ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿಗೆ : ಮಾರುತಿ ಇಳಿಗೇರ್ ಆಯ್ಕೆ
ವರದಿ - ಮಂಜುನಾಥ ಕೋಳೂರು ಕೊಪ್ಪಳ.
ಕೊಪ್ಪಳ ಜನವರಿ 12 : - ತಾಲೂಕಿನ ಹಿಟ್ನಾಳ ಗ್ರಾಮದ ನಿವಾಸಿ ಗಂಗಾವತಿ ಕೆ ಎಸ್ ಆರ್ಟಿಸಿ ಘಟಕದ ವಾಹನ ಚಾಲಕ ಮಾರುತಿ ಈಳಿಗೆರ್ ರವರನ್ನು ಚಾಲುಕ್ಯ ವಿಕ್ರಮಾದಿತ್ಯ ರಾಜ್ಯ
ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಮಾರುತಿ ತಂದೆ ದೇವೇಂದ್ರಪ್ಪ ಇಳಿಗೆರ್ ರವರು ಹಿಟ್ನಾಳ ಗ್ರಾಮದ ನಿವಾಸಿಯಾಗಿದ್ದು. ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ಸಾಧನೆಯ ಕೋಗಿಲೆಗಳು ಕಾರ್ಯಕ್ರಮದಲ್ಲಿ ನಿರಂತರ 72 ತಾಸ್ ಗಾಯನ ಮಾಡಿ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ ಇವರ ಸಾಧನೆ ಮತ್ತು ಉತ್ತಮ ಸಾರಿಗೆ ಸೇವೆಯನ್ನು ಪರಿಗಣಿಸಿ ಇವರನ್ನು ಇಟಗಿ ಸಾಂಸ್ಕೃತಿಕ ಉತ್ಸವದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಕೊಡ ಮಾಡುವ ಚಾಲುಕ್ಯ ವಿಕ್ರಮಾದಿತ್ಯ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಸಂಘಟಕರಾದ ಮಹೇಶ್ ಬಾಬು ಸುರುವೇ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ದಿನಾಂಕ 14 ರವಿವಾರ ಸಂಜೆ 5:30 ಗಂಟೆಗೆ ಇಟಗಿ ದೇವಸ್ಥಾನದ ಬಳಿ ಇರುವ ಮಹಾದೇವ ದಂಡ ನಾಯಕನ ವೇದಿಕೆಯಲ್ಲಿ ಆಯೋಜಿಸಿರುವ ಇಟಗಿ ಉತ್ಸವದಲ್ಲಿ ಮಾರುತಿ ಇಳಿಯರವರನ್ನು ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಸದರಿಯವರಿಗೆ ಪ್ರಶಸ್ತಿಗಾಗಿ ಆಯ್ಕೆ ಮಾಡಿರುವುದಕ್ಕೆ ವಿವಿಧ ಸಂಘಟನೆಗಳು ಸೇರಿದಂತೆ ಸಾರಿಗೆ ನೌಕರರ ಸಂಘದ ಸದಸ್ಯರು ಪದಾಧಿಕಾರಿಗಳು ಸಹ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ