" 75ನೇ ಗಣರಾಜ್ಯೋತ್ಸವ ಪೂರ್ವಸಿದ್ದತಾ ಸಭೆ"

ಕೊಟ್ಟೂರು ಪಟ್ಟಣದಲ್ಲಿ ದಿನಾಂಕ: 26.01.2024 ರಂದು ಆಚರಿಸಲಿರುವ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯನ್ನು ಅಮರೇಶ್.ಜಿ.ಕೆ ತಹಶೀಲ್ದಾರರು ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಸೋಮವಾರ ದಂದು ನಡೆಸಲಾಯಿತು.  

26.01.2026 ರಂದು ಬೆಳಿಗ್ಗೆ 7.30 ಗಂಟೆಗೆ ಕೊಟ್ಟೂರು ಪಟ್ಟಣದಲ್ಲಿ ಎಲ್ಲಾ ಶಾಲಾ-ಕಾಲೇಜು, ಕಛೇರಿಗಳಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ನಂತರ 8.30 ಗಂಟೆಗೆ ಕ್ರೀಡಾಂಗಣದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮ ಹಾಗೂ ತಹಶೀಲ್ದಾರರಿಂದ ನೆರವೇರುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸುವಂತೆ ಕೋರಿದರು. 

ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡುತ್ತಾ, ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ನಡೆಸಲು ಸಹಕಾರ ನಿಡುವಂತೆ ಕೋರಿದರು. 

ಧ್ವಜಾರೋಹಣದ ನಂತರ ನಡೆಯುವ ಪಥಸಂಚಲನದಲ್ಲಿ ಸಣ್ಣ ಸಣ್ಣ ಮಕ್ಕಳು ಹಾಗೂ ಹೆಚ್ಚಿನ ತಂಡಗಳು ಭಾಗವಹಿಸದೇ ಅಚ್ಚುಕಟ್ಟಾಗಿ ಮಾರ್ಚ್ಫಾಸ್ಟ್ ಮಾಡಲು ಸೂಕ್ತ ತರಬೇತಿ ನೀಡಿದ ತಂಡಗಳು ಭಾಗವಹಿಸುವಂತೆ ಸೂಚಿಸಿದರು.

ಪೊಲೀಸ್, ಗೃಹರಕ್ಷಕ, ಎನ್್ಸಿಲಸಿ, ಸೇವಾದಳದ ಜೊತೆಗೆ ದೊಡ್ಡಮಕ್ಕಳನ್ನೊಳಗೊಂಡ 12 ತಂಡಗಳನ್ನು ಸಿದ್ದಪಡಿಸುವಂತೆ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ತಿಳಿಸಿದರು. ಕನಿಷ್ಟ 10 ಶಾಲಾ ಮಕ್ಕಳಿಂದ ಅಚ್ಚುಕಟ್ಟಾದ ರಾಷ್ಟ್ರಭಕ್ತಿ, ರಾಷ್ಟ್ರಪೇಮವನ್ನೊಳಗೊಂಡ ಕನ್ನಡ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡುವಂತೆ ಸಲಹೆ ನೀಡಿದರು. 

 ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ , ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ನಿಯಮಾನುಸಾರ ಗಣರಾಜ್ಯೋತ್ಸವನ್ನು ಕಡ್ಡಾಯವಾಗಿ ಆಚರಿಸಲು, ಹಾಗು ಸದರಿ ದಿನದಂದು ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ರವರ ಫೋಟೋಗಳನ್ನು ಇಟ್ಟು ಪೂಜಿಸುವಂತೆ ಹಾಜರಿದ್ದ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಪಿಐ ವೆಂಕಟ ಸ್ವಾಮಿ, ಇಒ ರವಿಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಬಿಇಒ ಪದ್ಮನಾಭ ಕರಣಂ, ಕೊಟ್ಟೂರು/ಕೂಡ್ಲಿಗಿ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ವಿಷಯ ನಿರ್ವಾಹಕರಾದ ವಿಜಯಕುಮಾರ ಪುಟಾಣಿ ಹಾಜರಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ