ಕುವೆಂಪುರವರು ಕನ್ನಡದ ಧೀಮಂತ ಸಾಹಿತಿ: ಸಿದ್ದರಾಮ ಕಲ್ಮಠ

ಕೊಟ್ಟೂರು ಕೊಟ್ಟೂರೇಶ್ವರ  ಮಹಾ ವಿದ್ಯಾಲಯ ಕೊಟ್ಟೂರು. ಜಗದ ಕವಿ ಯುಗದ ಕವಿ ರಾಷ್ಟ್ರಕವಿ ಕುವೆಂಪು ಸ್ಮರಣೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶುಕ್ರವಾರ ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾಕ್ಟರ್ ನಾಗರಾಜ್ ಮಡಿವಾಳರ ಪ್ರಾಧ್ಯಾಪಕರು ಹಾಗೂ ವಿಶೇಷ ಅಧಿಕಾರಿಗಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಿಂಧನೂರು ಇವರು ಮಾತನಾಡಿ ಕುವೆಂಪು ಅವರ ವಿಚಾರಧಾರೆಗಳು, ಆದರ್ಶಗಳು ಮಾನವೀಯ ಮೌಲ್ಯಗಳು ಅವರು ಸಾರಿದ ಮನುಜ ಮತ ವಿಶ್ವಪಥ ವಿಶ್ವಮಾನವ ಸಂದೇಶ, ಹಾಗೂ ಕುವೆಂಪು ಅವರ ಕನ್ನಡ ಸಾಹಿತ್ಯದ ವಿಚಾರಗಳು ಪ್ರಬುದ್ಧವಾಗಿ ಬೆಳೆದಿವೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾನ್ಯ ಶ್ರೀ ಸಿದ್ದರಾಮ ಕಲ್ಮಠ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರು ಮಾತನಾಡಿ ಕುವೆಂಪುರವರು ಕನ್ನಡದ ಧೀಮಂತ ಸಾಹಿತಿ, ಲೇಖಕರು ಎಲ್ಲಿ ಸೃಷ್ಟಿಯಾದರೆಂದರೆ ಗ್ರಂಥಾಲಯಗಳಲ್ಲಿರುವ ಪುಸ್ತಕಗಳಿಂದ ಹಾಗಾಗಿ ಕನ್ನಡ ಸಾಹಿತ್ಯವು ಅತ್ಯದ್ಭುತವಾದುದು,  ಕುವೆಂಪು ಅವರು ನಿಸರ್ಗ ಪ್ರೇಮಿ, ವೈಚಾರಿಕತೆಯ ಪ್ರಭುದ್ಧ ವಿಚಾರಗಳನ್ನ ತಮ್ಮ ಕನ್ನಡಿಗರಿಗೆ ಹೆಜ್ಜೇನಿನಂತ ರಸೋತ್ಸಾಹ ಸವಿಯನ್ನ, ಮತ್ತು ಆಧ್ಯಾತ್ಮಿಕ ಕಂಪನ್ನ ಕನ್ನಡಿಗರಿಗೆ ತಮ್ಮ ಸಾಹಿತ್ಯದ ಮೂಲಕ ನಾಡಿಗೆ ಮತ್ತು ವಿಶ್ವಕ್ಕೆ ಪಸರಿಸಿದರು.

ವಿಶೇಷ ಉಪನ್ಯಾಸ ನೀಡಿದ ಡಾ. ತಿಪ್ಪೇರುದ್ರ ಸಂಡೂರು ಸಹಾಯಕ ಪ್ರಾಧ್ಯಾಪಕರು ಮಾತನಾಡಿ ಕುವೆಂಪು ಅವರ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು  ಅವರ ವಿಚಾರ ಕ್ರಾಂತಿಗೆ ಅಹ್ವಾನ ಎಂಬ ವಿಷಯವನ್ನು ಕುರಿತು ಮಾತನಾಡಿದರು,

ಸಾಹಿತ್ಯ ಎಂಬುದು ಸಮಕಾಲೀನ ಸಮಾಜ ತಿದ್ದುವ, ತೀಡುವ ಕೆಲಸವನ್ನು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಮಾಡಿದರು. ಕುವೆಂಪು ಅವರ ಸಾಹಿತ್ಯ ಸಾಹಿತ್ಯದ ಪ್ರೇರಣೆಯಿಂದ ಸಾವಿರಾರು ಕೃತಿಗಳು ಹೊರಹೊಮ್ಮಿವೆ ಹಾಗಾಗಿ ಪ್ರತಿಯೊಬ್ಬ ಕನ್ನಡಿಗರು ಕುವೆಂಪುರವರ ಸಾಹಿತ್ಯಕ ಕೃತಿಗಳನ್ನು ಅಧ್ಯಯನ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಬೇಕೆಂದು ಕರೆ ನೀಡಿದರು. ಹಳೆಗನ್ನಡ ಸಾಹಿತ್ಯಕ್ಕೆ ಪಂಪ ಹೇಗೋ ಹೊಸಗನ್ನಡ ಸಾಹಿತ್ಯಕ್ಕೆ ಕುವೆಂಪು ಅವರು ಯುಗದ ಕವಿಯಾಗಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕನ್ನಡ ಸಾಹಿತ್ಯದ ಅಸ್ಮಿತೆಯನ್ನು ಸಾರಿದರು ಕನ್ನಡಕ್ಕೆ ಹಲವು ಪ್ರಥಮಗಳನ್ನ  ಕೊಟ್ಟವರೆಂದರೆ ಕುವೆಂಪು. ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಾಹಿತಿಗಳಾದ ಶ್ರೀ ಟಿ ಎಂ ಶಂಕ್ರಯ್ಯ ಇವರ ಮಾತನಾಡಿ ಈ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಯಾದ ನಾನು ಈ ಮಹಾವಿದ್ಯಾಲಯ ಉನ್ನತ ಮಟ್ಟಕ್ಕೆ ಬೆಳೆದಿರುವುದನ್ನು ಕಂಡು ನನಗೆ ಸಂತೋಷವಾಗುತ್ತದೆ. ಕಾಲೇಜು ಅನೇಕ ಸಾಹಿತಿಗಳನ್ನು ವಿಜ್ಞಾನಿಗಳನ್ನು ರಾಜಕಾರಣಿಗಳನ್ನ ವಕೀಲರನ್ನ ಸೃಷ್ಟಿಸಿದೆ. ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಸಾಹಿತ್ಯ ಇಡೀ ಕನ್ನಡ ನಾಡಿಗೆ ಶ್ರೀಮಂತ ಸಾಹಿತ್ಯವಾಗಿದೆ ಎಂದು ಹೇಳಿದರು. ಇನ್ನೋರ್ವ ಕಾಲೇಜು ಹಳೇ ವಿದ್ಯಾರ್ಥಿ ಟಿ ಎಂ ಗಿರೀಶ್. ಹಾಗೂ ಡಿ ನಾಗನಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಿ ಎಸ್ ಶಿವಮೂರ್ತಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ ಎಂ ರವಿಕುಮಾರ್ ಹಾಗೂ ಪದವಿಪೂರ್ವ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಇದ್ದರು ಮತ್ತು ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ಅಡಿಕೆ ಮಂಜುನಾಥಯ್ಯ.ಎಂ ಮಂಜುನಾಥ್ ಮಠಪತಿ, ಕೋರಿ ಶೆಟ್ರು ಬಸವರಾಜ , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರೀಮತಿ ಶೀಲಾವತಿ ಮಹದೇವಯ್ಯ, ಉಪನ್ಯಾಸಕರಾದ ಟಿ ರೇವಣ್ಣ ಸ್ವಾಗತಿಸಿದರು, ಹಾಗೂ ಕೆ ಎಂ ಪ್ರಭಾಕರ ವಂದಿಸಿದರೆ, ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ