ಕೊಟ್ಟೂರಿನಲ್ಲಿ ಎಗ್ಗಿಲ್ಲದೇ ಹರಿದಾಡುತ್ತಿದೆ ಗಾಂಜಾ : ಪೋಷಕರೇ ಹುಷಾರ್
ಪಟ್ಟಣದ ಹೊರವಲಯಗಳೇ ಅಡ್ಡ ಮಾಡಿಕೊಂಡಿರುವ ಅಮಲುದಾರರು..
ಕೊಟ್ಟೂರು ಪಟ್ಟಣ ರಾಜ್ಯದಲ್ಲಿ ಧಾರ್ಮಿಕ ಕ್ಷೇತ್ರವಾಗಿದ್ದು, ತನ್ನದೇಯಾದ ಐತಿಹಾಸಿಕ ಚಾರಿತ್ರ್ಯವನ್ನು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೊಟ್ಟೂರಿನಲ್ಲಿ ಈಗ ಗಾಂಜಾ ಎಗ್ಗಿಲ್ಲದೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಭಯವನ್ನುಂಟುಮಾಡುತ್ತಿದೆ. ಇದಕ್ಕೆ ಹದಿಹರೆಯದೇ ಹುಡುಗರೇ ಬಲಿಯಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪಟ್ಟಣದ ಉಜ್ಜಿನಿ ರಸ್ತೆಯ ಹೊರವಲಯದ ಸನ್ನಿಧಿ ಕಾಲೇಜ್‌ನ ಹತ್ತಿರ ಮಂಗಳವಾರ ಸಂಜೆ ಗಾಂಜಾ ಹೊಡೆದು ನೀರಿನ ದಾಹದ ತೀರಿಕೆಗಾಗಿ ಕಾಲೇಜ್‌ನಲ್ಲಿ ನೀರನ್ನು ಕೇಳಿದ್ದಾರೆ. ಈ ಕಾರಣಕ್ಕೆ ಕಾಲೇಜಿನ ಚೇರ್ಮನ್‌ರವರ ಮಧ್ಯೆ ವಾಗ್ವಾದ ನಡೆದಿದೆ. ಇದನ್ನು ಬಿಡಿಸಲು ಬಂದ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಹೆಸರಿಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದೆ. ಹದಿಹರೆಯದ ಹುಡುಗರು ಗಾಂಜಾ ಮತ್ತು ಆನ್‌ಕ್ಸಿಟ್ ೦.೫ ಎಂಬ ಟ್ಯಾಬ್ಲೆಟ್‌ನ್ನು ಪುಡಿ ಮಾಡಿ ಸಿಗರೇಟ್‌ನಲ್ಲಿ ಸೇರಿಸಿಕೊಂಡು ಸೇದುವ ಅಮಲಿಗೆ ಬಿದ್ದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ಟ್ಯಾಬ್ಲೆಟ್ ವೈದ್ಯರ ಸಲಹೆಯಂತೆ ಪಡೆದುಕೊಳ್ಳಬೇಕು ಇದು ದೇಹಕ್ಕೆ ಗಂಭೀರ ಅಡ್ಡ ಪರಿಣಾಮಗಳಾಗುವ ಸಂದರ್ಭಗಳು ಇದ್ದರೂ ಸಹ ಹುಡುಗರು ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದು ಆತಂಕಕರ ವಿಷಯವಾಗಿದೆ. ಈ ಟ್ಯಾಬ್ಲೆಟ್‌ನ ಕವರ್‌ಗಳು ಕಾಲೇಜಿನ ಹತ್ತಿರ ಬಿದ್ದಿರುವುದು ಕಂಡುಬಂದಿದೆ. ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಅಲ್ಲೊಂದು ಇಲ್ಲೊಂದು ಮಾತ್ರ ಸಾರ್ವಜನಿಕರು ಕಂಡರೂ ಕಾಣದಂತೆ ಊರ ಉಸಾಬರಿ ನಮಗೇಕೆ ಎಂದು ಹಿಂದೆ ಸರಿಯುತ್ತಿದ್ದಾರೆ.
ಅಲ್ಲದೇ ಕೊಟ್ಟೂರು ಪಟ್ಟಣದ ಹಳೇ ಪಟ್ಟಣ ಪಂಚಾಯಿತಿ ಕಾರ್ಯಾಲಯವಿದ್ದ ಜಾಗದಲ್ಲಿ ಹೊಸ ಕಟ್ಟಡದ ನಿರ್ಮಾಣವನ್ನು ಅರ್ಧಕ್ಕೇ ನಿಲ್ಲಿಸಿರುವುದರಿಂದ ಅದು ಸಹ ಗಾಂಜಾ ಹೊಡೆಯುವವರಿಗೆ ಅಡ್ಡಾ ಆಗಿದೆ. ರಾತ್ರಿಯಾದರೆ ಸಾಕು ಗಾಂಜಾ, ಮಧ್ಯಸೇವನೆ ಇಲ್ಲಿ ನಡೆಯುತ್ತಿದೆ ಮರ್ಯಾದಸ್ತರು, ಹೆಣ್ಣುಮಕ್ಕಳು ರಾತ್ರಿಯಾದರೆ ಇಲ್ಲಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಯಾವ ಪುರುಷಾರ್ಥಕ್ಕೋ ಎನ್ನುವುದು ತಿಳಿಯದ ವಿಷಯವಾಗಿದೆ. ಗಾಂಜಾ ಹೊಡೆಯುವುದಲ್ಲದೇ ಅಕ್ರಮ ಚಟುವಟಿಕೆಗಳು ನಡೆಯುತ್ತಾ ಹದಿಹರೆಯದ ಹುಡುಗರು ಇಂತಹ ಚಟಗಳಿಗೆ ಬಲಿಯಾಗಿ ತಮ್ಮ ಕುಟುಂಬಗಳೇ ಬೀದಿಗೆ ಬಂದ ಹಲವಾರು ಪ್ರಕರಣಗಳು ಕಣ್ಣಮುಂದೆ ಇವೆ.
ಇನ್ನು ಮುಂದಾದರೂ ಇಂತಹ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಸ್ವಸ್ಥ ಸಮಾಜ ಕಟ್ಟುವಲ್ಲಿ ತಮ್ಮ ಪಾತ್ರ ಇರುವುದನ್ನು ಸಾಬೀತು ಮಾಡಬೇಕಾಗಿದೆ ಎಂದು ಸಿಪಿಐ ಎಂಎಲ್ ಲಿಬರೇಷನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್, ಗುರು, ಭಾರತಿಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ ರೆಣಕಮ್ಮ,ಮಾನವ ಹಕ್ಕು ,ಸಂಘಟನೆಗಳು, ಪ್ರಜ್ಞಾವಂತ ನಾಗರೀಕರು ಪತ್ರಿಕೆಗೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ