ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಿತ ಟ್ರಸ್ಟ್(ರಿ)ವತಿಯಿಂದ ರಾಯಪ್ಪ ಬಳಗಾನೂರ ಇವರಿಗೆ ರಾಷ್ಟ್ರಮಟ್ಟದ ಕ್ರೀಡಾ ರತ್ನ ಪ್ರಶಸ್ತಿ ಪ್ರಧಾನ

ಲಿಂಗಸಗೂರು : ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಿತ ಟ್ರಸ್ಟ್(ರಿ.) ರಾಷ್ಟ್ರಮಟ್ಟದ ಕ್ರೀಡಾ ರತ್ನ ಪ್ರಶಸ್ತಿಗೆ ಹಟ್ಟಿ ಚಿನ್ನದ ಗಣಿಯ ಶ್ರೀ ಶರಣಬಸವೇಶ್ವರ ಬಾಲಕಿಯರ ಅನುದಾನಿತ ಪ್ರೌಢಶಾಲೆ ಹಟ್ಟಿ ಪಟ್ಟಣ ಶಾಲೆಯಲ್ಲಿಸುಮಾರು ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಹಾಗೂ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಇವರ ಶ್ರಮ ಅಮೋಘವಾಗಿದ್ದು. ಇವರ ಸೇವೆಯನ್ನು ಗುರುತಿಸಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟ್ (ರಿ) ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ ಸುಂದರ ಕಾರ್ಯಕ್ರಮದಲ್ಲಿ ಅನೇಕ ಸಾಧಕರಿಗೆ ಸನ್ಮಾನ ಮಾಡಲಾಯಿತು.

30 ಸಾಧಕರಿಗೆ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿತು.ಹಾಗೂ7 ಸಾಧಕರಿಗೆ ರಾಷ್ಟ್ರಪ್ರಶಸ್ತಿ.ಹಾಗೂ ಹತ್ತು ಸಾಧಕರಿಗೆ ರಾಜ್ಯ ಪ್ರಶಸ್ತಿ.9 ಸಾಧಕರಿಗೆ ಕರುನಾಡು ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ರಾಯಪ್ಪ ಬಳಗಾನೂರ ಇವರಿಗೆ ಈ ಹಿಂದೆ ಅನೇಕ ಪ್ರಶಸ್ತಿಗಳು ಲಭಿಸಿದ್ದು ಅವರು ಕ್ರೀಡೆಯಲ್ಲಿ ಅಮೋಘ ಸೇವೆಯನ್ನು ನೋಡಿ ಹಾಗೂ ಅನೇಕ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಿದ ಕೀರ್ತಿ ಶ್ರೀರಾಯಪ್ಪ ದೈಹಿಕ ಶಿಕ್ಷಕರ ಕ್ರೀಡಾ ಸ್ಪೂರ್ತಿಯನ್ನು ನೋಡಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಿತ ಟ್ರಸ್ಟ್(ರಿ) ಇವರು ಶ್ರೀ ರಾಯಪ್ಪ ಬಳಗಾನೂರ ಇವರನ್ನು ರಾಷ್ಟ್ರಮಟ್ಟದ ಕ್ರೀಡರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕರುನಾಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು  

ಶ್ರೀವಿಘ್ನೇಶ್ ಹಿರೇನಗನೂರು ಪತ್ರಕರ್ತರು ಹಟ್ಟಿ. ರಾಯಚೂರು ಜಿಲ್ಲೆ. ಮೌನುದ್ದೀನ್ ಬೂದಿನಾ ಳ ಹಾಗೂ ಮೋಹನ್ ಗೋಸ್ಲೆ ಇವರನ್ನು ಸಮಾಜ ಸೇವಯನ್ನು ಗುರುತಿಸಿ ಕರುನಾಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಿತ ಟ್ರಸ್ಟ್(ರಿ.)ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಸುರ್ವೆ.ಗೌರವಾಧ್ಯಕ್ಷರು ರಮೇಶ ಅಂಗಡಿ. ದಿವ್ಯ ಸಾನಿಧ್ಯ ಡಾಕ್ಟರ್ ಬಸವ ರಮಾನಂದ ಮಹಾಸ್ವಾಮಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಅಧ್ಯಕ್ಷತೆ ಡಾ.ಸರಸ್ವತಿ ಚಿಮ್ಮಲಗಿ ಸಾಹಿತಿಗಳು ಶಿಕ್ಷಣ ತಜ್ಞರು ವಿಜಯಪುರ.ಡಾಕ್ಟರ್ ಸತೀಶ್ ಕುಮಾರ ಎಸ್ ಹೊಸಮನಿ ನಿರ್ದೇಶಕರು ಸರ್ವಜನಿಕ ಗ್ರಂಥಾಲಯ ಇಲಾಖೆ ಕರ್ನಾಟಕ ಸರ್ಕಾರ. ಡಾಕ್ಟರ್ ಮಾಂತೇಶ್ ಮಲ್ಲನಗೌಡ.ಹಾಗೂ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*