ಸಾವಿತ್ರಿಬಾಯಿ ಫುಲೆ , 19ನೇ ಶತಮಾನದ ಪ್ರಸಿದ್ಧ ಸಾಮಾಜಿಕ ಸುಧಾರಕಿ :ಡಾ. ರವಿಕುಮಾರ್
ಕೊಟ್ಟೂರು: ಅಕ್ಷರದ್ವ ಸಾವಿತ್ರಿ ಬಾಯಿಪುಲೆ ಅವರ ಜಯಂತಿಯನ್ನು ಕೊಟ್ಟೂರೇಶ್ವರ ಮಹಾವಿದ್ಯಾಲಯ ಕೊಟ್ಟೂರಿನಲ್ಲಿ ಗುರುವಾರ ರಂದು ಆಚರಿಸಲಾಯಿತು.
ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಾನ್ಯ ಸಿದ್ದರಾಮ ಕಲ್ಮಠ ಸರ್ ಅವರು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಕ್ಕೆ ಶುಭ ಕೋರಿದರು
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ರವಿಕುಮಾರ್ ಮಾತನಾಡಿ ಸಾವಿತ್ರಿಬಾಯಿ ಫುಲೆ ಅವರು 19ನೇ ಶತಮಾನದ ಪ್ರಸಿದ್ಧ ಸಾಮಾಜಿಕ ಸುಧಾರಕಿ,ಕವಿ, ಮತ್ತು ಶಿಕ್ಷಣ ತಜ್ಞರಾಗಿದ್ದರು .ಅವರು ಮಹಿಳಾ ಶಿಕ್ಷಣ ಲಿಂಗ ಮತ್ತು ಜಾತಿ ಸಮಸ್ಯೆಗಳ ವಿರುದ್ಧ ಹೋರಾಡುವ ಅಪಾರ ಕೊಡುಗೆಗಳಿಗೆ ಅವರ ಸೇವೆ ಅವಿಸ್ಮರಣೆಯ ಮತ್ತು ಸಾಮಾನ್ಯ ಮಹಿಳೆಯರು ತಮ್ಮ ಸಮಯದಲ್ಲಿ ನಿರ್ಬಂಧಗಳನ್ನು ಹೊಂದಿದ್ದರು ಸಹ ನಿರ್ಭಿತ ಮುಕ್ತ ಮಹಿಳೆಯಾಗಿದ್ದಾರೆ. ಅವರನ್ನು ಭಾರತೀಯ ಸ್ತ್ರೀವಾದ ತಾಯಿ ಎಂದು ಪರಿಗಣಿಸಲಾಗುತ್ತದೆ .ಮಹಿಳಾ ಶಿಕ್ಷಣ ಮತ್ತು ವಿಮೋಚನೆಗೆ ಅವರ ಕೊಡುಗೆ ಶ್ಲಾಘನೀಯ ಮತ್ತು ಇಂದಿಗೂ ಯುವತಿಯರಿಗೆ ಸ್ಪೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ.
ಸಾವಿತ್ರಿಬಾಯಿ ಫುಲೆ ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ. ಸತಿ ಸಹಗಮನ ಪದ್ಧತಿ ಜಾತಿ ಪದ್ಧತಿ ವಿರುದ್ಧ ಹೋರಾಟ ಮಾಡಿ ಹೋರಾಟ ಮಾಡಿ ಮಹಿಳೆಯರಿಗೋಸ್ಕರ ಪ್ರಪ್ರಥಮವಾಗಿ ಶಾಲೆಗಳನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಬ್ರಿಟಿಷ್ ಸರ್ಕಾರ ಇವರಿಗೆ 'ಇಂಡಿಯಾ ಫಸ್ಟ್ ಲೇಡಿ ಟೀಚರ್' ಎಂದು ಬಿರುದು ನೀಡಲಾಯಿತು. ಹಾಗಾಗಿ ಇವರು ದೇಶದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಆಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ .ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ. ರವೀಂದ್ರ ಗೌಡ .ಪ್ರೊ. ಕೃಷ್ಣಪ್ಪ. ಡಾ. ಸಿದ್ದನಗೌಡ . ಪ್ರೊ. ಸಿ ಬಸವರಾಜ. ರಾಧಾಸ್ವಾಮಿ. ಡಾ. ಶಿವಕುಮಾರ್ ಡಾ.ಪೃಥ್ವಿರಾಜ್ ಡಾ. ಚೇತನ್ ಚೌಹಾನ್ . ಬಿಎಸ್ ಪಾಟೀಲ್.ಆರಾಧ್ಯ ಮಠ
ಬಸವರಾಜ್ ಉಮೇಶ ಹಾಗೂ ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಹಾಗೂ ಬೋಧಕೇತರ ವರ್ಗ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ