ಅಂಗನವಾಡಿ ಕಟ್ಟಡಕ್ಕೆ ಭೂದಾನ ;ಮಾಲಿ ಪಾಟೀಲ್

ಮಸ್ಕಿ : ಪಟ್ಟಣದ ಸಂತೇ ಬಜಾರನ ಎಸ್ ಸಿ ಒಂದನೇಯ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಇರುವ ಖಾಲಿ ನಿವೇಶನ ವನ್ನು ಅಂಗನವಾಡಿ ಕಟ್ಟಡವನ್ನು ನಿಮಾರ್ಣ ಮಾಡಲು

ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಇವರಿಗೆ ದಾನದ ರೂಪವಾಗಿ ಕೊಟ್ಟಿರುತ್ತೆವೆ ಎಂದು ಭೂದಾನಿ ಗಳಾದ ಅಭಿಜಿತ್ ಮಾಲಿ ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಹೊಸದಾಗಿ ಮಂಜೂರು ಆದ ಅಂಗನವಾಡಿ ಕಟ್ಟಡಕ್ಕೆ ಜಾಗದ ಸಮಸ್ಯೆ ಇದ್ದ ಕಾರಣ ಯಾರು ಜಾಗವನ್ನು ನೀಡಿಲ್ಲದ ಕಾರಣದಿಂದ

ದಾನ ಪತ್ರದ ಆಧಾರದ ಮೇಲೆ ನನ್ನ ಹೆಸರಿನಲ್ಲಿ ಇರುವ ಜಾಗವನ್ನು ಮಾನ್ಯ ರಾಜ್ಯಪಾಲರು ಕರ್ನಾಟಕ ಸರಕಾರ ಇವರ ಹೆಸರಿಗೆ ಬದಲಾವಣೆ ಮಾಡಿಕೊಳ್ಳಲು ಸಂಪೂರ್ಣ ಹಕ್ಕನ್ನು ಹೊಂದಿದ್ದು ಹಾಗೂ ದಾನವಾಗಿ ಕೊಟ್ಟ ಜಾಗದಲ್ಲಿ ನಿಯಮಾನುಸಾರ ಅಂಗನವಾಡಿ ಕಟ್ಟಡ ಪೂರ್ಣಗೊಳಿಸಿದ ನಂತರ ನನ್ನ ಅಜ್ಜಿಯವರ ಹೆಸರನ್ನು ಅಂಗನವಾಡಿ ಕೇಂದ್ರಕ್ಕೆ ಶ್ರೀಮತಿ ಸೀತಾದೇವಿ ಮಾಲಿಪಾಟೀಲ್ ಅಂಗನವಾಡಿ ಕೇಂದ್ರ ಎಂದು ಹೆಸರು ಬರೆಯಿಸುವ ಜವಾಬ್ದಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಿಂಗಸುಗೂರು ಇವರದ್ದು ಇರುತ್ತದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ, ಎಂ.ಡಿ.ಗೋಕುಲ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಲಿಂಗಸಗೂರು, ಊರಿನ ಮುಖಂಡರಾದ ಅಪ್ಪಾಜಿ ಗೌಡ, ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪುರ,ಮಲ್ಲಯ್ಯ ಬಳ್ಳಾ, ಹಾಗೂ ಸುರೇಶ್ ಹರಸರೂ ಪುರಸಭೆ ಸದಸ್ಯರು ಮಸ್ಕಿ, ಅಧಿಕಾರಿಗಳಾದ ಮಸ್ಕಿ 'ಎ' ವಲಯದ ಮೇಲ್ವಿಚಾರಕಿ ಶಿವಲೀಲಾ ಹಿರೇಮಠ,ಹಾಗೂ ಅಂಗನವಾಡಿ ಶಿಕ್ಷಕಿಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ