*ಸರ್ಕಾರಿ ಶಾಲೆಯಲ್ಲಿ ಆಹಾರ ಮೇಳ ಕಾರ್ಯಕ್ರಮ*

ಮಸ್ಕಿ : ತಾಲ್ಲೂಕಿನ ಚಿಕ್ಕ ಕಡಬೂರೂ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಲ್ಲಿ ನೂರು ದಿನಗಳ ಓದುವೆ ನಾನು ಈ ಕುರಿತಂತೆ ಆಹಾರಮೇಳ ಕಾರ್ಯಕ್ರಮ ನಡೆಯಿತು.

ಸರಕಾರಿ ಶಾಲಾ ಆವರಣದಲ್ಲಿ ಮಕ್ಕಳೇ ತಂದು ವ್ಯಾಪಾರಕ್ಕೆ ಇಟ್ಟಂತಹ ಆಹಾರ ಧಾನ್ಯಗಳು ತರಕಾರಿಗಳು ಫಲ ಪುಷ್ಪಗಳು ದಿನಸಿ ಸಾಮಾನುಗಳು ಮುಂತಾದ ವಸ್ತುಗಳನ್ನು ಅವರು ತೂಕ ಮಾಡಿ ಅಳತೆ ನೋಡುವ ಪರಿ ನಿಜಕ್ಕೂ ಅತ್ಯದ್ಭುತ. ವಸ್ತುಗಳ ಖರೀದಿಗಾಗಿ ಸೇರಿದ್ದ ಮಕ್ಕಳು ಪಾಲಕ ಪ್ರತಿನಿಧಿಗಳು ಊರಿನ ನಾಯಕರು ದಾರಿಹೋಕರು ಮುಗಿಬಿದ್ದು ಖರೀದಿಸುತ್ತಿದ್ದರೆ ವಾರದ ಸಂತೆಯನ್ನೇ ನೆನಪಿಸುವಂತಿತ್ತು. ಅತ್ಯುತ್ತಮ ರೀತಿಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು ಪೌಷ್ಟಿಕತೆಯ ಬಗ್ಗೆ ಮಾತ್ರ ತಿಳಿಸುವುದಲ್ಲದೆ ವ್ಯಾಪಾರ ವಹಿವಾಟಿನ ಜ್ಞಾನದ ಕೊಂಡಿಯಾಗಿತ್ತು. ಮಕ್ಕಳು ವಸ್ತುಗಳನ್ನು ಮಾರಿ ಸಂಪಾದಿಸಿದ ಹಣವನ್ನು ಎಣಿಸುತ್ತಿದ್ದರೆ ದೇಶದ ಬೆನ್ನೆಲುಬು ರೈತನನ್ನೇ ನೋಡಿದಂತಾಗುತ್ತಿತ್ತು. ಸರಕಾರದ ಈ ಕಾರ್ಯಕ್ರಮವು ನಿಜಕ್ಕೂ ಯಶಸ್ವಿದಾಯಕ.

ಈ ಸಂದರ್ಭದಲ್ಲಿ, ಶಾಲೆ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು, ಊರಿನ ಪ್ರಮುಖರು ಮತ್ತು ಮಕ್ಕಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ