ಮತ್ತಿಹಳ್ಳಿ ತಳವಾರ ಮದ್ದಾನಪ್ಪ ಲಂಚದ ಅವತಾರ..?
ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಮತ್ತಿಹಳ್ಳಿ ಗ್ರಾಮದ ಮದ್ದಾನಪ್ಪ ತಳವಾರ ಎಂಬುವನು ಅದೇ ಊರಿನ ಬಸವರಾಜ್ ಹತ್ತಿರ ವ್ಯಾಜ್ಯ ಇರುವುದನ್ನು ಸರಿ ಮಾಡಿ ಕೊಡುವೆ ಎಂದು 50 ಸಾವಿರಗಳನ್ನು ಲಂಚ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬಸವರಾಜ ಮತ್ತವರ ಸಹೋದರಿಯ ನಡುವೆ ಪಾಲು ವಿಭಾಗಕ್ಕೆ ಸಂಬಂಧಿಸಿದಂತೆ ವ್ಯಾಜ್ಯವಿದ್ದು, ಅದನ್ನು ಬಗೆಹರಿಸಿ ಪಹಣಿ ಮಾಡಿಸಿಕೊಡುತ್ತೇನೆ, ಈ ಹಿಂದೆ ಇದ್ದ ಅಧಿಕಾರಿಗಳಿಗೆ ಹಣ ಕೊಡಬೇಕು ಎಂದು ಹೇಳಿ ಬಸವರಾಜರವರ ಹತ್ತಿರ ಐವತ್ತು ಸಾವಿರ ಹಣ ವಸೂಲಿ ಮಾಡಿದ್ದಾರೆ. ಹಣ ಕೊಟ್ಟು ಒಂದು ವರ್ಷ ಎರಡು ತಿಂಗಳಾದರೂ ಅವರ ಕೆಲಸವನ್ನು ಮಾಡಿಕೊಟ್ಟಿಲ್ಲ. ವಾಪಾಸ್ ಹಣವನ್ನು ಕೊಡು ಎಂದು ಕೇಳಿದ್ದಕ್ಕೆ ಬರೀ ಮೂವತ್ತೈದು ಸಾವಿರ ಕೊಟ್ಟು ಉಳಿದ ಹದಿನೈದು ಸಾವಿರವನ್ನು ಕೊಡಲು ಮೀನಾಮೇಷ ಎಣಿಸುತ್ತಿರುವ ತಳವಾರ ಮದ್ದಾನಪ್ಪ ಇವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಈ ಬಗ್ಗೆ ಹರಪನಹಳ್ಳಿ ತಹಶೀಲ್ದಾರರ ಗಮನಕ್ಕೆ ಹಾಗೂ ಚಿಗಟೇರಿ ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ತಳವಾರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದ್ದಾರೆ. ಉಳಿದ ಹದಿನೈದು ಸಾವಿರ ಕೊಡದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಎಂದು ಬಸವರಾಜ್‌ರವರು ತಳವಾರ ಮದ್ದಾನಪ್ಪವರಿಗೆ ತಿಳಿಸಿದರೆ . ನನ್ನ ವಿರುದ್ಧ ದೂರು ನೀಡುತ್ತಿಯೆ ಎಂದು ತಳವಾರನು ಬೆದರಿಕೆ ಹಾಕುತ್ತಿದ್ದಾನೆ? ಎಂದು ಹಣ ಕೊಟ್ಟವರಿಗೇ ಧಮಕಿ ಹಾಕುವ ಮಟ್ಟಿಗೆ ಒಬ್ಬ ತಳವಾರ ಬೆಳೆದಿದ್ದಾರೆಂದರೆ, ಆಡಳಿತ ಎಷ್ಟು ಹದಗೆಟ್ಟಿರಬಹುದೆಂದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಇಂತಹ ಭ್ರಷ್ಟರ ವಿರುದ್ಧ ಈಗಲಾದರೂ ಮೇಲಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವರೇ ಕಾದುನೋಡಬೇಕಾಗಿದೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ