ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ಸಂಪೂರ್ಣ ವಿಫಲ : ದಲಿತ ಸಂಘಟನೆ ಮನವಿ



ಮಸ್ಕಿ: ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ಮಸ್ಕಿ ಪುರಸಭೆ ಸಂಪೂರ್ಣವಾಗಿ ವಿಫಲವಾಗಿದೆ. ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕ ಸಮಿತಿ ಮಸ್ಕಿ ವತಿಯಿಂದ ಜಿಲ್ಲಾ ಅಧಿಕಾರಿಗಳು ರಾಯಚೂರು ಅವರಿಗೆ ಪುರಸಭೆ ಮುಖ್ಯಾಧಿಕಾರಿ ರವರ ಮೂಲಕ ಮನವಿ ಸಲ್ಲಿಸಿದ್ದಾರೆ.

ನಂತರ ಮಾತನಾಡಿದ ತಾಲೂಕ ಸಂಚಾಲಕ ಬಸವರಾಜ ಕೊಠಾರಿ ರಸಭೆಗೆ ಸರ್ಕಾರದ ಅನುದಾನ ಹಾಗೂ ಟ್ಯಾಕ್ಸ್ ರೂಪದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ ಆದರೆ ಪಟ್ಟಣ ಅಭಿವೃದ್ಧಿ ಕಾಣುತ್ತಿಲ್ಲ, ಪಟ್ಟಣದ ಜನರಿಗೆ ವಿವಿಧ ಯೋಜನೆಗಳಲ್ಲಿ ಆಶ್ರಯ ನಿವೇಶನ ಹಕ್ಕು ಪತ್ರ ನೀಡದೆ ಒಂದು ವರ್ಷದಿಂದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಶೌಚಾಲಯ, ಕಸವಿಲೇವಾರಿ ಘಟಕ ನಿರ್ಮಾಣ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪರಾಪುರ ರಸ್ತೆಯಲ್ಲಿ ಇರುವಂತಹ ವಾಜಪೇಯಿ ಆಶ್ರಯ ನಿವೇಶನಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಈ ಕೂಡಲೇ ಹಕ್ಕು ಪತ್ರ ನೀಡಿದೆ ವಿಳಂಬ ನೀತಿ ಅನುಸರಿಸುತ್ತಿದ್ದಿರಾ ,

ವಾಣಿಜ್ಯ ಮಳಿಗೆಗಳು ಹಾಗೂ ಇನ್ನಿತರ ಕಾಮಗಾರಿ ಮುಗಿದರು ಟೆಂಡರ್ ಕರೆಯುತ್ತಿಲ್ಲ. ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಬಿಡುಗಡೆ ಆಗಿರುವ ಅನುದಾನ ಕೆಲಸ ಗಳಿಗೆ ಟೆಂಡರ್ ಕರಿಯದೆ ವಿಳಂಬ ಮಾಡುತ್ತಿದ್ದಾರೆ.ಪುರಸಭೆಯ ಅಧಿಕಾರಿಗಳು ಜನರಿಗೆ ಸಕಾಲದಲ್ಲಿ, ವಿವಿಧ ದಾಖಲೆಗಳು ಸರಿಯಾದ ಸಮಯಕ್ಕೆ ಒದಗಿಸುತ್ತಿಲ್ಲ,ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಕಂಡುಕೊಂಡ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಈ ಮೇಲಿನ ವಿವಿಧ ಬೇಡಿಕೆಗಳು ಈಡೇರಿಸದೆ ಹೋದಲ್ಲಿ ಕಾರ್ಯಾಲಯದ ಮುಂದೆ ಕ ದ ಸಂ ಸಮಿತಿ ( ಅಂಬೇಡ್ಕರ್ ವಾದ ) ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಪತ್ರ ಮುಖಾಂತರ ಎಚ್ಚರಿಸಿದರು. 

 ಈ ಸಂದರ್ಭದಲ್ಲಿ ಚಿನ್ನಪ್ಪ ಹೆಡಗಿ ಬಾಳ ಜಿಲ್ಲಾ ಸಂಚಾಲಕ ರಾಯಚೂರು, ಬಸವರಾಜ ಕೊಠಾರಿ ತಾಲೂಕ ಪ್ರ ಸಂಚಾಲಕ ಮಸ್ಕಿ, ಹಾಗೂ ನಾಗಪ್ಪ, ದೇಶಪ್ಪ, ಪರಶುರಾಮ, ರವಿರಾಜ, ಪ್ರಶಾಂತ್ ಹಾಗೂ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*