72 ತಾಸು ನಿರಂತರ ಗಾಯನ : ದಾಖಲೆ ನಿರ್ಮಿಸಿದ ಈಳಿಗೇರ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಜ 12 ,,ತಾಲೂಕಿನ ಹಿಟ್ನಾಳ ಗ್ರಾಮದ ನಿವಾಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಗಂಗಾವತಿಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರುತಿ ದೇವೇಂದ್ರಪ್ಪ ಇಳಿಗೆರ್ ರವರು ನಿರಂತರ 72 ತಾಸುಗಳ ಕಾಲ ಗಾಯನ ಮಾಡಿ ದಾಖಲೆ ನಿರ್ಮಿಸಿ, ಕೊಪ್ಪಳ ಜಿಲ್ಲೆಯ ಕೀರ್ತಿ ತರುವಲ್ಲಿ ಯಶಸ್ವಿಯಾಗಿ ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪಡೆದುಕೊಂಡಿದ್ದಾರೆ
ಇತ್ತೀಚಿಗೆ ಬೆಂಗಳೂರಿನ ಅಪ್ಪು ಮ್ಯೂಸಿಕ್ ಅಕಾಡೆಮಿ ವತಿಯಿಂದ ಲಲಿತ ಕಲಾ ಆಡಿಟೋರಿಯಂ ಹಾಲ್ ನಲ್ಲಿ ನಡೆದ ಸಾಧನೆಯ ಕೋಗಿಲೆ ಗಳು 2023 24 ಕಾರ್ಯಕ್ರಮದಲ್ಲಿ ಮಾರುತಿ ಇಳಿಗೆರ ರವರು ಪಾಲ್ಗೊಂಡಿದ್ದರು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 70 ಜನ ಕಲಾವಿದರು ನಿರಂತರವಾಗಿ 72 ತಾಸುಗಳ ಕಾಲ ಕನ್ನಡ ಹಿಂದಿ ತೆಲುಗು ಮತ್ತು ಮಲಿಯಾಳಿ ಭಾಷೆಗಳಲ್ಲಿ ಭಕ್ತಿ ಗೀತೆ ಭಾವಗೀತೆ ಜಾನಪದ ಮತ್ತು ಚಲನಚಿತ್ರ ಗೀತೆಗಳು ಪ್ರಸ್ತುತಪಡಿಸಿದರು ಇದರಲ್ಲಿ ಕೊಪ್ಪಳ ಜಿಲ್ಲೆಯಿಂದ ಮಾರುತಿ ಇಳಿಗೇರ್ ರವರು ಭಾಗವಹಿಸಿದ್ದರು ಸದರಿಯವರು ವಿವಿಧ ಸಮಾರಂಭಗಳಲ್ಲಿ ಹಾಡುವುದನ್ನು ಹವ್ಯಾಸ ವಾಗಿಸಿಕೊಂಡಿದ್ದರು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ ನಡೆದಿದ್ದು ಈ ಹಿಂದೆ ತಮಿಳುನಾಡಿನ ಚೆನ್ನೈನಲ್ಲಿ ನಡೆದ ಲಾಂಗೆಸ್ಟ್ ಸಿಂಗಿಂಗ್ ಮ್ಯಾರಥಾನ್ ಸಂದರ್ಭದಲ್ಲಿ 55 ತಾಸುಗಳ ಗಾಯನ ದಾಖಲೆಯನ್ನು ಮುರಿದು ಈಗ ಕರ್ನಾಟಕದ ಕಲಾವಿದರು ಹೊಸದಾಗಿ ನಿರಂತರ 72 ತಾಸ್ ಹಾಡುಗಳನ್ನು ಹಾಡಿ ದಾಖಲೆ ನಿರ್ಮಿಸಿದ್ದಾರೆ ಇದರಲ್ಲಿ ನಮ್ಮ ಕೊಪ್ಪಳದ ಮಾರುತಿ ಇಳಿಗೇರ್ ರವರು ಭಾಗವಹಿಸಿ ಸತತ 72 ತಾಸುಗಳ ನಿರಂತರ ಗಾಯನ ಮಾಡಿ ಯಶಸ್ವಿಯಾಗಿ ಪ್ರಶಂಸ ಪತ್ರ ಮತ್ತು ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸ ಅಭಿನಂದಿಸಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ