ವಿಶ್ವಕರ್ಮ ಸಮಾಜ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ದೀಪೋತ್ಸವ ಸಂಭ್ರಮಾಚರಣೆ

ಮಸ್ಕಿ : ಪಟ್ಟಣದ ಕಾಳಿಕಾ ದೇವಿ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಶ್ರೀರಾಮನ ಫೋಟೋ ಪೂಜೆ ಮಾಡಿ. ನಂತರ ವಿಶ್ವಕರ್ಮ ಸಮಾಜ ಹಾಗೂ ಬಿಜೆಪಿ ಪಕ್ಷದ ಮುಖಂಡರು ದೇವಿಗೆ ಭಕ್ತಿಯಿಂದ ದೀಪ ಬೆಳಗಿ ಸರಳತೆಯಿಂದ ದೀಪೋತ್ಸವ ಸಂಭ್ರಮವು ಹಬ್ಬವಾಗಿ ಆಚರಿಸಲಾಯಿತು.

ಸೋಮವಾರ ಅಯೋಧ್ಯೇಯಲ್ಲಿ ಮೈಸೂರ್ ನ ವಿಶ್ವಕರ್ಮ ಸಮಾಜದ ಶಿಲ್ಪಿ ಅರುಣ್ ಯೋಗಿರಾಜ್ ಅವರು ರೂಪಾಗೊಂಡ ಬಾಲಶ್ರೀ ರಾಮನ ಮೂರ್ತಿ ಕೆತ್ತನೆಗೆ ಇಂದು ಪ್ರಾಣ ಪ್ರತಿಷ್ಠಾಪನೆ ಪೂಜೆ ಮಾಡಿದ್ದು ನಮ್ಮ ದೇಶ ನಮ್ಮ ಸಮಾಜದ ಹೆಮ್ಮೆಯ ವಿಷಯವಾಗಿದೆ.ಮಸ್ಕಿ ವಿಶ್ವಕರ್ಮ ಕುಲದೇವತೆ ಶ್ರೀ ಕಾಳಿಕಾ ದೇವಿಗೆ ಮುಂಜಾನೆ ಅಭಿಷೇಕ ಪೂಜಾ ಪುನಸ್ಕಾರಗಳು ಹಾಗೂ ಶ್ರೀ ರಾಮನ ಫೋಟೋಕ್ಕೆ ಪೂಜೆ ಸಲ್ಲಿಸಿ ಆನಂತರ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಸಾಯಂಕಾಲ 5.30 ಕೆ ದೀಪಗಳನ್ನು ಹಚ್ಚುವ ಮುಖಾಂತರ

ಶ್ರೀ ರಾಮನ ಫೋಟೋಕ್ಕೆ ದೀಪ ಬೆಳಗುವ ಮುಖಾಂತರ ಶ್ರೀ ರಾಮನ ನೆನೆದು ಭಕ್ತಿಯಿಂದ ಪೂಜಿಸಿದರು. ಈ ಒಂದು ದೀಪೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಪ್ರತಾಪಗೌಡ ಪಾಟೀಲ್ ಹಾಗೂ ವಿಶ್ವಕರ್ಮ ಸಮಾಜದ ಮಹಿಳೆಯರು ಎಲ್ಲಾರು ಸೇರಿ ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ಮಸ್ಕಿ ವಿಶ್ವಕರ್ಮ ಸಮಾಜದ ಮುಖಂಡರು ದೇವರಾಜ್ ಕಂಬಾರ್ ಅಂಬರೀಷ್ ಚಿಲ್ಕರಾಗಿ,ಮಸ್ಕಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಕಾಳಪ್ಪ ಕಣ್ಣೂರು,ಅ.ಕ.ವಿ.ಮಾ.ರಾ.ಜಿ. ಯುವ ಘಟಕ ಅಧ್ಯಕ್ಷರಾದ ವಿಜಯ್ ಬಡಿಗೇರ್, ಡಾಕ್ಟರ್ ಶಿವಪ್ರಸಾದ್,ಗಂಗಾಧರ್ ಪತ್ತಾರ್, ಚೇತನ್ ಕಂಬಾರ್, ಶಶಿಧರ್ ಬಡಿಗೇರ್,ರವಿಕುಮಾರ್ ಪತ್ತಾರ್ ಹಾಗೂ ಬಿಜೆಪಿ ಮುಖಂಡರು ಮೌನೇಶ್ ನಾಯಕ,ಶರಣಯ್ಯ ಸೊಪ್ಪಿಮಠ,ನಾಗರಾಜ್ ಯಂಬಲದ,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ