*ರಾಮಲಲ್ಲಾ ಮಂಡಲೋತ್ಸವ ಪೂಜೆಗೆ ವೇ.ಮೂ.ಶ್ರೀಧರಸ್ವಾಮಿ ಹಿರೇಮಠ ಆಯ್ಕೆ*

*ಮಸ್ಕಿ:-* ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಂತರ 48 ದಿನಗಳ ಕಾಲ ಜರುಗುವ ವೀರಶೈವಾಗಮ ಪದ್ಧತಿಯ ಮಂಡಲೋತ್ಸವ ಮಹಾಪೂಜೆಯಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಪುರಸ್ಕೃತ ವೇ.ಮೂ.ಶ್ರೀಧರಸ್ವಾಮಿ ಹಿರೇಮಠ ಹಸಮಕಲ್ ಇವರಿಗೆ ಪಾಲ್ಗೊಳ್ಳುವ ಅವಕಾಶ ಲಭಿಸಿದೆ. 

ಅಯೋಧ್ಯೆಯಲ್ಲಿ ನಡೆಯುವ ಮಂಡ ಲೋತ್ಸವದ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀಧರಸ್ವಾಮಿ, ಜಿಲ್ಲೆಯಿಂದ ಆಯ್ಕೆಯಾದ ಮೊದಲಿಗರಾಗಿದ್ದಾರೆ. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕುರಿತಂತೆ ಈಗಾಗಲೇ ಅಧಿಕೃತ ಮಾಹಿತಿ ದೊರೆತಿದ್ದು, ನಿಗದಿತ ದಿನದಂದು ಅಯೋಧ್ಯೆಗೆ ತೆರಳುವುದಾಗಿ ಶ್ರೀಧರಸ್ವಾಮಿ ತಿಳಿಸಿದ್ದಾರೆ. 

ಭವ್ಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಸಂತಸ ಮೂಡಿಸಿದೆ ಎಂದಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*