ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ. ಪಂ ಮುಖ್ಯಧಿಕಾರಿ ಆಡೆಳಿತ ವ್ಯವಸ್ಥೆ ಕುರಿತು ಚರ್ಚೆ


ಕೊಟ್ಟೂರು : ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ  ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ. ನಾಸಾರುಲ್ಲ ರವರ ಜೊತೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆಯ ಕುರಿತು ಗುರುವಾರ ಚರ್ಚೆ ನಡೆಸಿದರು 

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯವರು ಪಂಚಾಯಿತಿಗಳು ಹೇಗೆ ಉಗಮವಾಯಿತು ಇದರ ಉದ್ದೇಶ ಏನು ಇದರಿಂದ ಏನೆಲ್ಲಾ ಪ್ರಯೋಜನ ಇದರ ಮೂಲ ಇತಿಹಾಸದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ತಿಳಿಸಲಾಯಿತು

ಪ್ರಸ್ತುತ ಕೊಟ್ಟೂರು ಪಟ್ಟಣವನ್ನು  20 ವಾರ್ಡ್‌ಗಳಾಗಿ ವಿಂಗಡಿಸಲಾಗಿದ್ದು, ಕೊಟ್ಟೂರು ಟೌನ್ ಪಂಚಾಯತ್ 26,289 ಜನಸಂಖ್ಯೆಯನ್ನು ಹೊಂದಿದೆ ಅದರಲ್ಲಿ 13,190 ಪುರುಷರು ಮತ್ತು 13,099 ಮಹಿಳೆಯರು ಇದು 2011 ರ ಜನಗಣತಿಯ ವರದಿಯ ಪ್ರಕಾರವಾಗಿದೆ ಎಂದರು 

ಪಟ್ಟಣ ಪಂಚಾಯಿತಿಯ ಆಡಳಿತ ವ್ಯವಸ್ಥೆಯಲ್ಲಿ  ಮನೆಗಳಿಗೆ ಸಂಬಂಧಿಸಿದಂತೆ  ಖಾತಾ ನಕಲು, ಅಂಗಡಿಗಳಿಗೆ, ಉದ್ಯಮಿದಾರರಿಗೆ , ವಾಣಿಜ್ಯ ಪರವಾನಿಗೆ ನೀಡಲಾಗುವುದು, ಜನನ, ಮರಣ ಪ್ರಮಾಣ ಪತ್ರಗಳು, ಕಟ್ಟಡ ಪರವಾನಿಗೆ ನೀಡುವುದು, ನಳ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದು , ಆಸ್ತಿ ಮಾಲಿಕತ್ವದ ಹಕ್ಕು ಬದಲಾವಣೆ, ಈಗೆ ಹಲವಾರು ಒಟ್ಟು 18 ಸೇವೆಗಳನ್ನು ನೀಡಲಾಗಿದೆ  ಹಾಗೂ ವಿದ್ಯಾರ್ಥಿಗಳಿಗೆ ಬುಕ್ ಬಿಲ್ ಎಂಬ ಪ್ರೋತ್ಸಾಹ ಧನವಾಗಿ ಪ್ರತಿ ವರ್ಷ ನೀಡಲಾಗುತ್ತಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು   ಹೇಳಿದರು.

ಕಿರಿಯ ಆರೋಗ್ಯ ನಿರೀಕ್ಷಕರಾದ ಅನುಷಾ ರವರು ಮಾತನಾಡಿ ಪ್ಲಾಸ್ಟಿಕ್ ನಿಂದ ಆಗುವ ಅನಾನುಕೂಲಗಳು ಕುರಿತು ಚರ್ಚಿಸಿದರು

ಜನನ ಮತ್ತು  ಮರಣ ಪ್ರಮಾಣ ಪತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು  ಹಸಿ ಕಸ ಮತ್ತು ಒಣ ಕಸ ಪ್ರತಿ ಮನೆಯಲ್ಲಿ ವಿಂಗಡಣೆ ಮಾಡಬೇಕು ಪಟ್ಟಣ  ಸ್ವಚ್ಛತೆ ಹೊಂದಲು  ಪಟ್ಟಣ ಪಂಚಾಯಿತಿಯ  ಸಿಬ್ಬಂದಿ ಜೊತೆಗೆ ಸಾರ್ವಜನಿಕರು ಸಹಕರಿಸುವಂತೆ ನಿಮ್ಮ ನಿಮ್ಮ ಮನೆಯಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು  ಎಂದು ಹೇಳಿದರು.

ನಂತರ ವಿದ್ಯಾರ್ಥಿನಿಯರು  ಮುಖ್ಯಧಿಕಾರಿಗಳ ಜೊತೆ ಪಟ್ಟಣ ಪಂಚಾಯತ್ ಆಡಳಿತದ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಗಳನ್ನು ಕೇಳುವುದರ ಮೂಲಕ ಪರಿಹಾರ ಕಂಡುಕೊಂಡರು ಹಾಗೂ ವಿದ್ಯಾರ್ಥಿನಿಯರು  ಮುಖ್ಯಧಿಕಾರಿಗಳಿಗೆ ಶಾಲೆಯ ಸಮಸ್ಯೆ ಕುರಿತು ಪರಿಹರಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು 

ಈ ಸಂದರ್ಭದಲ್ಲಿ ಸದಸ್ಯೆ ವೀಣಾ ವಿವೇಕಾನಂದ, ಶಿಕ್ಷಕ ಹೆಚ್. ಮಹಾಂತೇಶ್, ಜಿ. ಕೊಟ್ರಮ್ಮ, ಅನಿತಾ ಮತ್ತು  ವಿದ್ಯಾರ್ಥಿನಿಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ