ಉದ್ಯಮ ಚಟುವಟಿಕೆಯಲ್ಲಿ ಸಕ್ರಿಯವಾಗಿರಿ : ಉಮೇಶ್ ಇಒ
ಮಸ್ಕಿ : ಆರ್ಥಿಕ ಸ್ವಾವಲಂಬನೆ ಸಾಧಿಸಲು ಮಹಿಳೆಯರು ಸ್ವ ಸಹಾಯ ಗುಂಪುಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಬೇಕು ಎಂದು ಮಸ್ಕಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಉಮೇಶ್ ಸಲಹೆ ನೀಡಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಏರ್ಪಡಿಸಿರುವ 6 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಡಿಮೆ ವೆಚ್ಚದಲ್ಲಿ ಉತ್ಪನ್ನ ತಯಾರಿಸಿ ಲಾಭದ ಬೆಲೆಗೆ ಮಾರಾಟ ಮಾಡುವ ಕೌಶಲ್ಯ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಆಯೋಜಿಸುವ ತರಬೇತಿ ಕಾರ್ಯಾಗಾರಗಳು ನೆರವಾಗಲಿವೆ. 6 ದಿನ ಕಡ್ಡಾಯವಾಗಿ ಭಾಗವಹಿಸಿ ಇದರ ಲಾಭ ಪಡೆಯಬೇಕು. ಈ ಹಿಂದೆ ಮಹಿಳೆಯರು ಕುಟುಂಬ ನಿರ್ವಹಣೆ, ಕೃಷಿ ಚಟುವಟಿಕೆಗೆ ಸೀಮಿತವಾಗಿದ್ದರು. ಸರ್ಕಾರ ಪ್ರೋತ್ಸಾಹ ನೀಡಿದರ ಫಲವಾಗಿ ಇಂದು ಮಹಿಳೆಯರು ಸ್ವ ಸಹಾಯ ಗುಂಪುಗಳಲ್ಲಿ ತೊಡಗಿ, ಹಣಕಾಸು ನಿರ್ವಹಣೆ, ಬ್ಯಾಂಕ್ ವ್ಯವಹಾರದಲ್ಲಿ ನೈಪುಣ್ಯ ಸಾಧಿಸಿರುವುದು ಗಮನಾರ್ಹವಾಗಿದೆ. ಮನೆಯ ಅಕ್ಕಪಕ್ಕದಲ್ಲಿರುವ ಮಹಿಳೆಯರು, ಸಂಬಂಧಿಕರಿಗೆ ಗುಂಪುಗಳ ಕುರಿತು ಮಾಹಿತಿ ನೀಡಿ, ಅವರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ,ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕ ಪ್ರಕಾಶ್ , ಸಿಡಾಕ್ ತರಬೇತುದಾರರಾದ ನಾಗರಾಜ್ ಕೆ., ಸಂಪನ್ಮೂಲ ವ್ಯಕ್ತಿ ನಾಗರಾಜ್, ಒಕ್ಕೂಟ ಸಹಾಯಕ ಅರ್ಜುನ, ಬಿಆರ್ಪಿ-ಇಪಿ ಭವಾನಿ, ಸ್ವ ಸಹಾಯ ಗುಂಪಿನ ಮಹಿಳೆಯರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ