ಎತ್ತ ಸಾಗುತ್ತಿದೆ ರಸ್ತೆ ವಿಭಜಕ ಹಾಗೂ ಚರಂಡಿ ಕಾಮಗಾರಿ ..!!

ವರದಿ ಗ್ಯಾನಪ್ಪ ದೊಡ್ಡಮನಿ

ಮಸ್ಕಿ: ಮಸ್ಕಿ ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಕಾಮಗಾರಿ ನಾಮ ಫಲಕ ಅಳವಡಿಸದೆ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಿಸಿ ಸುಮಾರು ಆರು ತಿಂಗಳು ಸಮಯ ಕಳೆದರೂ ನಿಧಾನ ಗತಿಯಲ್ಲಿ ಸಾಗುತ್ತಿದ್ದು ಈ ಕಾಮಗಾರಿಯ ನಾಮಫಲಕ ಅಳವಡಿಸದೆ ಅಧಿಕಾರಿಗಳು ತಮ್ಮ ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷ ವಹಿಸುತ್ತಿದ್ದಾರೆ ಎತ್ತ ಸಾಗುತ್ತಿದೆ ರಸ್ತೆ ವಿಭಜಕ ಹಾಗೂ ಚರಂಡಿ ಕಾಮಗಾರಿ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ಕಾಮಗಾರಿ ಆರಂಭವಾಗಿ ಸುಮಾರು ಆರು ತಿಂಗಳು ಗತಿಸಿದ್ದು ಸರ್ಕಾರದ ನಿಯಮದಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಮಗಾರಿ ನಾಮಫಲಕ ಅಳವಡಿಸಿ ನಾಮಫಲಕದಲ್ಲಿ ಕಾಮಗಾರಿ ಅವಧಿ ಹಾಗೂ ಕಾಮಗಾರಿಯ ಮೊತ್ತ ಹಾಗೂ ಕಾಮಗಾರಿ ನಿರ್ವಹಿಸುತ್ತಿರುವ ಸ್ಥಳದ ವಿವರ ಹಾಗೂ ಗುತ್ತಿಗೆದಾರರ ವಿವರ ಹಾಕಬೇಕು ಎನ್ನುವುದು ಸರ್ಕಾರದ ನಿಯಮವಾಗಿದೆ ಆದರೆ ಕಾಮಗಾರಿ ಆರಂಭವಾಗಿ ತಿಂಗಳುಗಳೇ ಕಳೆದರೂ ಯಾವುದೇ ನಾಮಫಲಕ ಅಳವಡಿಸದೇ ಸರಕಾರದ ನಿಯಮವನ್ನು ಉಲ್ಲಂಘಿಸಿ ಕಾಮಗಾರಿ ನಿರ್ವಹಿಸುತ್ತಿದ್ದು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ರಾಷ್ಟ್ರೀಯ ಹೆದ್ದಾರಿ ವಿಭಜಕ ಹಾಗೂ ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಅನೇಕ ಸಂಘಟನೆಗಳು ಹೋರಾಟ ಮಾಡಿ ಧರಣಿ ಕುಳಿತರು. ಅಧಿಕಾರಿಗಳು ಮೌಖಿಕವಾಗಿ ಗುಣಮಟ್ಟದ ಕಾಮಗಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೂ ಆ ಕಾಮಗಾರಿ ಯಾವ ರೀತಿಯಿಂದ ಸಾಗುತ್ತಿದೆ ಎಷ್ಟರಮಟ್ಟಿನ ಗುಣಮಟ್ಟದ ಕಾಮಗಾರಿ ಜರುಗುತ್ತಿದೆ ಎಂದು ವರದಿ ಸಲ್ಲಿಕೆ ಆಗಿಲ್ಲ.

ಇನ್ನೂ ತಾಲೂಕಿನ ಅನೇಕ ಸಂಘಟನಾಕಾರರು ಹಾಗೂ ಸಾರ್ವಜನಿಕರು ಸೇರಿದಂತೆ ಕಾಮಗಾರಿಯ ವರದಿಯನ್ನು ಕೇಳಿದ್ದರು ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ರೀತಿಯಿಂದ ಸ್ಪಂದನೆ ಮಾಡದಿರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.

ಈಗಲಾದರೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತು ಕಾಮಗಾರಿ ಸ್ಥಳದಲ್ಲಿ ನಾಮಫಲಕ ಅಳವಡಿಸಿ ಸೂಕ್ತ ಗುಣಮಟ್ಟದ ಕಾಮಗಾರಿಯನ್ನು ಮಾಡಲು ಮುಂದಾಗುತ್ತಾ ಕಾದು ನೋಡಬೇಕಿದೆ.??

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ