"ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಒಂದೇ ಕಾನೂನು"
ಕೊಟ್ಟೂರು ತಾಲೂಕಿನ ನಿಂಬಳಗೇರಿ ಗ್ರಾಮದ ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೫ನೇ ಗಣರಾಜ್ಯೋತ್ಸವವನ್ನು ರಾಷ್ಟಿçÃಯ ಭಾವೈಕ್ಯತೆಯನ್ನು ಮೂಡಿಸುವ ನೃತ್ಯ ರೂಪಕಗಳೊಂದಿಗೆ ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಧ್ವಜರೋಹಣವನ್ನು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಎಂ.ಪಿ. ರಾಜಶಖರ್‌ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್. ವೀರಣ್ಣ ವಹಿಸಿ ಮಾತನಾಡಿ ಸಂವಿಧಾನದಡಿಯಲ್ಲಿಸಮಾನತೆ ಬಗ್ಗೆ ಹೇಳುತ್ತಾ ಸಾಮಾನ್ಯರಿಗೂ ಹಾಗೂ ಪ್ರಧಾನ ಮಂತ್ರಿಗಳಿಗೂ ಒಂದೇ ಕಾನೂನು ಪೇಪರ್ ಮಾರುವೊಬ್ಬಸಾಮಾನ್ಯ ವ್ಯಕ್ತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟçಪತಿಯಾಗಿದ್ದು ,ಚಹ ಮಾರುವೊಬ್ಬಸಾಮಾನ್ಯ ವ್ಯಕ್ತಿಯು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿದ್ದು , ಟ್ಯೂಷನ್ ಮಾಡುವೊಬ್ಬಸಾಮಾನ್ಯ ವ್ಯಕ್ತಿ ಪ್ರದೀಪ್‌ಈಶ್ವರ್ ಶಾಸಕರಾಗಿದ್ದು ಸಮಾನತೆಯೇ ಸಾಕ್ಷಿ ಎಂದು ಇಂತಹ ಅನೇಕ ನಿದರ್ಶನಗಳು ಸಾಕ್ಷಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಗ್ರಾಮ ಪಂಚಾಯಿತಿಉಪಾಧ್ಯಕ್ಷರಾದ ಶ್ರೀಮತಿ ಮಂಗಳಮ್ಮ ಮಾಜಿ ಅಧ್ಯಕ್ಷರು ಗಂಗಮ್ಮ, ಮಹಾಂತೇಶ್, ವಿ.ಎಸ್.ಎಸ್.ಎನ್. ಮಾಜಿ ಅಧ್ಯಕ್ಷರಾದ ಎನ್.ಜಿ.ಚನ್ನಬಸವನಗೌಡ್ರು ,ಶಾಲೆಯ ಮುಖ್ಯ ಶಿಕ್ಷಕಿ ಕೆ. ಶಿವಲೀಲಾ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂ ಸರ್ವಸದಸ್ಯರು ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕೆ. ನಾಗರಾಜ ಶಿಕ್ಷಕರು ನೆರವೇರಿಸಿದರು. ಸ್ವಾಗತವನ್ನು ಹೆ.ಎಸ್.ಪರಶುರಾಮ ಶಿಕ್ಷಕರು ನೆರವೇರಿಸಿದರು. ಪ್ರಾರ್ಥನೆಯನ್ನು ಕುಮಾರಿ ಎಂ.ಜಿ. ಕೃಪಾಶ್ರೀ ಸಂಘಡಿಗರು ನೆರವೇರಿಸಿದರು. ರೇಖಾ ಶಿಕ್ಷಕಿ ವಂದನಾರ್ಪಣೆಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ