"ಶಕ್ತಿ " ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟ!

ಬಸ್ ಗಳ ನಿರ್ವಹಣೆ ಗೆ ಒದ್ದಾಟ/ ಖಾಸಗಿ ಬಸ್ ಗಳ ಮಾಲೀಕರ ಸಮಸ್ಯೆ ಕೇಳುವರು ಯಾರು?

ಕೊಟ್ಟೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ದಿನದಿಂದ ಖಾಸಗಿ ಬಸ್ಸುಗಳ ಆದಾಯ ಕಡಿಮೆಯಾಗಿ ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಖಾಸಗಿ ಬಸ್ ಮಾಲೀಕರು ಗೋಳಾಡುತ್ತಿದ್ದಾರೆ. 

ಕೊಟ್ಟೂರು ಪಟ್ಟಣದಲ್ಲಿ ಸುಮಾರು 30 ರಿಂದ 50 ಖಾಸಗಿ ಬಸ್ಸುಗಳಿದ್ದು ಅವುಗಳ ಮಾಲೀಕರು ಮತ್ತು ಶಕ್ತಿ ಯೋಜನೆ ಹೊಡೆತಕ್ಕೆ ನಲುಗಿ ಹೋಗಿದ್ದಾರೆ. ಪ್ರತಿ ದಿನ ಡೀಸೆಲ್ ಗೆ ಕೈಯಿಂದ ಸಾವಿರ ಎರಡು ಸಾವಿರ ಹಾಕಿ ಬಸ್ ಓಡಿಸುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಪಾಡು ಏನಾಗಬೇಕು ಎಂದು ಖಾಸಗಿ ಬಸ್ ಮಾಲೀಕರು ಸ್ಟ್ಯಾಂಡ್ ಏಜೆಂಟ್ ಗಳು ಹಾಗೂ ಕ್ಲೀನರ್ ಡ್ರೈವರ್ ಗಳ ಪ್ರಶ್ನೆಯಾಗಿದೆ.

ಪ್ರತಿನಿತ್ಯ ಎಷ್ಟು ಬಸ್ಸುಗಳ ಓಡಾಟ?; 

ಕೊಟ್ಟೂರು ಪಟ್ಟಣದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ದಿನನಿತ್ಯ ಖಾಸಗಿ ಬಸ್ಸುಗಳು ಸಂಚಾರ ಮಾಡುತ್ತಿವೆ ಈ ಪೈಕಿ ಹಗಲು ವೇಳೆಯಲ್ಲಿ ರೂಟ್ ವಾಹನಗಳಾಗಿ ಸಾರಿಗೆ ಸೇವೆ ನೀಡುತ್ತಿವೆ. ಕೊಟ್ಟೂರು ಪಟ್ಟಣದಿಂದ ಚಿತ್ರದುರ್ಗ ಶಿವಮೊಗ್ಗ ದಾವಣಗೆರೆ ಪಾವಗಡ ಮಣಿಪಾಲು ಮಂಗಳೂರು ರಾಯದುರ್ಗ ಮಾರ್ಗಗಳಲ್ಲಿ ಖಾಸಗಿ ಬಸ್ಸುಗಳ ಓಡಾಡುತ್ತಿದ್ದು ಈ ಹಿಂದೆ ಖಾಸಗಿ ಬಸ್ಸುಗಳು 50 ರಿಂದ 60ರಷ್ಟು ಪರಿಚಯ ಆಗುತ್ತಿದ್ದವು ಆದರೆ ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ಬಸ್ಸುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ಇದು ಬಸ್ ಮಾಲೀಕರಿಗೆ ನುಂಗಲಾಗದ ತುತ್ತಾಗಿದ್ದು ಬ್ಯಾಂಕ್ ಹಾಗೂ ಖಾಸಗಿ ಯಾಗಿ ಪಡೆದ ಸಾಲದ ಪ್ರತೀ ತಿಂಗಳು ಕಂತು ( ಇಎಂಐ) ಕಟ್ಟುವುದು ಕಷ್ಟವಾಗುತ್ತಿದೆ. ಎಂದು ಖಾಸಗಿ ಬಸ್ ಮಾಲೀಕರು ತಮ್ಮ ನೋವನ್ನು ತೋಡಿ ಕೊಳ್ಳುತ್ತಿದ್ದಾರೆ.

ಖಾಸಗಿ ಬಸ್ ಮಾಲೀಕರ ಕಷ್ಟ ಕೇಳುವವರು ಯಾರು?:

 ಶಕ್ತಿ ಯೋಜನೆ ದಿಂದ ಖಾಸಗಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರು ಸಂಚರಿಸುತ್ತಿಲ್ಲ ಇದರಿಂದ ಪ್ರಯಾಣಿಕರ ಪಯಣ ತೀವ್ರ ಕುಸಿತಿದ್ದು. ಬಸ್ಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ ಬ್ಯಾಂಕ್ ಸಾಲ ಕಟ್ಟಲಾಗುತ್ತಿಲ್ಲ ಈ ಎಂ ಐ ಕಟ್ಟಲು ಕಷ್ಟವಾಗಿದೆ. ಇದರಿಂದ ಬ್ಯಾಕ್ ಸಾಲ ಮತ್ತು ಬಡ್ಡಿ ಏರಿಕೆಯಾಗುತ್ತದೆ ಇದೆ. ಹೀಗಾಗಿ ಬಸ್ ರೂಟ್ ಗಳು ಕಡಿಮೆ ಮಾಡಲಾಗುತ್ತದೆ. ರಜೆ ದಿನಗಳಲ್ಲಿ ಬಸ್ಸುಗಳ ಓಡಾಟ ಸ್ಥಗಿಸಿಕೊಳ್ಳಲಾಗುತ್ತದೆ ಬಸ್ ವರ ಬಂದರೆ ಡೀಸೆಲ್ ಮತ್ತಿತರ ಖರ್ಚುಗಳಿಗೆ ಹಣ ಜೋಡಿಸಲೇಬೇಕು ಜೊತೆಗೆ ಹಣ ಕಟ್ಟಲೇಬೇಕು ಹೀಗೆ ಹತ್ತಾರು ಸಮಸ್ಯೆಗಳಿಂದ ಖಾಸಗಿ ಬಸ್ಗಳ ಮಾಲೀಕರು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಕ್ತಿ ಯೋಜನ ಬಳಿಕ ಕೆಲವರು ಬಸ್ ಗಳ ಮಾರಾಟಕ್ಕೆ ಮತ್ತು ಕೆಲವರು ಖಾಸಗಿ ಶಾಲೆಗಳಿಗೆ ಬಸ್ಸುಗಳನ್ನು ಗುತ್ತಿಗೆ ನೀಡಲು ಆಲೋಚಿಸುತ್ತಿದ್ದಾರೆ ಎಂದು ತಮ್ಮ ನೋವನ್ನು ತೋಡಿ ಕೊಳ್ಳುತ್ತಿದ್ದಾರೆ ಖಾಸಗಿ ಬಸ್ಗಳ ಮಾಲೀಕರು ಶಕ್ತಿ ಯೋಜನೆಗೆ ಸರ್ಕಾರ ನೀಡುವ ಆರ್ಥಿಕ ನೆರವು ಖಾಸಗಿ ಬಸ್ಸುಗಳಿಗೆ ವಿಸ್ತರಿಸಿದರೆ ಖಂಡಿತ ನಮಗೂ ಅನುಕೂಲವಾಗುತ್ತದೆ ಎಂದು ಖಾಸಗಿ ಬಸ್ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

ಕೋಟ್

"ಶಕ್ತಿ "ಯೋಜನೆ ಬಳಿಕ ಖಾಸಗಿ ಬಸ್ ಗಳ ಮಾಲೀಕರು ಮತ್ತು ಏಜೆಂಟ್, ಡ್ರೈವರ್ ಮತ್ತು ಕ್ಲೀನರ್ ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದ್ದು ನಾವು ದಿನನಿತ್ಯ ಸಾಲ ಮಾಡಿ ಬದುಕುವ ಸ್ಥಿತಿ ಬಂದಿದೆ ರಾಜ್ಯ ಸರ್ಕಾರವು ಖಾಸಗಿ ಬಸ್ ಮಾಲೀಕರ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಯೋಜನೆಯು ನಮಗೂ ವಿಸ್ತರಿಸಿದರೆ ಹೇಗೋ ಜೀವನ ಸಾಗಿಸಬಹುದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. 

-ಟಿ. ಮೈಲಾಪ್ಪ.

ಖಾಸಗಿ ಬಸ್ ಸ್ಟಾಂಡ್ ಏಜೆಂಟ್ ಕೊಟ್ಟೂರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ