ವಿವಿಧ ಕ್ಷೇತ್ರದ ಸಾಧಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಸನ್ಮಾನ
ಲಿಂಗಸಗೂರು-ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಹಾಗೂ ಸಾಂಸ್ಕೃತಿಕ ಸೌರಭ ಗೋವಾ ರಾಜ್ಯದ ಇನ್ಸ್ಟಿಟ್ಯೂಟ್ ಮೆನೆಜ್ಸ್ ಬ್ರಗಂಝ್.ಪಣಜಿ. ಗೋವಾ.ದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕದ ಕನ್ನಡಿಗರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಲಾಯಿತು.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಕಾರ್ಮಿಕ ಸಂಘದ ಉಪಾಧ್ಯಕ್ಷರು ಹಾಗೂ ಸಮಾಜ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಶಾಂತಪ್ಪ ಅನ್ವರಿ. ಹಾಗೂ ಹಿರೇನಗನೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ಶಿಬಾರಾಣಿ ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸಿದ್ದನಗೌಡ ಪಟೇಲ್.ಮತ್ತು ಲಿಂಗಸಗೂರಿನಲ್ಲಿ ಅನೇಕ ವರ್ಷಗಳಿಂದ ಕ್ರಿಕೆಟ್ ತರಬೇತಿದಾರರಾದ ಸೇವೆ ಸಲ್ಲಿಸುತ್ತಿರುವ ಶ್ರೀ ಅಹ್ಮದ್ ಖಾದರ್ ಭಾಷಾ.ಅದೇ ರೀತಿ ಸತತ 30 ವರ್ಷಗಳಿಂದ ರಂಗ ಕಲಾವಿದರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಆದಪ್ಪ ಬಡಿಗೇರ್ ಇವರಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ಪಡೆದ ಕಪಗಲ್ ಗ್ರಾಮದವರದ ಶ್ರೀಮತಿ ಜಯಮ್ಮ ಬಡಿಗರ್ ಪ್ರಸ್ತುತ ರಾಯಚೂರಿನ ಸರಕಾರಿ ಬಾಲಕಿಯರ ಪ್ರೌಢಶಾಲೆ ಸ್ಟೇಷನ್ ಹತ್ತಿರ ರಾಯಚೂರು. ಎಲ್ಲಾ ಸಾಧಕರಿಗೆ ಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಹಾಗೂ ಸಂಸ್ಕೃತಿಕ ಸೌರಭ ಗೋವಾದಲ್ಲಿ ಇನ್ಸ್ಟಿಟ್ಯೂಟ್ ಮೇನೆಜ್ಸ್ ಬ್ರಗಾಂಜ, ಪಂಜಿಮ್ ಗೋವ್ ದಲ್ಲಿ. ಸಾಧಕರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು. ಸ್ನೇಹ ಸಂಸ್ಕೃತಿಕ ಸಂಘ ಬೆಂಗಳೂರು ಅಧ್ಯಕ್ಷರಾದ ಶ್ರೀ ರಂಜಿತ್ ಕುಮಾರ್.ಸಾಂಸ್ಕೃತಿಕ ಸೌರಭ ಗೋವಾ ಶ್ರೀ ಸಿದ್ದಣ್ಣ ಮೇಟಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕ ಕಲಾಪೋಷಕರು. ಶ್ರೀ ಎಮ್ ಶಂಕರ್ ಉಪ ಪೊಲೀಸ್ ಆಯುಕ್ತರು ವಿಜಯವಾಡ.ಹಟ್ಟಿಚಿನ್ನದ ಗಣಿಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಎಸ್ಎಂ ಶಫಿ. ಹಾಗೂ ಡಿಎ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್.ಶಾಂತಪ್ಪ ಆನ್ವರಿ ಮೋನುದ್ದಿನ್ ಬೂದಿನಾಳ. ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿ ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ