗ್ಯಾಲರಿಯಲ್ಲಿ ತಿಳಿಸಿಕೊಟ್ಟ ಆಧ್ಯಾತ್ಮಿಕ ಜ್ಞಾನ ಮನ-ಮುಟ್ಟುವಂತದ್ದಾಗಿತ್ತು . ಅದೊಂದು ಅದ್ಭುತ ವಿಸ್ಮಯಕ್ಷಣವಾಗಿತ್ತು .



ಮೌಂಟ್‌ಅಬುದಲ್ಲಿನ ಶಾಂತಿವನ ನೋಡಲು ಬಹಳ ಸುಂದರವಾದ ಶಾಂತಿ ತಾಣ. ಅಲ್ಲಿನ ಪರಿಸರ ಎಂಥವರನ್ನೂ ತಟ್ಟನೇ ಮೋಡಿ ಮಾಡುತ್ತದೆ. ಶಾಂತಿವನ ಅಲ್ಲಿನ ವ್ಯವಸ್ಥೆ , ಅಲ್ಲಿರುವ ಸಿಬ್ಬಂದಿವರ್ಗ ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ . ಇನ್ನು ಅಲ್ಲಿನ ಊಟ-ಉಪಹಾರದ ವ್ಯವಸ್ಥೆ ಕೂಡ ಅಷ್ಟೆ ಅಚ್ಚುಕಟ್ಟಾಗಿದೆ ದಿನವೂ ಲಕ್ಷಾಂತರ ಜನರಿಗೆ ಶುದ್ಧ ಸಸ್ಯಾಹಾರ ಸಿದ್ದಪಡಿಸಲಾಗುತ್ತದೆ. ಇಲ್ಲಿನ ವಿಶೇಷವೆಂದರೆ ಸೂರ್ಯನ ಬಿಸಿಲಿನಿಂದ 8ಗಂಟೆಗೆ ಒಂದು ಮೇಘ ವ್ಯಾಟ್ಸ್ ಸೌರಶಕ್ತಿಯ ಅಂದರೆ ಒಂದು ದಿನಕ್ಕೆ (24 ಗಂಟೆಗೆ- 3mv) ಮೂರು ಮೇಘ ವ್ಯಾಟ್ಸ್ ವಿದ್ಯುತ್ ಉತ್ಪಾದನೆ ಮಾಡುವ ಪ್ಲಾಂಟ್ 6 ಎಕರೆ ಜಮೀನು ವ್ಯಾಪ್ತಿ ಹೊಂದಿದ್ದು 2010 ರಿಂದ 2016 ರವರೆಗೆ ನಿರ್ಮಾಣವಾದ ಪ್ರಾಜೆಕ್ಟ್, 2017 ರಿಂದ ಸೌರ ಶಕ್ತಿಯ ವಿದ್ಯುತ್ ಉತ್ಪಾದನೆಯ ಪ್ರಾರಂಭ, ಅದರ ನಿರ್ಮಾಣದ ಒಟ್ಟು ವೆಚ್ಚ 75 ಕೋಟಿ ರೂಪಾಯಿಗಳು. ಜಯಸಿಂಹ ಬಾಯಿ ರವರ ಪ್ಲಾಂಟ್ ಮೇಲ್ವಿಚಾರಕರ ನೇತೃತ್ವದಲ್ಲಿ ನೆಲೆ ನಿಂತ ಪ್ರಾಜೆಕ್ಟ್ ಗಾಗಿ 2019 ರಲ್ಲಿ ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಫೀಸ್ ಅಂಡ್ ಎಜುಕೇಶನ್ ಗೌರ್ಮೆಂಟ್ ಆಫ್ ಇಂಡಿಯಾ ಬೆಂಗಳೂರು ಕೆ ಎ - 0095691 ಡಾಕ್ಟರೇಟ್ ಅವಾರ್ಡ್ ದೊರಕಿದ್ದು.

 2003 ರಲ್ಲಿ ಅಂದಿನ ಗುಜರಾತ್ ಮುಖ್ಯ ಮಂತ್ರಿಗಳಾಗಿದ್ದ ಇಂದಿನ ಭಾರತದ ಪ್ರಧಾನಿ ದಾಮೋದರ್ ನರೇಂದ್ರ ಮೋದಿಜಿ ಅವರು ಈ ಸೌರಶಕ್ತಿಯ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಾಜೆಕ್ಟಿನ ಬಗ್ಗೆ ಎಲ್ಲಾ ಸಮಗ್ರವಾದ ಮಾಹಿತಿಯನ್ನು ಪಡೆದುಕೊಂಡಿದ್ದರು. ಹಾಗೂ ಪ್ರಧಾನಿ ಮೋದಿಜಿಯವರು 2022 ರಲ್ಲಿ ಈ ಸೌರ ಶಕ್ತಿಯ ಬಗ್ಗೆ ಹಾಗೂ ಮೌಂಟ್ ಅಬು ಕಾರ್ಯಕ್ರಮದ ಬಗ್ಗೆ ಉದ್ದೇಶಿಸಿ ದೆಹಲಿಯಿಂದ ಕಾನ್ಫರೆನ್ಸ್ ಲೈವ್ ಮುಖಾಂತರ ಮಾತನಾಡಿದ್ದರು. 2023 ನವಂಬರ್ ತಿಂಗಳಲ್ಲಿ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ರವರು ಮೌಂಟ್ ಅಬುಗೆ ಭೇಟಿ ಕೊಟ್ಟಿದ್ದರು. ನಮ್ಮ ಕೊಪ್ಪಳದವರೇ ಆದ ರವಿವರ್ಮ ಉಂಕಿ ಬಾಯಿ ಈ ಪ್ರಾಜೆಕ್ಟಿನ ಆರ್ಟಿಸ್ಟ್ ಹಾಗೂ ಯೋಗೇಶ್ ಉಂಕಿ ಬಾಯಿ ಎಲೆಕ್ಟ್ರಿಕಲ್ ಇಂಜಿನಿಯರಾಗಿ ಕೆಲಸವನ್ನು ನಿರ್ವಹಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಎಷ್ಯಾ ಖಂಡದಲ್ಲಿಯೇ ನಂಬರ್ ಒನ್ ಸ್ಥಾನ ಪಡೆದಿರುವ ಸೌರ ಶಕ್ತಿವಿದ್ಯುತ್ತಿನಿಂದಲೇ ಹೆಚ್ಚಿನ ಕೆಲಸಗಳೆಲ್ಲ ಆಗುತ್ತವೆ ಅಂದರೆ ಸ್ಥಳೀಯರಿಗೆ ಉದ್ಯೋಗ , ಆರ್ಥಿಕ ಉಳಿತಾಯ , ನಿರುದ್ಯೋಗ ಸಮಸ್ಯೆ ನಿವಾರಣೆ, ವಿದ್ಯುತ್ ಅಭಾವ ಮುಕ್ತಿ . ಇಲ್ಲಿ ಉತ್ಪಾದನೆ ಮಾಡುವ ಶೌರಶಕ್ತಿವಿದ್ಯುತ್ತಿನಿಂದಲೇ ಹೆಚ್ಚಿನ ಕೆಲಸಗಳೆಲ್ಲ ಆಗುತ್ತವೆ ನೀರು ಕಾಯಿಸುವುದು, ಅಡುಗೆ ಮಾಡುವುದು, ವಿದ್ಯುದ್ದೀಪಗಳು ಝಗಮಗಿಸುವುದು ಎಲ್ಲ ಕೆಲಸ ಕಾರ್ಯಗಳನ್ನು ಒಳಗೊಂಡು , ಉಳಿದಿರುವ ಅಷ್ಟು ಪ್ರಮಾಣ ಸೌರ ಶಕ್ತಿ ವಿದ್ಯುತ್ ಅನ್ನು ಸರಕಾರಕ್ಕೆ ನೀಡಿ , ಮಳೆಗಾಲದ ಸಂದರ್ಭದಲ್ಲಿ ಪುನ ಸರ್ಕಾರದಿಂದ ವಿದ್ಯುತ್ ವಾಪಸ್ ಪಡೆದು ಮೌಂಟ್ ಆಬೂಗೆ ಬಂದಿರುವಂತಹ ಅತಿಥಿಗಳಿಗೆ ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದೇ ವಿಶೇಷತೆ , ನಿಮಗೆ ಆಶ್ಚರ್ಯವಾಗಬಹುದು ! ಆದರೂ ಸತ್ಯ ಇಲ್ಲಿಗೆ ಬಂದ ಪ್ರಯಾಣಿಕರಿಗೆ ಯಾವ ರೀತಿಯಲ್ಲೂ ಕೊರತೆ ಬಾರದಂತೆ ಇಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸೇವಾಧಾರಿಗಳ ಕಾರ್ಯ ನೋಡಿದರೆ ಎಂತವರಿಗೂ ಆಶ್ಚರ್ಯವಾಗುತ್ತದೆ. ಅವರ ಕಾರ್ಯವಂತೂ ಶ್ಲಾಘನೀಯ. ಶಾಂತಿವನದಲ್ಲಿರುವ ಡೈಮಂಡ್‌ಹಾಲ್, ತಪಸ್ಯಧಾಮ ಮತ್ತು ಓಂ ಆರ್ಟ್ ಗ್ಯಾಲರಿಗಳು ಆಕರ್ಷಕ, ಯಾವುದೇ ಕಂಬದ ಆಧಾರವಿಲ್ಲದ ಡೈಮಂಡ್ ಹಾಲ್‌ನಲ್ಲಿ ೨೦ ಸಾವಿರ ಜನ ಏಕಕಾಲಕ್ಕೆ ಕುಳಿತು ಸಮಯಕ್ಕೆ ಸರಿಯಾಗಿ ಭಗವಂತನ ಜ್ಞಾನ( ಮೆಡಿಟೇಶನ್ ) ಮಾಡಬಹುದು ಅಧ್ಯಾತ್ಮಿಕ ಜ್ಞಾನ ಸಂದೇಶಗಳನ್ನು ತಿಳಿದುಕೊಳ್ಳುವುದು ಹಾಗೂ ಕಾರ್ಯಕ್ರಮ ವೀಕ್ಷಿಸಬಹುದು. ಹತ್ತಿರದಲ್ಲೇ ದೊಡ್ಡ ಕಾನ್ಫರೆನ್ಸ್ ಹಾಲ್ ಇದೆ. 'ಓಂ ಆರ್ಟ್ ಗ್ಯಾಲರಿ' ಎಂದರೆ, ಅದೊಂದು ಗೋಳಾಕಾರದ ಸುಂದರ ಆಧ್ಯಾತ್ಮಿಕ ಆಲಯ.ಇಲ್ಲಿನ ಇನ್ನೊಂದು ಆಕರ್ಷಕ ಕಟ್ಟಡವೆಂದರೆ ' ತಪಸ್ಸೆಧಾಮ ' ಇದಿರುವುದು ಕಮಲದ ಹೂವಿನ ಆಕಾರದಲ್ಲಿ, ಸುತ್ತಲೂ ಹುಲ್ಲಿನ ಉದ್ಯಾನ ಬೇರೆ. ಶಾಂತಿವನ ಎಂಬ ಅರ್ಥವನೇ ಕೊಡುವ ಮೌಂಟ್‌ಅಬುವಿನ ಇನ್ನೊಂದು ತಾಣವೆಂದರೆ, ಪೀಸ್ ಪಾರ್ಕ್, ಇದೊಂದು ಪ್ರಶಾಂತವಾದ ಸ್ಥಳ. ಇಲ್ಲಿ ನಿಸರ್ಗದ ಮೇಲಿರುವ ಎಲ್ಲಾ ರೀತಿಯ ಹೂ-ಗಿಡ-ಬಳ್ಳಿಗಳನ್ನು ಕಾಣಬಹುದು. ೧೨ ಎಕರೆ ವಿಶಾಲವಾದ ಜಾಗದಲ್ಲಿ ಈ ಪಾರ್ಕ್ ಮೈದಳಿದಿದೆ.ಇನ್ನು ಸ್ಪಿರಿಚುವಲ್
 ಮ್ಯೂಸಿಯಂನಲ್ಲಿ ಆಕರ್ಷಕವಾದ, ಬೃಹದವ್ಯ ಪ್ರತಿಮೆಗಳಿವೆ. ಪಾರದರ್ಶಕವಾದ ದಿವ್ಯಮಾನ ಚಿತ್ರಪಟಗಳು ಇಲ್ಲಿದ್ದು, ೧೪ ನಿಮಿಷದ ಒಂದು ಲೇಜರ್ ಶೋವನ್ನು ಇಲ್ಲಿ ತೋರಿಸಲಾಗುತ್ತದೆ. ಮೌಂಟ್ ಅಬುವಿನಲ್ಲಿರುವ ಜ್ಞಾನ ಸರೋವರದಲ್ಲಿ ಅನೇಕ ವಿಭಾಗಗಳಿವೆ. ಅವುಗಳಲ್ಲಿ ಶಿಕ್ಷಣ ವಿಭಾಗ, ಸಮಾಜಸೇವಾ ವಿಭಾಗ, ಸುರಕ್ಷಾ ವಿಭಾಗ, ಕಾನೂನು ವಿಭಾಗ, ಚಿಕಿತ್ಸಾ ಕ್ಷೇತ್ರ ವಿಭಾಗ , ಫುಡ್( ಆಹಾರ) ವಿಭಾಗ ಇತ್ಯಾದಿ ವಿಭಾಗಗಳಿವೆ. ಜ್ಞಾನ ಸರೋವರ ಎಂಬ ಹೆಸರೇ ಹೇಳುವಂತೆ ಇದೊಂದು ಸುಂದರ ತಾಣ. ಇಲ್ಲಿ ವಿಶಾಲವಾದ ಭೋಜನ ಭವನವಿದೆ. ಅಷ್ಟೇ ಅಲ್ಲದೆ ಡೈಮಂಡ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಕನ್ನಡ ಒಳಗೊಂಡು ೧೬ ಭಾಷೆಗಳಿಗೆ ಅನುವಾದಿಸುತ್ತಾರೆ. ಇಲ್ಲಿರುವ ಉನ್ನತ ಅಧ್ಯಯನ ಕೇಂದ್ರದಲ್ಲಿನ ಲೈಬ್ರರಿ ಮತ್ತು ಆಧ್ಯಾತ್ಮಿಕ ಅನುಸಂಧಾನ ಪ್ರಯೋಗಾಲಯಗಳು ನೋಡಲೇಬೇಕಾದ ಸ್ಥಳಗಳು, ಇಲ್ಲಿರುವ ಓಂಶಾಂತಿ ಭವನವು ತಲೆಯೆತ್ತಿದ್ದು ೧೯೮೩ರಲ್ಲಿ ಇಲ್ಲಿ ಐದು ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಇದೆ. ಪ್ರತಿದಿನ ಎಂಟು ಸಾವಿರ ಜನ ದೇಶ-ವಿದೇಶಗಳಿಂದ ಹಾಗೂ ಲಕ್ಷಾಂತರ ಜನ ಮೌಂಟ್ ಅಬುಗೆ ಇದನ್ನು ವೀಕ್ಷಿಸಲು ಬರುತ್ತಾರೆ. ಬ್ರಹ್ಮ ಬಾಬಾ ಅವರ ನೆನಪಿಗೆ ಕಟ್ಟಿರುವ ಶಾಂತಿ ಸ್ತಂಭ ವೈವಿಧ್ಯವಾಗಿದ್ದು , ಸನಿಹದಲ್ಲೇ ಹಿಸ್ಟರಿ ಹಾಲ್ ಇದೆ. ಇಲ್ಲಿ ಬಾಬಾ ಅವರು ಮಾಡಿದ ಸಾಧನೆ, ಅವರ ಸಮಯಕ್ಕೆ ಕೊಡುವ ಮಹತ್ವ ಕಾರ್ಯವೈಖರಿಯ ರೀತಿಯನ್ನು ಕಾಣಬಹುದು. ಗುರುಶಿಖರದ ದರ್ಶನದ ನಂತರ ಅಲ್ಲಿ ನಿಸರ್ಗದ ರಮನೀಯ ಸ್ಥಾನಗಳಿಂದ ಗುಡ್ಡಬೆಟ್ಟಗಳಿಂದ ನಮಗೆ ಕಾಣುವದೆ ನಮ್ಮ ದೇಶದ ಕೊನೆ ಗಡಿ ಪ್ರದೇಶ, ಅಂದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ಒಂದು ರೇಖೆ ಇದೆ. ಇದಕ್ಕೆ "ಇಂಡಿಯಾದ ಲಾಸ್ಟ್ ಬೌಂಡರಿ "ಎಂದು ಹೇಳುತ್ತಾರೆ. ಇದನ್ನು ಕಂಡಾಗ ದೇಶ-ದೇಶಗಳ ನಡುವಿನ ಗೆರೆಗಳು ಎಷ್ಟೊಂದು ಅರ್ಥಹೀನ ಎನಿಸುತ್ತದೆ, ಏಕೆಂದರೆ, ಉದ್ದಗಲಕ್ಕೂ ಇರುವ ಪ್ರಕೃತಿಯ ಚೆಲುವು ನಮ್ಮನ್ನು ಆವರಿಸಿಕೊಂಡಿರುತ್ತದೆ.

ಈ ಮೌಂಟ್ ಅಬುಗೆ ದಾರಿ : ಕರ್ನಾಟಕದಿಂದ ಮೌಂಟ್‌ಅಬುವಿಗೆ ಹೋಗುವುದು ಕಷ್ಟವೇನಿಲ್ಲ. ಅದರ ಸನಿಹಕ್ಕೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ,ಕೊಪ್ಪಳ, ದಾವಣಗೆರೆ, ತಿಪಟೂರು, ಅರಸೀಕೆರೆ, ಘಟಪ್ರಭಾ, ಲೋಂಡಾ, ಕುಡಚಿ, ಹಾವೇರಿ, ಧಾರವಾಡಗಳಿಂದೆಲ್ಲ ಸಾಕಷ್ಟು ರೈಲುಗಳಿವೆ. ನಮ್ಮ ರಾಜ್ಯದಿಂದ ಅಹಮದಾಬಾದ್, ಪಾಲಂಪುರ್, ಜೈಪುರ, ಅಜ್ಜರ್, ಜೋಧಪುರ ಮುಂತಾದ ಕಡೆಗಳಿಗೆ ಹೋಗುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳೆಲ್ಲ ಮೌಂಟ್ ಅಬುವಿನ ಅಂಚೆಗೆಯೇ ಹೋಗುತ್ತವೆ. ಕೊಪ್ಪಳ ರೈಲನ್ನೇರಿದರೆ ೨೮-೩೦ ಗಂಟೆಗಳ ಕಾಲ ಪ್ರಯಾಣವಾಗುತ್ತದೆ. ಟಿಕೆಟ್ ದರವೂ ತುಂಬಾ ದುಬಾರಿಯೇನಲ್ಲ, ಅದು ಕೈಗೆಟುಕುವ ಹಾಗೆಯೇ ಇದೆ.

   ಮೌಂಟ್ ಅಬುದ ಈ ಊರಿನ ಸುತ್ತಮುತ್ತ ಇರುವ ಸ್ಥಳಗಳನ್ನು ನೋಡಲು ಎರಡು ದಿನವಾದರೂ ಬೇಕಾಗುತ್ತದೆ. ಈ ಊರುನ್ನು ನೋಡಿದ ಮೇಲೆ ಹಾಗೆಯೇ ಉತ್ತರಕ್ಕೆ ಹೋದರೆ ಚಿತ್ತೂರ್‌ಗಢ, ಉದಯಪುರ, ಆತ್ಮೀರ್, ಪುಷ್ಕರ, ಜೋಥ್‌ಪುರ, ಜೈಸಲ್ಮೇರ್, ಭರತ್‌ಪುರಗಳನ್ನೆಲ್ಲ ನೋಡಬಹುದು. 

   ೨೦೨೩ರ ವರ್ಷ ಸುಂದರವಾದ ನೆನಪಿಡುವ ವರ್ಷ ಎಂದೇ ಹೇಳಬಹುದು, ಪ್ರತಿಯೊಬ್ಬರು ಜೀವಮಾನದಲ್ಲಿ ಒಮ್ಮೆಯಾದರೂ ಭೂಮಿ ಮೇಲಿನ ಸ್ವರ್ಗ ಮೌಂಟ್‌ಅಬುಗೆ ಹೋಗಿ ಜೀವನ ಪಾವನ ಮಾಡಿಕೊಳ್ಳಿ ಓಂ ಶಾಂತಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ