ವಕೀಲರ ಮೇಲೆ ಹಲ್ಲೆ- ದೂರು ದಾಖಲು
ಕೊಟ್ಟೂರು: ವಕೀಲರೊಬ್ಬರ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ವಕೀಲ ಸಿ.ಮರುಳಸಿದ್ಧಪ್ಪ ಹಾಗೂ ಇನ್ನೋರ್ವ ವಕೀಲರೊಂದಿಗೆ ದ್ವಿಚಕ್ರ ವಾಹನದಲ್ಲಿ ಪಟ್ಟಣದ ರಾಜೀವಗಾಂಧಿ ನಗರದಲ್ಲಿರುವ ಸ್ನೇಹಿತರ ಮನೆಗೆ ಊಟಕ್ಕೆಂದು ತೆರಳಿದ್ದಾರೆದ್ದಾರೆ.
ಸ್ನೇಹಿತರ ಮನೆಯಲ್ಲಿದ್ದ ಪಿ.ಎಚ್.ಕೊಟ್ರೇಶ್, ರಮೇಶ್ ಹಾಗೂ ಇನ್ನೊರ್ವ ವ್ಯಕ್ತಿ ಸೇರಿದಂತೆ ಮೂವರು ನಾನು ಹಾಗೂ ನನ್ನ ಸ್ನೇಹಿತ ಗಾಡಿಯಿಂದ ಇಳಿಯುತ್ತಿದ್ದಂತೆ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ.
ಕೂಡಲೇ ನನ್ನ ಸ್ನೇಹಿತ ಹಾಗೂ ಸ್ಥಳದಲ್ಲಿದ್ದವರು ನಿತ್ರಾಣಗೊಂಡು ಬಿದ್ದಿದ್ದ ನನ್ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನನ್ನ ಮೇಲಿನ ಹಳೆಯ ದ್ವೇಷದಿಂದ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟಣದ ಠಾಣೆಯಲ್ಲಿ ಹಲ್ಲೆಗೊಳಗಾದ ಮರುಳಸಿದ್ಧಪ್ಪ ದೂರು ದಾಖಲಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ