ವಾಕ್ ಮ್ಯಾರಾಥಾನ್ ಮೂಲಕ ಜಾಗೃತಿ.ಮಾದಕವಸ್ತುಗಳಿಂದ ದೂರವಿರಿ ಯುವಕರಗೆ ಕೂಡ್ಲಿಗಿ ಡಿವೈ ಎಸ್ಪಿ ಕಿವಿಮಾತು.
ಕೂಡ್ಲಿಗಿ. ಜ.4 :- ಮಾದಕ ವಸ್ತುಗಳಾದ ಡ್ರಗ್ಸ್, ಆಫೀಮು, ಗಾಂಜಾದಂತಹ ವಸ್ತುಗಳ ಸೇವನೆಯಿಂದ ನಿಮ್ಮ ಅತ್ಯಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳದೆ ಅವುಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕೂಡ್ಲಿಗಿ ಡಿವೈ ಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಇವರು ಯುವಕರಿಗೆ ಕಿವಿಮಾತು ಹೇಳಿದರು.
ಅವರು ಗುರುವಾರ ಬೆಳಿಗ್ಗೆ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಿಮಿತ್ತ ಕೂಡ್ಲಿಗಿಯ ಪೊಲೀಸ್ ಇಲಾಖೆ ವತಿಯಿಂದ ಹಾಗೂ ಮೈದಾನ ಗೆಳೆಯರ ಬಳಗ,ಜೆಸಿಐ ಗೋಲ್ಡನ್ ಮತ್ತು ಸರ್ಕಾರಿ ನೌಕರರ ಸಂಘ ಇವರ ಸಹಯೋಗದಲ್ಲಿ ವಾಕ್ ಮ್ಯಾರಾಥಾನ್ ನ್ನು ಪಟ್ಟಣದ ಪ್ರಮುಖ ರಸ್ತೆಯ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಹಳೇ ಸಂತೆಮೈದಾನ, ಹೊಸಪೇಟೆ ರಸ್ತೆ ಮೂಲಕ ಮದಕರಿ ವೃತ್ತದ ಬಳಿ ಸೇರಿ ಮಾತನಾಡಿದರು.
ಕೂಡ್ಲಿಗಿ ಸಿಪಿಐ ಸುರೇಶ ತಳವಾರ ಹಾಗೂ ಕೂಡ್ಲಿಗಿ ಪಿಎಸ್ಐ ಧನುಂಜಯ ಮಾತನಾಡಿ ಮಾದಕ ಯುವಕರಿಗೆ ಮಾರಕ ಇದರಿಂದ ದೂರವಿದ್ದಷ್ಟು ದೇಶದ ಸತ್ಪ್ರೇಜೆಗಳಾಗಿ ಬದುಕಬಲ್ಲಿರಿ ಎಂದು ಯುವಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಸತಿನಿಲಯದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಮತ್ತು ನಿಲಯ ಪಾಲಕರಾದ ಮೊಹಮ್ಮದ್ ಸೈಯದ್ ಮತ್ತು ಶರಣಪ್ಪ, ಪೊಲೀಸ್ ಠಾಣೆಯ ಸಿಬ್ಬಂದಿಗಳು, ಮೈದಾನ ಗೆಳೆಯರ ಬಳಗದ ಚನ್ನಬಸವನ ಗೌಡ, ಜೆ ಸಿ ಐ ಕೆ ನಾಗರಾಜ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಲ್ತೂರ್ ಶಿವರಾಜ್ ಸೇರಿದಂತೆ ಅನೇಕ ಜನ ನಾಗರಿಕ ಬಂಧುಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ