ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ:ಹೆಗಡೆ
ಬಳ್ಳಾರಿ:ಸಾಮಾಜಿಕ ಸಮಾನತೆ ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ನೀಡಿದ್ದ ಒಳ ಮೀಸಲಾತಿ ಭರವಸೆಯನ್ನು ಈಡೇರಿಸಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಎಂದು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ಸರ್ಕಾರ ತಾನು ಕರ್ನಾಟಕದ ಸರ್ವ ಜನಾಂಗದ ಅಭಿವೃದ್ಧಿಗೆ ಬದ್ಧ ಎಂದು ತೋರಿಸಿಕೊಟ್ಟಿದೆ.
ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿಗಳಿಗೆ ನೀಡಿದ್ದ ಮೀಸಲಾತಿ 101 ಜಾತಿಗಳ ನಡುವೆ ಹಂಚಿಹೋಗಿತ್ತು. ಈ ಪೈಕಿ ಅತೀ.ಹಿಂದುಳಿದ ಜಾತಿಯವರು ಮೀಸಲಾತಿ ಲಾಭ ಪಡೆಯಲು ಆಗಿರಲಿಲ್ಲ. ಎಡಗೈ ಸಮುದಾಯ ಮೀಸಲಾತಿ ಇದ್ದರೂ ಅದರ ಲಾಭ ಪಡೆಯಲು ಆಗಿರಲಿಲ್ಲ. ಉಳಿದ ಸಮುದಾಯಗಳು ಈ ಲಾಭ ಪಡೆದುಕೊಂಡು ಮುಂದುವರಿದರೆ ಎಡಗೈ ಸಮುದಾಯ ಮಾತ್ರ ಅಭಿವೃದ್ದಿ ಹೀನ ಆಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಗೆ ಸೈ ಎನ್ನುವ ಮೂಲಕ ಪರಿಶಿಷ್ಟ ಜಾತಿಗಳ ಎಲ್ಲ ಸಮುದಾಯ ಅಭಿವೃದ್ದಿ ಕಡೆ ಸಾಗಬೇಕು ಎಂಬ ಉದ್ದೇಶ ಹೊಂದಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಮುನ್ನಡೆ ಇಟ್ಟಿರುವುದು ಉತ್ತಮ ಸಂಕೇತ. ಅತೀ ಹಿಂದುಳಿದ ಜಾತಿಯವರು ಅಭಿವೃದ್ಧಿ ಪಥದತ್ತ ಸಾಗಬೇಕು.
ಜೊತೆಗೆ ಸರ್ಕಾರ ಇದೆ ಮಾದರಿಯಲ್ಲಿ ರಾಜಕೀಯ ಮೀಸಲಾತಿ ಸಹ ನೀಡಲು ಕ್ರಮ ವಹಿಸಬೇಕು. ಆಗಲೇ ಈ ಸಮುದಾಯದ ಸರ್ವತೋಮುಖ ಅಭಿವೃದ್ದಿ ಸಾಧ್ಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಪಕ್ಷ ಮತ್ತು ನೀವು ಪ್ರಕಟಿಸಿದ ಸಂಪುಟ ಸಮಿತಿಯನ್ನು ರಾಜಕೀಯಕ್ಕೂ ಅನ್ವಯವಾಗುವಂತೆ ಮಾಡಿದರೆ ಅತ್ಯುತ್ತಮ ಬ್ರದರ್ ಇತಿ ನಿಮ್ಮ ಸ್ನೇಹಿತ ಚಂದ್ರಶೇಖರ್ ಸಂಡೂರ್
ಪ್ರತ್ಯುತ್ತರಅಳಿಸಿ