"ಪೇಪರ್ ಕಪ್‌ನಲ್ಲಿ ಚಹಾ,ಕಾಫಿ ಸೇವಿಸಿದ್ರೆ ದೇಹ ಸೇರುತ್ತೆ ವಿಷಕಾರಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಸಾರ್ವಜನಿಕರು ಹುಷಾರ್"
"ಪೇಪರ್ ಕಪ್ ನಿರಂತರವಾಗಿ ಬಳಸಿದರೆ ಕ್ಯಾನ್ಸರ್ ಗ್ಯಾರಂಟಿ, ಸಂಶೋಧನೆಯಿಂದ ಸಾಬಿತಾದ ಪೇಪರ್ ಕಪ್ ಅಪಾಯ "
ಕೊಟ್ಟೂರು: ಬಳಸಿ ಎಸೆಯುವ ಪೇಪರ್ ಕಪ್‌ನಲ್ಲಿ ಚಹಾ ಅಥವಾ ಕಾಫಿ ಕುಡಿಯುತ್ತೀರಾ? ಹಾಗಿದ್ದರೆ ಹುಷಾರ್. ನಿಮ್ಮ ದೇಹದ ಒಳಕ್ಕೆ ಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತವೆ. ಸಂಶೋಧನೆಯ ಪ್ರಕಾರ, ಪ್ರತಿನಿತ್ಯ ಪೇಪರ್ ಕಪ್‌ನಲ್ಲಿ ಚಹಾ ಸೇವಿಸುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹಕ್ಕೆ ಹೋಗುತ್ತವೆ.
ಪೇಪರ್ ಕಪ್‌ಗಳಲ್ಲಿ ಬಿಸಿ ದ್ರಾವಣವನ್ನು ಹಾಕಿದ ವೇಳೆ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಹಾಗೂ ವಿಷಕಾರಿ ಅಂಶಗಳು ಸೇರಿಕೊಂಡಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಪೇಪರ್ ಕಪ್‌ಗಳು ತೆಳುವಾದ ಪ್ಲಾಸಿಕ್ ಪದರವನ್ನು ಹೊಂದಿರುತ್ತವೆ. ಕೆಲವೊಮ್ಮೆ ಪಾಲಿಮರ್‌ಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ 15 ನಿಮಿಷದಲ್ಲಿ ಅವು ಬಿಸಿ ನೀರಿನಲ್ಲಿ ಕರಗುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ .
ಸಂಶೋಧನೆಯಿಂದ 100 ಎಂಎಲ್ ಬಿಸಿ ನೀರನ್ನು ಪೇಪರ್ ಕಪ್‌ಗಳಲ್ಲಿ 15 ನಿಮಿಷಗಳ ಕಾಲ ಇಟ್ಟರೆ 25,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಬಿಡುಗಡೆ ಆಗಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ದಿನಕ್ಕೆ ಸರಾಸರಿ 3 ಕಪ್ ಟೀ ಅಥವಾ ಕಾಫಿಯನ್ನು ಪೇಪರ್ ಕಪ್‌ನಲ್ಲಿ ಸೇವಿಸಿದರೆ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹಕ್ಕೆ ಸೇರುತ್ತವೆ. ಅವು ಬರಿಗಣ್ಣಿಗೆ ಕಾಣಿಸುವುದಿಲ್ಲ’ ಎಂದು ತಜ್ಞರು ಹೇಳಿದ್ದಾರೆ.
ಗ್ಲಾಸ್ ಅಥವಾ ಸ್ಟೀಲ್ ಲೋಟಗಳನ್ನು ಬಳಸುವುದು ಒಳಿತು : ವಿಜಯನಗರ ಜಿಲ್ಲಾ ವೈದ್ಯಾಧಿಕಾರಿಗಳು ಶಂಕರ್ ನಾಯಕ್
ಕೊಟ್ 1
ಪೇಪರ್ ಕಪ್ ನಲ್ಲಿ ಪ್ಲಾಸ್ಟಿಕ್ ಲೇಯರ್ ಅಳವಡಿಕೆ ಮಾಡಿರ್‍ತಾರೆ. ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಪೇಪರ್ ಪ್ಲಾಸ್ಟಿಕ್ ಲೇಯರ್ ವುಳ್ಳ ಕಪ್ ಬಳಕೆ ಮನುಷ್ಯನ ಆರೋಗ್ಯಕ್ಕೆ ಹಾನಿಕರ. ಬಳಸದೇ ಇರುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪೇಪರ್ ಗ್ಲಾಸ್‌ನಲ್ಲಿ ಕೂಡ ಪ್ಲಾಸ್ಟಿಕ್‌ನ ಒಂದು ಲೇಯರ್ ಇರುತ್ತೆ. ಹಾಗಾಗಿ ಬಿಸಿ ಟೀ ಕಾಫಿ ಕುಡಿಯಲು ಹಾನಿಕರ ಮತ್ತು ಪ್ಲಾಸ್ಟಿಕ್‌ನಲ್ಲಿ ಕಾರ್ಬನ್ ಇರುತ್ತದೆ. ಅದರಿಂದಾಗಿಯೇ ಬಳಕೆ ಮಾಡಬಾರದುಎಂದು ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕೆಂದು ವಿಜಯನಗರ ಜಿಲ್ಲಾ ವೈದ್ಯಾಧಿಕಾರಿಗಳು ಶಂಕರ್ ನಾಯಕ್ ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ