*ಅಲಬೂರು ಗ್ರಾಮ ಪಂಚಾಯಿತಿ,ಜೆಜೆಎಂ ಕಾಮಗಾರಿ ಕಳಪೆ, ಅಧಿಕಾರಿಗಳ ವಿರುದ್ಧ- ಸಾರ್ವಜನಿಕರ ಆಕ್ರೋಶ*
ವಿಜಯನಗರ ಜಿಲ್ಲೆ ಕೊಟ್ಟೂರು ತಾಲುಕು ವ್ಯಾಪ್ತಿಗೆ ಬರುವ ಅಲಬೂರುನಲ್ಲಿ 'ಜಲಜೀವನ್ ಮಿಷಿನ್' ಕಾಮಗಾರಿ 'ಕಳಪೆ' ಕಾಮಗಾರಿಯಿಂದ ಕೂಡಿರುತ್ತದೆ. ಎಂದು ಕೆಲವು ಸಾವ೯ಜನಿಕರು ನಮ್ಮ ಮಾಧ್ಯಮಕ್ಕೆಈ ಹೇಳಿಕೆಯನ್ನು ನೀಡಿರುವರು. ಸೂಕ್ತ ಸಮಯದಲ್ಲಿ ಕಾಮಗಾರಿ ಪೂಣ೯ ಗೊಳಿಸದಿದ್ದರೆ, ಸಾವ೯ಜನಿಕರು ಕೆಲವು ಸಮಸ್ಯೆಗಳನ್ನು ಅನಿವಾರ್ಯವಾಗಿ ಅನುಭಸಬೇಕು. 'ಜಲಜೀವನ್ ಮಿಷಿನ್' ಕಾಮಗಾರಿ ಗುತ್ತಿಗೆದಾರರು ಮತ್ತು ಕೆಲವು ಅಧಿಕಾರಿಗಳು, ನಿಲ೯ಕ್ಷ್ಯತನದಿಂದ ಗ್ರಾಮೀಣ ಭಾಗದ ರಸ್ತೆಗಳನ್ನು ಅಗೆದು, ಹಾಗೆ ಬಿಡುವುದರಿಂದ ಅಲ್ಲಿನ ದಾರಿಹೋಕರಿಗೆ ತೊಂದರಯಾಗುತ್ತದೆ ಮತ್ತು ಆ ತೆಗ್ಗುಗಳಲ್ಲಿ ಅರಿದು ಬಂದ ಚರಂಡಿ ನೀರು ಅಲ್ಲೇ ನಿಂತು ಕೊಳೆತು ನಾರುವಂತಾಗಿದೆ ಇದರಿಂದ ಸೊಳ್ಳೆ ಕ್ರಿಮಿಕೀಟದಿಂದ ರೋಗ ಬರುವ ಭೀತಿಯಲ್ಲಿ ಸಾರ್ವಜನಿಕರು ಭಯಪಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಅಲಬೂರಿನ ಕೆಲವು ಓಣಿಗಳಲ್ಲಿನ ರಸ್ತೆ ಮತ್ತು ಚರಂಡಿಯನ್ನು ಅಗೆದು ಹಾಗೆ ಬಿಟ್ಟಿರುವರುವರಂತೆ, ಇದರಿಂದ ಅನೇಕ ಶಾಲಾ ಮಕ್ಕಳಿಗೆ, ವಯೋವೃದ್ಧರಿಗೆ, ಸ್ತ್ರೀಯರಿಗೆ, ದ್ವಿ-ಚಕ್ರ ವಾಹನ ಸವಾರರಿಗೆ, ಅಂಧರಿಗೆ, ಕುರಿ -ದನಕರುಗಳಿಗೆ ಸುಗಮ ಸಂಚಾರಕ್ಕೆ , ತಡೆಯೊಡ್ಡುತ್ತದೆ ಹಾಗೂ ಅನಾನುಕೂಲವಾಗುತ್ತದೆ ಎಂದು ಅಲ್ಲಿನ ಕೆಲವರು ತಮ್ಮ ನೋವನ್ನು ತೋಡಿಕೊಂಡರು. ಈ ನೋವನ್ನು ತಾಳಲಾರದೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಿಳಿಸಿದರೆ "ಕಣ್ಣು ಇದ್ದು , ಕುರುಡರಂತೆ" ಮತ್ತು "ಕಿವಿ ಇದ್ದು, ಕೀವುಡರಂತೆ" ವತಿ೯ಸುವರಂತೆ.ಕೆಲವು ಕಡೆ ಮುಚ್ಚಿದರೂ, ಇನ್ನು ಕೆಲವು ಕಡೆ 3 ರಿಂದ 4 ತಿಂಗಳುಗಳಾದರು ಮುಚ್ಚುತ್ತಿಲ್ಲ ಇದರಿಂದ ವಯೋವೃದ್ಧರು ಮತ್ತು ಮಕ್ಕಳು ಬಹಳ ನೋವನ್ನುಂಡಿರುವರು ಎಂದು ಸಾವ೯ಜನಿಕರು ಹೇಳುವರಂತೆ.
ಕೆಲವು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸರಕಾರದ ನಿಯಮದ ಪ್ರಕಾರ, ಗ್ರಾಮ ಪಂಚಾಯತಿಗೆ ಬೇಕಾಗುವ ನೀರಿನ ಮೂಲವನ್ನು ಗುರುತಿಸಿ, ಕ್ರಿಯಾಯೋಜನೆ ರೂಪಿಸಿ, ನಂತರ ಗ್ರಾಮದ ಜನರನ್ನು ಒಳಗೊಂಡ ಗ್ರಾಮ ಸಭೆಯಲ್ಲಿ ಅನುಮೋಧನೆಗೊಳ್ಳಬೇಕು. ಆದರೆ ಈ ನಿಯಮವನ್ನು ಪಾಲನೆ ಮಾಡದೇ ಕೆಲವರು ಗಾಳಿಗೆ ತೂರುವರಂತೆ.ಮತ್ತು ಇಲ್ಲಿನ ಪಿಡಿಒ ಮಾಧವಿಯವರನ್ನು ಕೇಳಿದರೆ ಸಂಬಂಧವಿಲ್ಲ ಎಂದು ಹೇಳುತ್ತಾರಂತೆ ಹಾಗೂ ಇಲ್ಲಿನ ಜನನಾಯಕರು ಸಹ ಯಾವ ರೀತಿಯ ಕ್ರಮ ಕೈಗೊಂಡಿಲ್ಲ
ಸರಕಾರದ ನಿಯಮದ ಪ್ರಕಾರ ಆಳ ಮತ್ತು ಉದ್ದವನ್ನು ತೆಗೆಯದೆ, 1ಅಥವಾ ಒಂದೂವರೆ ಅಡಿ ಆಳ ತೆಗೆದು, ಇನ್ನು ಕೆಲವು ಕಡೆ 2 ಮತ್ತು 3 ಅಡಿ ಆಳ ತೆಗೆದು ಅರೆಬರೆಯ ಕಾಮಗಾರಿಯನ್ನು ಮಾಡಿ, ಗುಂಡಿಯನ್ನು ಕೆಲವು ಕಡೆ ಮುಚ್ಚಿ, ಇನ್ನು ಕೆಲವು ಕಡೆ ಮುಚ್ಚದೆ ಹಾಗೆ ಬಿಟ್ಟು, ಕೆಲವು ಕಡೆ ಕಾಮಗಾರಿ ಮುಗಿದು 2 ಮತ್ತು 3 ತಿಂಗಳು ಆದರೂ, ಅಲ್ಪಾ ಪ್ರಮಾಣ ಆಳ ತೆಗೆದ ರಸ್ತೆಯಲ್ಲಿ , ಬಹಳ ಬಾರವಾದ ಲೋಡನ್ನು ತುಂಬಿಕೊಂಡು, ವಾಹನ ಚಲ್ಲಿಸಿದರೆ, ಪೈಪು ಅಪ್ಪಚ್ಚಿಯಾಗಿ ಹೋಗುತ್ತದೆ. ಇದಕ್ಕೆ ಯಾರು ಹೊಣೆ? ಎಂದು ಅಲ್ಲಿನ ಸಾವ೯ಜನಿಕರಲ್ಲಿ ಅಲಬೂರು ಗುರುರಾಜ ರವರು ಕೇಳಿರು.
ಸಿಮೆಂಟ್ ರಸ್ತೆಯನ್ನು ಅಗೆದಾಗ ಬರುವ ತ್ಯಾಜ್ಯಗಳನ್ನುಗಳನ್ನು ಕೆಲವು ಕಡೆ ಹಾಗೆ ಬಿಟ್ಟಿರುವರಂತೆ, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದರೆ, ನಿಲ೯ಕ್ಷ್ಯೆ ಮತ್ತು ಜಾರಿಕೆಯ ಉತ್ತರ ನೀಡುವರಂತೆ. ಅವರಿಂದ ಬರುವ ಉತ್ತರ ಎಂದರೆ, ನೋಡುತ್ತೇವೆ, ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸುತೇವೆ, ಎಂದು ಹೇಳಿರುವ ಅಧಿಕಾರಿಗಳು, ಇದುವರೆಗೂ, ಯಾವುದೇ ಕಾನೂನು ಕ್ರಮ ಜರುಗಿಸಿವುದಿಲ್ಲ, ಯಾರಿಗಾದರೂ ತೊಂದರೆಯಾದ್ದರೆ, ಅದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೇರ ಹೊಣೆ ಎಂದು ಅಲ್ಲಿನ ಕೆಲವು ಸಾವ೯ಜನಿಕರ ತಮ್ಮ ಅಕ್ರೋಶ ವ್ಯಕ್ತ ಪಡಿಸಿದರು. ಈ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ರವರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳವರು ಎಂಬ ಆಶಯದೊಂದಿಗೆ.
ಈ ಸಂದರ್ಭದಲ್ಲಿ ಓಣಿಯ ಮುಖಂಡರಾಜ ರಾಮಪ್ಪ, ಗುರುರಾಜ, ನಾಗಪ್ಪ, ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ