"ರಥೋತ್ಸವಕ್ಕೂ ಮುನ್ನ ಮಹೇಶ್ವರ ಸ್ವಾಮಿಗೆ ನೈವೇದ್ಯ: ಒಂದು ವರ್ಷದವರೆಗೂ ಕೆಡದೆ ಇರುವ ಪ್ರಸಾದ "
ಉಜ್ಜನಿ ಸದ್ಧರ್ಮ ಪೀಠದ ಜಗದ್ಗುರುಗಳ ಅಡ್ಡ ಪಲಕ್ಕಿ ಮಹೋತ್ಸವವನ್ನು ವೈಭವದಿಂದ ನಡೆಯಿತು.
ಕೊಟ್ಟೂರು: ಉಜ್ಜಿನಿ ಸಮೀಪದ ಮಂಗಾಪುರ ಗ್ರಾಮದಲ್ಲಿ ಶ್ರೀ ಮಹೇಶ್ವರ ಸ್ವಾಮಿ ರಥೋತ್ಸವ ಹಾಗೂ ಉಜ್ಜನಿ ಸದ್ಧರ್ಮ ಪೀಠದ ಜಗದ್ಗುರುಗಳ ಅಡ್ಡ ಪಲಕ್ಕಿ ಮಹೋತ್ಸವವನ್ನು ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಪ್ರತಿ ವರ್ಷ ನಡೆಯುವ ಮಹೇಶ್ವರ ಸ್ವಾಮಿಯ ರಥೋತ್ಸವವನ್ನು ಇಲ್ಲಿನ ಭಕ್ತ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ರಥೋತ್ಸವಕ್ಕೂ ಮುನ್ನ ಗ್ರಾಮದ ಹೊರ ವಲಯದಲ್ಲಿರುವ ಮಹೇಶ್ವರ ಸ್ವಾಮಿ ಗದ್ದುಗೆ ಬಳಿ ಮಹೇಶ್ವರ ಸ್ವಾಮಿಗೆ ನೈವೇದ್ಯ ಮಾಡಿದ ಪ್ರಸಾದವನ್ನು ಐದು ಜನ ಸ್ವಾಮಿಗಳು ಸೇರಿ ವಿಧಿ ವಿಧಾನಗಳ ಮೂಲಕ ಹೊಸ ಮಣ್ಣಿನ ಮಡಿಕೆಯಲ್ಲಿಟ್ಟು ಪೂಜೆ ನೆರವೇರಿಸಿ ನೆಲದಲ್ಲಿ ಮುಚ್ಚುತ್ತಾರೆ.
ಈ ಪ್ರಸಾದ ಒಂದು ವರ್ಷದವರೆಗೂ ಕೆಡದೆ ಇರುತ್ತದೆ. ಇದು ಭಕ್ತರ ನಂಬಿಕೆಯಾಗಿದ್ದು, ಅದು ಚಾಚು ತಪ್ಪದೆ ನಡೆದುಕೊಂಡು ಬರುತ್ತಿದೆ. ಈ ವರ್ಷ ಇಟ್ಟ ಪ್ರಸಾದ ಮಡಿಕೆಯನ್ನು ಮುಂದಿನ ರಥೋತ್ಸವ ದಿನದಂದು ತೆಗೆಯುತ್ತಾರೆ. ಅಗ ಪ್ರಸಾದ ಕೆಡದೆ ಇದ್ದರೆ ಗ್ರಾಮಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಭಾವಿಸುತ್ತಾರೆ.
ಜಾತ್ರೆಯ ಅಂಗವಾಗಿ ನಡೆಯುವ ಪ್ರಸಾದ ಅನ್ನ, ಬೆಲ್ಲ ಮತ್ತು ಬಾಳೆ ಹಣ್ಣು ಮಾತ್ರ ಇರುತ್ತದೆ. ಇವೆಲ್ಲವನ್ನು ಕಲಿಸಿಕೊಂಡು ಊಟ ಮಾಡಬೇಕು. ನಂತರ ಮಧ್ಯಾಹ್ನ ಶ್ರೀ ಮದ್ ಉಜ್ಜಯಿನಿ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1108 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ನಂತರ ಸಂಜೆ ನೂತನವಾಗಿ ನಿರ್ಮಾಣ ಮಾಡಿರುವ ರಥಕ್ಕೆ ಉಜ್ಜಯಿನಿ ಜಗದ್ಗುರುಗಳು ಚಾಲನೆ ನೀಡಿದರು. ಬಾಳೆ ಕಂಬ, ತೆಂಗಿನ ಕಾತಿ ಗೊಂಚಲು, ಹೂವಿನ ಅಲಂಕಾರ ಮಾಡಿದ್ದ ನೂತನ ರಥವನ್ನು ಸಕಲ ವಾಧ್ಯಗಳೊಂದಿಗೆ ಭಕ್ತರು ಪಾದಗಟ್ಟೆಯವರೆಹೂ ಎಳೆದುಕೊಂಡು ಮರಳಿ ನೆಲೆ ನಿಲ್ಲಿಸಿದರು.
ಉಜ್ಜಿನಿ ಸಮೀಪದ ಮಂಗಾಪುರ ಗ್ರಾಮದಲ್ಲಿ ಬುಧವಾರ ಶ್ರೀ ಮದ್ ಉಜ್ಜಯಿನಿ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1108 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ