ಅಕ್ಷರ ಕ್ರಾಂತಿ ಮಾಡಿದ ಸಾವಿತ್ರಿಭಾಯಿ ಫುಲೆ

ಕೊಟ್ಟೂರು:(kottutu news)  ಮೌಢ್ಯತೆಯಿಂದ ನಲುಗಿದ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿದ ಶ್ರೇಯಸ್ಸು ಸಾವಿತ್ರಿ ಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗಚ್ಚಿನಮಠ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದಿಂದ ಶನಿವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಾವಿತ್ರಿಬಾಯಿ ಫುಲೆ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ ಹಾಗೂ ಜಾತಿ ನಿರ್ಮೂಲನೆ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗೋಸ್ಕರ ಶಾಲೆಗಳನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಾಗಾಗಿ ಮಹಿಳೆಯರಿಗೆ ಇವರ ವ್ಯಕ್ತಿತ್ವ ಮಾದರಿಯಾಗಿದೆ ಎಂದರು.

ಶಿಕ್ಷಕಿ ಎಸ್.ಎಂ.ನಳಿನಿ ಉಪನ್ಯಾಸ ನೀಡಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ತಮ್ಮ ಜಾಣ್ಮೆಯನ್ನು ತೋರಿ ಕುಟುಂಬ ಹಾಗೂ ವೃತ್ತಿಯಲ್ಲಿ ಸಮತೋಲನ ಕಾಪಾಡಿಕೊಂಡು ತಮ್ಮ ನೈಪುಣ್ಯತೆಯನ್ನು ತೋರುತ್ತಿದ್ದಾರೆ ಎಂದರು.

ಸಾವಿತ್ರಿಭಾಯಿ ಫುಲೆ ಸಂಘದ ತಾಲ್ಲೂಕು ಘಟಕಾಧ್ಯಕ್ಷೆ ಶೈಲಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾವಿತ್ರಿಭಾಯಿ ಫುಲೆ ಅವರ ಆದರ್ಶಗುಣಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಬೇಕೆಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕಾಧ್ಯಕ್ಷ ಸಿದ್ದಪ್ಪ, ಬಿಆರ್ ಪಿ ಎನ್.ಎಂ.ಬಸವರಾಜ್ ಹಾಗೂ ರವೀಂದ್ರ ಮಾತನಾಡಿದರು. ಪಟ್ಟಣ ಪಂಚಾಯ್ತಿ ಸದಸ್ಯ ಕೊಟ್ರೇಶ್, ಇಸಿಒ ನಿಂಗಪ್ಪ, ಮಂಜುನಾಥ್, ಚನ್ನೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮುತ್ತೇಶ್, ಮರುಳನಗೌಡ, ಕೆ.ಶಶಿಕಲಾ, ಗಂಗಮ್ಮ ಹಾಗೂ ಎಲ್.ಎಂ.ಕೊಟ್ರಮ್ಮ, ಉಮಾದೇವಿ, ಬಸಮ್ಮ, ಕೆ,ಶಾರದ, ಅನುಪಮ, ಪದ್ಮಾವತಿ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ