ಶಿಶುಪಾಲನಾ ಕೇಂದ್ರ ಉದ್ಘಾಟನೆ
ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮ ಪಂಚಾಯಿತಿಯ ಹ್ಯಾಳ್ಯಾ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ನರೇಗಾ ಯೋಜನೆಯಡಿ ಸ್ಥಾಪಿಸಿರುವ ಕೂಸಿನ ಮನೆ ಉದ್ಘಾಟನಾ ಕಾರ್ಯಕ್ರಮ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಂತೆ ಬುಧವಾರ ನಡೆಯಿತು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಡಿ.ಹಾಲಮ್ಮ ಅವರು ಕೂಸಿನ ಮನೆಯನ್ನು ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ವೃತ್ತಿಯ ಬೇಗಂ ಅವರು ಮಾತನಾಡಿ, ಮಕ್ಕಳ ಪಾಲನೆ ಎಂಬುವುದು ತುಂಬಾ ಜವಾಬ್ದಾರಿಯುತ ಕೆಲಸವಾಗಿದೆ. ಇದನ್ನು ಶ್ರದ್ಧೆ, ಪ್ರೀತಿ ಮತ್ತು ವಾತ್ಸಲ್ಯದಿಂದ ನಿರ್ವಹಿಸಬೇಕು ಎಂದು ಆರೈಕೆದಾರರಿಗೆ ಕಿವಿಮಾತು ಹೇಳಿದರು.
ಕೊಟ್ಟೂರು ತಾಲೂಕು ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್ ವೈ. ಅವರ ಮಾರ್ಗದರ್ಶನದಂತೆ ಸುತ್ತೋಲೆಯಲ್ಲಿನ ವಿಷಯಗಳನ್ನು ಜನಪ್ರತಿನಿಧಿಗಳು, ಆರೈಕೆದಾರರ ಗಮನಕ್ಕೆ ತರಲಾಯಿತು.
ಪಿಡಿಒ ಶ್ರೀ ಸಿ.ಎಚ್.ಎಂ.ಗಂಗಾಧರ, ಟಿಐಇಸಿ ಪ್ರಭು, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀ ಡಿ.ನಾಗೇಶ್, ಸದಸ್ಯರಾದ ಶ್ರೀ ನಾಗೇಶ್, ಗುಂಡಪ್ಪನ ಕೊಟ್ರೇಶ್, ಶಿಲ್ಪಾ ಟಿ ರಾಜ್, ಕೂಸಿನಮನೆಯ ಆರೈಕೆದಾರರು ಸೇರಿದಂತೆ ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇತರರು ಇದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ