*ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಬಡ್ಜೆಟ್‌ ಪೂರ್ವ ಸಿದ್ದತೆ ಸಭೆ*

 


"ಪಟ್ಟಣ ಪಂಚಾಯಿತಿಗೆ ಹೆಚ್ಚಿನ ತೆರಿಗೆ ಹಣ ಸಂಗ್ರಹ : ಅಭಿವೃದ್ಧಿ ಹೆಚ್ಚು ಒತ್ತು "

ಕೊಟ್ಟೂರು: ಪಟ್ಟಣ ಪಂಚಾಯಿತಿಯ ಶ್ರೀ ಕೊಟ್ಟೂರೇಶ್ವರ ಸಭಾಂಗಣದಲ್ಲಿ 2024-25ನೇ ಸಾಲಿನ ಅಯವ್ಯಯ ಕ್ಕೆ ಪೂರಕವಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವಿಕರಿಸುವ ಸಂಬಂದ ಬಡ್ಜೆಟ್‌ ಪೂರ್ವ ಸಿದ್ದತೆ ಸಭೆಯ ಬುಧವಾರ ರಂದು ಏರ್ಪಡಿಸಲಾಗಿತ್ತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಈ ಸಾಲಿನಲ್ಲಿ ಕಳೆದ ಸಾಲಿಗಿಂತ ಮತ್ತೊಷ್ಟು ಹೆಚ್ಚಿನ ಪ್ರಮಾಣದ ಆದಾಯ ಬರುವ ನಿರೀಕ್ಷೆ ಇದ್ದು , ಇದಕ್ಕೆ ಅನುಗುಣವಾಗಿ ಪಟ್ಟಣದ ಸಾರ್ವಜನಿಕರ ಹಿತ ರಕ್ಷಣೆ ಮತ್ತು ಪಟ್ಟಣದ ಅಭಿವೃದ್ಧಿಗೆ ಬಳಕೆ ಮಾಡುವ ನಿಟ್ಟನಿನಲ್ಲಿ ಸಾರ್ವಜನಿಕರು ಆಡಳಿತಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಿದೆ.ಕಳೆದ ಸಾಲಿನಲ್ಲಿ ಆಸ್ತಿ ಮತ್ತಿತರ ತೆರಿಗೆಗಳಿಂದ ಅಂದಾಜು 4 ಕೋಟಿ ರೂಗಳು ಬಂದಿತು ಇದರ ಮೂರು ನಾಲ್ಕು ಪ್ರಮಾಣದ ಹೆಚ್ಚು ಹಣ ಈ ವರ್ಷದ ತೆರಿಗೆ ಮತ್ತಿತರ ಬಾಬ್ತುಗಳಿಂದ ಪ.ಪಂ ಆಡಳಿತಕ್ಕೆ ಕೋಟಾಂತರ ರೂಪಾಯಿಗಳು ಸಂಗ್ರಹಗೊಳ್ಳುವ ಆಶಯವನ್ನು ಆಡಳಿತ ಹೊಂದಿದ್ದು ಕುಡಿಯುವ ನೀರು ವಿದ್ಯುತ್‌ ಚರಂಡಿ ಮತ್ತಿತರ ಮೂಲಭೂತ ಸೌಲಭ್ಯಗಳ ನ್ನು ಕಲ್ಪಿಸುವ ಸಂಬಂದ ಕ್ರಿಯಾ ಯೋಜನೆ ತಯಾರು ಮಾಡಬೇಕಿದೆ . ಇದರ ಜೊತೆಗೆ ಇತರ ಅಭಿವೃದ್ಧಿ ಮತ್ತಿತರ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಹಾಜರಿರುವ ಪ.ಪಂ ಸದಸ್ಯರುಗಳು ಮತ್ತು ಸಾರ್ವಜನಿಕರು ಸಲಹೆ ನೀಡಬೇಕಿದೆ ಎಂದರು.

ಪ.ಪಂ ಸದಸ್ಯ ತೋಟದ ರಾಮಣ್ಣ ಮಾತನಾಡಿ ಪಟ್ಟಣ ಪಂಚಾಯಿತಿ 20 ಸದಸ್ಯ ವಾರ್ಡಗಳ ಅಭಿವೃದ್ಧಿ ಕಾರ್ಯಕ್ಕೆ ಈ ಹಿಂದೆ ವಿವಿದ ಯೋಜನೆಗಳಿಂದ ನಿಗದಿಗೊಳಿಸಲಾದ ಅನುದಾನವನ್ನು ಬೇರೆಡೆಗೆ ವರ್ಗಾವಣೆ ಮಾಡುವ ಕಾರ್ಯಕ್ಕೆ ರಾಜಕೀಯ ಕಾರಣಕ್ಕಾಗಿ ಮಾಡುತ್ತಿರುವುದು ಸರಿಯಲ್ಲ .ಇದು ಈ ಸಲದ ಬಡ್ಜೆಟ್‌ನಲ್ಲಿ ಇಂತಹ ಪ್ರಕಣಗಳಿಗೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿದರು.

ಸದಸ್ಯ ಜಿ.ಎಂ.ಸಿದ್ದಯ್ಯ ಮಾತನಾಡಿ ನಿರ್ಮಲ ಶೌಚಾಲಯಗಳನ್ನು ಹೆಚ್ಚಿನ ಜನಸಾಂದ್ರತೆ ಕೂಡುವ ಸ್ಥಳಗಳಲ್ಲಿ ನಿರ್ಮಾಣ ಮಾಡಬೇಕು ಮಹಿಳ ಮತ್ತು ಪುರುಷರ ಶೌಚಾಲಯಗಳನ್ನು ನಿರ್ಮಿಸಲು ಬಡ್ಜೆಟ್‌ನಲ್ಲಿ ಹಣ ಮೀಸಲಿರಿಸಬೇಕು ಎಂದರು.

ಡಿ.ಎಸ್.ಎಸ್.ಮುಖಂಡ ಮರಿಸ್ವಾಮಿ ಬಿ. ಮಾತನಾಡಿ ಪಟ್ಟಣದ ಎಲ್ಲಾ ವಾರ್ಡಗಳಿಂದ ಸಂಗ್ರಹವಾಗುವ ಕೊಳಚೆ ಮತ್ತು ತಾಜ್ಯ ನೀರನ್ನು ಹ್ಯಾಳ್ಯಾ ರಸ್ತೆಯ ಮುಖ್ಯ ಕಾಲುವೆಯ ಮೂಲಕ ಹರಿಸುತ್ತಿರುವುದು ಸರಿಯಲ್ಲ ಇದರ ಬದಲಾಗಿ ಪಟ್ಟಣದ ನಾಲ್ಕೈದು ರಸ್ತೆಗಳ ಚರಂಡಿ ನೀರನ್ನು ಬೇರೆ ಮಾರ್ಗಗಳ ಮೂಲಕ ಹರಿಸಲು ಮುಂದಾಗಬೇಕು ಈ ಬಗ್ಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಕೆ . ಕೊಟ್ರೇಶ್‌ ಮತ್ತು ಕಾರ್ಯದರ್ಶಿ ಬಿ.ಮಂಜುನಾಥ ಬಡ್ಜೆಟ್‌ ನಲ್ಲಿ ಪತ್ರಕರ್ತರ ಕಲ್ಯಾಣ ನಿಧಿಗೆ ಹಣ ಮೀಸಲಿರಿಸ ಬೇಕೆಂದು ಮತ್ತು ಪತ್ರಿಕಾ ಭವನಕ್ಕೆ ನಿವೇಶನ ಗುರುತಿಸಿ ಕೊಡುವಂತೆ ಹಾಗೂ ಪತ್ರಿಕಾ ಭವನ ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು.

ಪ.ಪಂ ಸದಸ್ಯರುಗಳಾದ, ಮರಬದ ಕೊಟ್ರೇಶ್‌, ಹೊಸಮನಿ ವಿನಯಕುಮಾರ್, ಶಫಿ, ಸಾವಿತ್ರಮ್ಮ ಶೈಲಜಾ, ವಿದ್ಯಾಶ್ರೀ, ಟಿ.ಜಗದೀಶ್‌, ಕೆಂಗರಾಜ, ವೀಣಾ ವಿವೇಕಾನಂದ , ಮತ್ತಿತರರು ಹಾಜರಿದ್ದು ಕೆಲ ಸೂಚನೆಗಳನ್ನು ನೀಡಿದರು. ಅರೋಗ್ಯ ನಿರೀಕ್ಷಕಿ ಅನುಷಾ , ಇಂಜಿನೀಯರ್‌ ನಿಹಾರಿಕಾ ಮತ್ತಿತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ